ಮಂಡ್ಯ : ನೀರು ಮಿಶ್ರಣ ಬಳಿಕ ರಾಸಾಯನಿಕ ಬೆರಕೆ ಮಾಡಿದ ಘಟನೆ ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆಯಲ್ಲಿರುವ ಹಾಲಿನ ಡೈರಿಯಲ್ಲಿ ಕಂಡುಬಂದಿದೆ.
ಕಳೆದ ವರ್ಷವಷ್ಟೇ ಬೆಳಕಿಗೆ ಬಂದಿದ್ದ ಹಾಲಿಗೆ ನೀರು ಮಿಶ್ರಣ ಹಗರಣ ಕಂಡುಬಂದಿದ್ದು,ನೀರು ಮಿಶ್ರಣ ಪ್ರಕರಣ ತನಿಖೆಯಲ್ಲಿರುವಾಗಲೇ ಮತ್ತೊಂದು ಹಗರಣ ಬೆಳಕಿಗೆ ಬಂದಿದೆ.ಪರೀಕ್ಷೆಯಲ್ಲಿ ಹಾಲಿನ ಗುಣಮಟ್ಟ ತೋರಿಸಲು ರಾಸಾಯನಿಕ ಬೆರಕೆ ಮಾಡಲಾಗಿದ್ದು,ಉಪ್ಪಿನಾಂಶದ ರಾಸಾಯನಿಕ ಕಲಬೆರಕೆಯನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಕೆ.ಹೊನ್ನಲಗೆರೆ ಡೈರಿಯಿಂದ ಪೂರೈಕೆಯಾಗುತ್ತಿದ್ದ ಹಾಲಿನಲ್ಲಿ ರಾಸಾಯನಿಕ ಮಿಶ್ರಣ ಕಂಡುಬಂದಿದ್ದು, ನಿತ್ಯ 35 ಕ್ಯಾನ್ ಹಾಲು ಸರಬರಾಜು ಮಾಡುತ್ತಿದ್ದ ಕೆ.ಹೊನ್ನಲಗೆರೆ ಡೈರಿಯಲ್ಲಿ ಹಾಲು ಶೇಖರಣೆಯನ್ನು ಮನ್ಮುಲ್, ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಸ್ಥಗಿತಗೊಳಿಸಿದೆ.