Monday, December 23, 2024

ಹಲ್ಲೆ ಆರೋಪದಲ್ಲಿ ಮತ್ತೆ ನಲ್ಪಾಡ್ ಹೆಸರು

ಕಾಂಗ್ರೆಸ್​ನಲ್ಲಿ ಆಗಾಗ ಗಲಾಟೆ ಗೂಂಡಾಗಿರಿ ವಿಷಯ ಬಂದರೆ ನೆನಪಾಗೋದು ಹ್ಯಾರಿಸ್ ಮಗ ನಲ್​ಪಾಡ್ ಹೆಸರು. ವಿಧ್ವತ್ ಜೊತೆ ಮಾರಾಮಾರಿ ಕೇಸಿನಲ್ಲಿ ಸ್ವಲ್ಪದರಲ್ಲಿ ಬಚಾವಾದ ನಲ್ಪಾಡ್ ನಂತರ ಬದಲಾಗಿದ್ದಾರೆ ಎಂದುಕೊಂಡವರಿಗೆ ಇದೀಗ ಮತ್ತೆ ನಲ್ಪಾಡ್ ದುಂಡಾವರ್ತನೆಯ ಸುದ್ದಿ ಯೋಚಿಸುವಂತೆ ಮಾಡಿದೆ.

ಬಳ್ಳಾರಿ ಯೂತ್​ ಕಾಂಗ್ರೆಸ್​ ಅಧ್ಯಕ್ಷ ಸಿದ್ದು ಹಳ್ಳೆಗೌಡರ ಮೇಲೆ ನಲ್ಪಾಡ್ ಹಾಗೂ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪವನ್ನು ಸ್ವತಃ ಸಿದ್ದು ಹಳ್ಳೇಗೌಡರೆ ಮಾಡಿ, ಅದು ಎಲ್ಲ ಮಾಧ್ಯಮಗಳಲ್ಲೂ ಪ್ರಸಾರವಾದ ಬೆನ್ನಲ್ಲಿ ಇದೀಗ ಕಾಂಗ್ರೆಸ್ ನಾಯಕರಿಗೆ ತಲೆಬಿಸಿ ಶುರುವಾಗಿದೆ.  ರಾತ್ರಿಯ ಪಾರ್ಟಿಯಲ್ಲಿ ಕಾಂಗ್ರೆಸ್ ಯುವನಾಯಕರು ಕುಡಿದು ಮಧ್ಯದ ಅಮಲಿನಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಯೂತ್​ ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ವಿಚಾರವಾಗಿ ತಮಗೆ ಬೆಂಬಲ ನೀಡದ್ದಕ್ಕೆ ನಲಪಾಡ್​ ರೋಷಾವೇಶ ತೋರಿಸಿದ್ದಾರೆ ಎನ್ನಲಾಗಿದೆ.

ಉಪಾಧ್ಯಕ್ಷ ಮಂಜುನಾಥ್​ಗೆ ಸಪೋರ್ಟ್​ ಮಾಡಿದ್ದಕ್ಕೆ ನಲ್ಪಾಡ್ ಸಿದ್ದು ಹಳ್ಳೇಗೌಡನ ಮೇಲೆ ಆಕ್ರೋಷಗೊಂಡು “ಏನೋ ಲೇ ಮಂಜುನಾಥ್​ಗೆ ಸಪೋರ್ಟ್ ಮಾಡ್ತೀಯಾ” ಎಂದು ಆವಾಜ್​ ಹಾಕಿದರು ಎನ್ನಲಾಗಿದೆ. ಬರಿ ಆವಾಜ್ ಹಾಕುವುದಷ್ಟೇ ಅಲ್ಲದೆ ಬಳ್ಳಾರಿ ಯೂತ್​ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆಯನ್ನೂ ಸಹ ನಲ್ಪಾಡ್ ಮಾಡಿದ್ದಾರೆ ಎನ್ನಲಾಗಿದೆ. ಸಿದ್ದು ಹಳ್ಳೇಗೌಡ ಕಾರು ಚಾಲಕನಿಗೂ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಸಿದ್ದು ಹಳ್ಳೇಗೌಡ ಹಾಗೂ ಬೆಂಬಲಿಗರನ್ನ ಮಂಜುನಾಥ್​ಗೌಡ ಪಾರು ಮಾಡಿದ್ದಾರೆ. ಇವೆಲ್ಲ ವಿವರಗಳನ್ನು ಸಿದ್ದು ಹಳ್ಳೇಗೌಡ ತಮ್ಮ ವಾಟ್ಸ್​ ಆ್ಯಪ್​ನಲ್ಲಿ ಶೇರ್​ ಮಾಡಿರುವುದು ಎಲ್ಲೆಡೆ ವೈರಲ್ ಆಗಿದೆ.

ಆದರೆ ನಲ್ಪಾಡ್ ತಾವು ಹಲ್ಲೆ ಮಾಡಿದ ವಿಷಯವನ್ನು ನಿರಾಕರಿಸಿದ್ದಾರೆ. ತಮಗೆ ಅದ್ಯಕ್ಷ ಸ್ಥಾನ ತಪ್ಪಿಸಲು ಈ ರೀತಿ ಶಡ್ಯಂತ್ರ ರಚಿಸಲಾಗುತ್ತಿದೆ. ತಮ್ಮ ಪಕ್ಷದವರೇ ಈ ರೀತಿ ಮಾಡುತ್ತಿರಬಹುದು ಎಂದು ಅವರು ಹೇಳಿಕೆ ನೀಡಿದ್ದಾರೆ. ನಲ್ಪಾಡ್ ಪರವಾಗಿ ಈಶ್ವರ್ ಖಂಡ್ರೆ ಬ್ಯಾಟಿಂಗ್ ಮಾಡಿದ್ದಾರೆ. ಇಂಥದೊಂದು ಗಲಾಟೆ ನಡೆದೆ ಇಲ್ಲ, ಸಿದ್ದು ಹಳ್ಳೇಗೌಡ ಈ ಕುರಿತು ಎಲ್ಲೂ ಕಂಪ್ಲೆಂಟ್ ಮಾಡಿಲ್ಲ ಎಂದು ಅವರು ಹೇಳಿ ನಲ್ಪಾಡ್ ರಕ್ಷಣೆಗೆ ಬಂದಿದ್ದಾರೆ.

ಓಂಪ್ರಕಾಶ್ ನಾಯಕ್, ಪವರ್ ಟಿವಿ

RELATED ARTICLES

Related Articles

TRENDING ARTICLES