Wednesday, January 22, 2025

ಫೆಬ್ರವರಿ 1ರಿಂದ ನಾನೇ ಅಧ್ಯಕ್ಷ- ನಲ​ಪಾಡ್

ಬೆಂಗಳೂರು: ಸಿದ್ದು ಹೊಳ್ಳೆಗೌಡರ ಮೇಲಿನ ಹಲ್ಲೆಯ ವಿಚಾರವಾಗಿ ತಮ್ಮ ಮೇಲೆ ಬಂದಿರುವ ಆರೋಪಕ್ಕೆ ಉತ್ತರವಾಗಿ ಮಹಮ್ಮದ್ ನಲಪಾಡ್ ಹೇಳಿಕೆಯೊಂದನ್ನು ನೀಡಿದ್ದಾರೆ. ಅದರಲ್ಲಿ ಅವರು ತಾವು ಹಾಗೂ ಸಿದ್ದು ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ.
ನನ್ನ ಕೆಲವರ ಮೇಲೆ ಅನುಮಾನವಿದೆ. ನನಗೆ ರಕ್ಷಾ ರಾಮಯ್ಯ, ಮಂಜುನಾಥಗೌಡ ಜೊತೆ ಒಳ್ಳೆಯ ಸ್ನೇಹವಿದೆ‌.
ಮೊದಲಿಂದಲೂ ನಾವು ಉತ್ತಮ ಸ್ನೇಹಿತರು. ಒಂದೇ ಪಕ್ಷದಲ್ಲಿ ಇದ್ದೇವೆ. ನನಗೂ ,ಸಿದ್ದುಗೂ ಯಾವುದೇ ಸಮಸ್ಯೆಯಿಲ್ಲ. ಹಲ್ಲೆಯ ಯಾವುದೇ ಘಟನಯೇ ನಡೆದಿಲ್ಲ ಎಂದು ನಲ್ಪಾಡ್ ಹೇಳಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಈ ರೀತಿ ಸುದ್ದಿ ಬರ್ತಾ ಇದೆ. ನಲಪಾಡ್ ಗೆ ಅಧ್ಯಕ್ಷ ಸ್ಥಾನ ಸಿಗುತ್ತೋ, ಸಿಗಲ್ಲವೋ ಎಂಬ ಗೊಂದಲದಲ್ಲಿ ಹಲವರಿದ್ದಾರೆ. ಅವರಿಗೆ ಗೊತ್ತಿರಲಿ, ಜನವರಿ 30 ರಕ್ಷಾ ರಾಮಯ್ಯ ಅವರ ಅಧಿಕಾರಾವಧಿ ಮುಗಿಯುತ್ತೆ. ಪೆಬ್ರವರಿ ಒಂದನೇ ತಾರೀಖಿನಿಂದ ನಾನೇ ಅಧ್ಯಕ್ಷ” ಎಂದು ನಲ್ಪಾಡ್ ಬಿಂದಾಸ್ ಆಗಿ ಹೇಳಿಕೆಯನ್ನು ನೀಡಿದ್ದಾರೆ.

RELATED ARTICLES

Related Articles

TRENDING ARTICLES