Friday, January 10, 2025

ಬರಲಿದೆ ಮತ್ತೊಂದು ದೀರ್ಘ ಅವಧಿಯ ಹಾಲಿವುಡ್ ಚಿತ್ರ ‘ದಿ ಬ್ಯಾಟ್​ಮ್ಯಾನ್’

ಅಮೇರಿಕ:  ಹಾಲಿವುಡ್​ನ ಬ್ಲಾಕ್​ಬಸ್ಟರ್ ಚಿತ್ರಗಳಲ್ಲಿ ಒಂದಾದ ಬ್ಯಾಟ್​ಮ್ಯಾನ್ ಚಿತ್ರವನ್ನು ನೀವೆಲ್ಲ ನೋಡಿರಬಹುದು. ಇದೀಗ ಅದರ ಮತ್ತೊಂದು ಭಾಗ ತೆರೆಗೆ ಬರಲು ಸಿದ್ದವಾಗಿದೆ. ರಾಬರ್ಟ್​ ಪ್ಯಾಟಿಸನ್ ಬ್ಯಾಟ್​ಮ್ಯಾನ್ ಟೈಟಲ್ ರೋಲ್​ನಲ್ಲಿ ಅಭಿನಯಿಸುತ್ತಿರುವ ಈ ಚಿತ್ರವನ್ನು ಮಟ್ ರಿವಿಸ್ ನಿರ್ಮಿಸಿದ್ದಾರೆ. ಈ ಚಿತ್ರ ಹಾಲಿವುಡ್ ಚಿತ್ರಗಳಲ್ಲೇ ಎರಡನೇ ಅತ್ಯಂತ ದೀರ್ಘ ಅವಧಿಯ ಚಿತ್ರವೆನಿಸಿಕೊಂಡಿದೆ.

2 ಗಂಟೆ 55 ನಿಮಿಷಗಳ ಈ ಚಿತ್ರಕ್ಕೆ MPAA ಪೇರೆಂಟಿಯಲ್ ಗೈಡೆನ್ಸ್ PG-13 ಶ್ರೇಯಾಂಕ ನೀಡಿದೆ. ಅವೆಂಜರ್ಸ್ ಎಂಡ್ ಗೇಮ್ ಚಿತ್ರವು 3 ಗಂಟೆ 1 ನಿಮಿಷಗಳಷ್ಟು ದೀರ್ಘಕಾಲದ್ದಾಗಿತ್ತು. ಇದೀಗ ಅದನ್ನು ಹಿಂಬಾಲಿಸಿರುವ ಬ್ಯಾಟ್​ಮ್ಯಾನ್ 2 ಗಂಟೆ 55 ನಿಮಿಷಗಳಷ್ಟು ದೀರ್ಘ ಅವಧಿಯ ಚಿತ್ರವೆನಿಸಿಕೊಂಡಿದೆ. ಇದೇ ವರ್ಷ ಮಾರ್ಚ್​ 4ರಂದು ಈ ಚಿತ್ರ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ.

RELATED ARTICLES

Related Articles

TRENDING ARTICLES