Friday, December 27, 2024

ಕ್ರಿಕೆಟ್ ಫಿಕ್ಸಿಂಗ್ ಆಮಿಷವೊಡ್ಡಿ ಅಂದರ್ ಆದ ಆರೋಪಿ

ಬೆಂಗಳೂರು: ವಂಚನೆಗೆ ಜನ ಏನೇನು ಹೊಸ ಹೊಸ ಟ್ರಿಕ್​ಗಳನ್ನು ಹುಡುಕುತ್ತಾರೆ ಎಂಬುದಕ್ಕೆ ಈ ಸುದ್ದಿಯೇ ಸಾಕ್ಷಿ. ಹಣಗಳಿಸಲು ವಂಚಕನೊಬ್ಬ ಕ್ರಿಕೆಟಿಗನಿಗೆ TNPL ನಲ್ಲಿ ಫಿಕ್ಸಿಂಗ್​ನಲ್ಲಿ ಭಾಗಿಯಾಗುವಂತೆ ಆಮಿಷವೊಡ್ಡಿ, ಇದೀಗ ತಾನೇ ತೊಡಿದ ಖೆಡ್ಡಾದಲ್ಲಿ ತಾನೇ ಬಿದ್ದಿದ್ದಾನೆ.

ಕ್ರಿಕೆಟಿಗ ರಾಜಗೋಪಾಲ್ ಸತೀಶ್ ಗೆ ಸ್ಪಾಟ್ ಫಿಕ್ಸಿಂಗ್ ಆಮೀಷ ಪ್ರಕರಣದಲ್ಲಿ ಜಯನಗರ ಠಾಣಾ ಪೊಲೀಸರಿಂದ ಆರೋಪಿ ಆನಂದ್ ಕುಮಾರ್ ಎಂಬುವನ ಬಂಧನವಾಗಿದೆ. ತಮಿಳುನಾಡು‌ ಕ್ರಿಕೆಟಿಗ ಸತೀಶ್ ಗೆ ಇನ್ಸ್ಟಾಗ್ರಾಂ ಮೂಲಕ TNPLನ ಸ್ಪಾಟ್ ಫಿಕ್ಸಿಂಗ್​ನಲ್ಲಿ ಭಾಗವಹಿಸುವಂತೆ ಸಂದೇಶ ರವಾನಿಸಿದ್ದ ಆರೋಪಿ. ತಾನು ಹೇಳಿದಂತೆ ಕೇಳಿದ್ರೆ ಪ್ರತೀ ಪಂದ್ಯಕ್ಕೆ 40 ಲಕ್ಷ ನೀಡುವುದಾಗಿ ಹೇಳಿದ್ದ.  ಆಗ ಸತೀಶ್ ತಕ್ಷಣ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಮಾಹಿತಿ ನೀಡಿದ್ದರು. ನಂತರ ಬಿಸಿಸಿಐ ಸೌತ್ ಆ್ಯಂಟಿ‌ ಕರೆಪ್ಷನ್ ಯೂನಿಟ್ ಗೆ ಮಾಹಿತಿ ನೀಡಿತ್ತು. ಅದರನ್ವಯ ಜಯನಗರ ಠಾಣೆಗೆ ದೂರು ನೀಡಿದ್ದ ಸೌತ್ ಆ್ಯಂಟಿ‌ ಕರೆಪ್ಷನ್ ಯೂನಿಟ್.
ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಸಿದ್ದಾರೆ.

ಸಾಲದ ತೀರಿಸಲು ಅಡ್ಡ ದಾರಿ ಹಿಡಿದು ಅಂದರ್ ಆದ ಆರೋಪಿ ಬಾಗೇಪಲ್ಲಿ‌ ಮೂಲದ ಆನಂದ್ ಕುಮಾರ್ ಅಲಿಯಾಸ್ ಬನ್ನಿ ಆನಂದ್. 9 ವರ್ಷಗಳ ಹಿಂದೆ ತಂದೆ ತೀರಿಕೊಂಡಿದ್ದು ತಾಯಿ ಜೊತೆ ವಾಸವಿದ್ದ. ಡಿಲೆವರಿ ಬಾಯ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಆರೋಪಿ, ಅತಿಯಾಗಿ ಫ್ಯಾಂಟಸಿ ಕ್ರಿಕೆಟ್ ಆಡುವ ಶೋಕಿ ಹೊಂದಿದ್ದ. 4-5 ಲಕ್ಷ ಸಾಲ ಮಾಡಿಕೊಂಡು ಹೈರಾಣಾಗಿದ್ದ.

ಸಾಲ ತೀರಿಸಲು ಕ್ರಿಕೆಟಿಗರನ್ನ ಬ್ಲ್ಯಾಕ್ ಮೇಲ್ ಮಾಡಿ ವಂಚಿಸುವ ಯೋಚನೆ ಮಾಡಿದ್ದ ಆರೋಪಿ. ಯೂಟ್ಯೂಬ್ ನಲ್ಲಿ ಕ್ರಿಕೆಟಿಗರನ್ನ ವಂಚಿಸುವುದು ಹೇಗೆ ಎಂದು ತಡಕಾಡಿದ್ದ. ಕ್ರಿಕೆಟಿಗರಿಗೆ ಇನ್ಸ್ಟಾ ಮೂಲಕ ಫಿಕ್ಸಿಂಗ್ ಆಮೀಷವೊಡ್ಡುವುದು. ಪ್ರತಿಕ್ರಿಯಿಸಿದ್ರೆ ಸ್ಕ್ರೀನ್ ಶಾಟ್ ತೆಗೆದು ಬ್ಲ್ಯಾಕ್ ಮೇಲ್ ಮಾಡಿ ಹಣ ವಸೂಲಿ ಮಾಡಲು ಪ್ಲ್ಯಾನ್ ಮಾಡಿದ್ದ. ಅದೇ ರೀತಿ 4-5 ಆಟಗಾರರಿಗೆ ಇನ್ಸ್ಟಾಗ್ರಾಂ ಮೆಸೆಜ್ ಕಳಿಸಿದ್ದ ಆರೋಪಿ ಕಡೆಗೆ ಸತೀಶ್​ಗೆ ಮೆಸೇಜ್ ಮಾಡಿ ಸಿಕ್ಕಿಬಿದ್ದಿದ್ದಾನೆ.

ಓಂಪ್ರಕಾಶ್ ನಾಯಕ್, ಪವರ್ ಟಿವಿ

RELATED ARTICLES

Related Articles

TRENDING ARTICLES