Monday, December 23, 2024

ಧಗಧಗ ಹೊತ್ತಿ ಉರಿದ BMTC ಬಸ್

ಬೆಂಗಳೂರು : ಬೆಂಗಳೂರಿನಲ್ಲಿ BMTC ಬಸ್ಸೊಂದು ಧಗಧಗನೆ ಹೊತ್ತಿ ಉರಿದ ಘಟನೆ ನಡೆದಿದೆ. ತಾಂತ್ರಿಕ ದೋಷದಿಂದ ಬಸ್‌ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿತು ಎನ್ನಲಾಗಿದೆ. ಸುದೈವವಶಾತ್ ಬಿಎಂಟಿಸಿ ಬಸ್‌ನಲ್ಲಿದ್ದ ಎಲ್ಲಾ 40 ಪ್ರಯಾಣಿಕರು ಬಚಾವ್‌ ಆಗಿದ್ದಾರೆ.

ಚಾಮರಾಜಪೇಟೆಯ ಮಕ್ಕಳ ಕೂಟ ಬಳಿ ಘಟನೆ ನಡೆದಿದ್ದು, ಈ ಬಸ್ಸು ದೀಪಾಂಜಲಿನಗರ ಡಿಪೋಗೆ ಸೇರಿದ್ದು ಎಂದು ತಿಳಿದುಬಂದಿದೆ. ಲಾಸ್ಟ್​​ ಟ್ರಿಪ್​​ಗೆ ಹೋಗ್ತಿದ್ದಾಗ ಬಸ್​​ನಲ್ಲಿ ಕಾಣಿಸಿಕೊಂಡ ಬೆಂಕಿ ಕಾಣಿಸಿಕೊಂಡು ನೋಡನೋಡುತ್ತಿದ್ದಂತೆಯೇ ಧಗಧಗನೆ ಹೊತ್ತಿ ಉರಿದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ KA-57, F-1592 ಸಂಖ್ಯೆಯ ಈ BMTC ಬಸ್ ಹೊಸಕೆರೆಹಳ್ಳಿಯಿಂದ K.R.ಮಾರುಕಟ್ಟೆಗೆ ಬರುವಾಗ ಈ ಘಟನೆ ನಡೆದಿದೆ.

ಬೆಂಕಿ ಕಾಣಿಸಿಕೊಂಡ ತಕ್ಷಣ ಕಾರ್ಯ ಪ್ರವೃತ್ತರಾದ ಚಾಲಕ ಹಾಗೂ ನಿರ್ವಾಹಕ ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಕಾರ್ಯಕ್ಷಮತೆ ಮೆರೆದಿದ್ದಾರೆ. ಅದರ ಜೊತೆಗೆ ಪ್ರಯಾಣಿಕರನ್ನ ಕೆಳಗಿಳಿಸಿ ಬೇರೆ ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ. ಬಸ್​ನಲ್ಲಿದ್ದ ಫಸ್ಟ್ ಏಡ್, ಟಿಕೆಟ್ ಹಾಗೂ ದಿನದ ಪಾಸ್​ಗಳು ಕೂಡಾ ಬೆಂಕಿಗೆ ಆಹುತಿಯಾಗಿವೆ.

RELATED ARTICLES

Related Articles

TRENDING ARTICLES