ನವದೆಹಲಿ: ದೆಹಲಿ ಪೊಲೀಸರು ತಿಹಾರದ ರೋಹಿಣಿ ಜೈಲಿನ 7 ಸಿಬ್ಬಂದಿಗಳನ್ನು ಭ್ರಷ್ಟಾಚಾರದ ಕಾನೂನಿನಡಿ ಬಂಧಿಸಿದ್ದಾರೆ. ಇದಿಷ್ಟೇ ಅಲ್ಲದೆ ಜೈಲಿನ 82 ಸಿಬ್ಬಂದಿಗಳ ವಿರುದ್ಧ ವಿಚಾರಣೆ ನಡೆಸಲು ನಿರ್ಧರಿಸಿದ್ದಾರೆ. ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್ನಿಗೆ ಸಹಾಯ ಮಾಡಲು ಅವನಿಂದ 200 ಕೋಟಿ ರೂಪಾಯಿಗಳಷ್ಟು ಭಾರಿ ಹಣವನ್ನು ಪಡೆದಿರುವ ಬಗ್ಗೆ ಈಗ ವಿಚಾರಣೆ ನಡೆದಿದೆ.
ದೆಹಲಿ ಪೊಲೀಸ್ನ ಆರ್ಥಿಕ ಅಪರಾಧ ದಳವು ಈ ಭಾರಿ ಭ್ರಷ್ಟಾಚಾರದ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದು, ಪ್ರಿವೆಂಶನ್ ಆಫ್ ಕರಪ್ಷನ್ ಆಕ್ಟ್ ಕಾನೂನಿನಡಿ ಪ್ರಕರಣ ದಾಖಲಿಸಿದ್ದಾರೆ. 2021ರ ಅಗಸ್ಟ್ 7 ರ ಈ ಪ್ರಕರಣ 170/ 384/ 386/ 388/ 419/ 420 ಹೀಗೆ ಹಲವು ಕಲಮುಗಳ ಅಡಿಯಲ್ಲಿ ವಿಚಾರಣೆ ನಡೆದಿದೆ.