Wednesday, January 22, 2025

ಕಾಂಗ್ರೆಸ್ ಪಾದಯಾತ್ರೆ ನಿಲ್ಲಿಸಲು ಕರ್ಫ್ಯೂ ಹೇರಿತ್ತಾ ಸರ್ಕಾರ?

ಕಾಂಗ್ರೆಸ್ ಪಾದಯಾತ್ರೆ ಕಟ್ಟಿಹಾಕಲು, ಸರ್ಕಾರ ಕರೋನ ಟಫ್ ರೂಲ್ಸ್ ಹೇರುವ ಪ್ರಯೋಗ ಮಾಡಲಾಗಿತ್ತ ಎಂಬ ಅನುಮಾನಗಳು ಬಲವಾಗುತ್ತಿವೆ‌. ಯಾಕೆಂದ್ರೆ ಕೊರೋನ 50ಸಾವಿರದ ಗಡಿ ದಾಟಿದ ಇಂಥ ಸಂದರ್ಭದಲ್ಲಿ ಸರ್ಕಾರ ಟಫ್ ರೂಲ್ಸ್ ಸಡಿಲಿಕೆ ಮಾಡಲು ಹೊರಟಿರುವುದು ಅನುಮಾನ ಮೂಡಿಸಿದೆ.

ಕಾಂಗ್ರೆಸ್ ಪಾದಯಾತ್ರೆ ಟಾರ್ಗೆಟ್ ಮಾಡಿತ್ತ ರಾಜ್ಯ ಸರ್ಕಾರ..?; ಇಂದಿಗೆ ಮುಗಿಯಬೇಕಿದ್ದ ಮೇಕೆದಾಟು ಪಾದಯಾತ್ರೆ..!; ಪಾದಯಾತ್ರೆಗೆ ಸಮೀತವಾಗಿ ಜಾರಿಯಾಗಿತ್ತ ಕರೋನ ಟಪ್ ರೂಲ್..!

ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ಪಕ್ಷ ಬೃಹತ್ ಪಾದಯಾತ್ರೆ ಆಯೋಜನೆ ‌ಮಾಡಿತ್ತು. ಕನಕಪುರದ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಬರೋಬ್ಬರಿ ೧೬೯ ಕಿಲೋಮೀಟರ್ ಸಾಗಿ ಬರುವುದಿತ್ತು. ಇನ್ನೇನು ಜನವರಿ ಒಬ್ಬತ್ತರಂದು ಪಾದಯಾತ್ರೆ ಆರಂಭ ಮಾಡುತ್ತೇವೆ ಅಂತ ಕಾಂಗ್ರೆಸ್ ನಾಯಕರು ಎಲ್ಲ ತಯಾರಿ ‌ಮಾಡಿಕೊಂಡಿದ್ರು. ಅದೆ ಸಂದರ್ಭದಲ್ಲಿ ರಾಜ್ಯ ಸರ್ಕಾರಕ್ಕೆ ಎದೆ ಬಡಿತ ಜೊರಾಯ್ತು. ಕಾಂಗ್ರೆಸ್ ಪಾದಯಾತ್ರೆ ಮೇಲೆ ಸಚಿವರು ಹಾಗೂ ಬಿಜೆಪಿ ನಾಯಕರು ‌ಮುಗಿ ಬಿಳಲು ಶುರು ಮಾಡಿಕೊಂಡ್ರು. ಆರೋಗ್ಯ ಸಚಿವ ಸುಧಾಕರ್ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕೊವೀಡ್ ಮೂರನೆ ಅಲೆ ಪ್ರಾರಂಭವಾಗಿದೆ. ಕಾಂಗ್ರೆಸ್ ಪಾದಯಾತ್ರೆ ಕೈ ಬಿಡುವಂತೆ ಮನವಿ ಮಾಡಿದ್ರು. ಅಲ್ಲದೆ ಪಾದಯಾತ್ರೆಯಿಂದ ಸೋಂಕು ಉಲ್ಬಣವಾದ್ರೆ ಕಾಂಗ್ರೆಸ್ ನಾಯಕರೆ ಕಾರಣ ಅಂತ ಎಚ್ಚರಿಕೆ ನೀಡಿದ್ರು.

ಸರ್ಕಾರದ ಎಚ್ಚರಿಕೆ ಜೊತೆಗೆ ಕೊವೀಡ್ ಟಫ್ ರೂಲ್ಸ್ ನ್ನು ಕೂಡ ತರಾತುರಿಯಲ್ಲಿ ಜಾರಿ‌ ಮಾಡಲಾಯ್ತು. ಅದು ಎರಡು ವಾರಗಳ ಕಾಲ ಅಂದ್ರೆ ಪಾದಯಾತ್ರೆ ಮುಗಿಯುವ ಅವಧಿಗೆ ಸಮೀತವಾಗಿ ಮಾರ್ಗಸೂಚಿ ಜಾರಿಯಾಯ್ತು. ವೀಕೆಂಡ್ ಕರ್ಪ್ಯೂ ಕೂಡ ಹೇರುವ ಮೂಲಕ ಭಾನುವಾರ ಆರಂಭವಾಗಿತ್ತಿದ್ದ ಪಾದಯಾತ್ರೆ ಅನಿಶ್ಚಿತತೆ ಕಾಡುವಂತೆ ಸರ್ಕಾರ ತಮ್ಮ‌ ಅಧಿಕಾರದ ಪ್ರಯೋಗ ಮಾಡ್ತು. ಇದನ್ನು ಕಾಂಗ್ರೆಸ್ ‌ನಾಯಕರು‌ ಕೂಡ ಖಂಡನೆ ಮಾಡಿದ್ರು. ಪಾದಯಾತ್ರೆ ನಡೆಯಬಾರದು ಅಂತ ವೀಕೆಂಡ್ ಕರ್ಪ್ಯೂ ತಂದಿದ್ದಾರೆ ಅಂತ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ವಾಗ್ದಾಳಿ ‌ಮಾಡಿದ್ರು. ಆದ್ರೂ ಹಠ ಬಿಡದೆ ಕಾಂಗ್ರೆಸ್ ಪಾದಯಾತ್ರೆ ಆರಂಭ ಮಾಡ್ತು.

ಶುಕ್ರವಾರ ಸಿಗುತ್ತ ವೀಕೆಂಡ್ ಕರ್ಪ್ಯೂ ಗೆ ಮುಕ್ತಿ..?; ಸರ್ಕಾರ ನಿಜ ಮಾಡುತ್ತ ಕಾಂಗ್ರೆಸ್ ನಾಯಕರ ಆರೋಪ..?

ಹೌದು… ಕಾಂಗ್ರೆಸ್ ಪಾದಯಾತ್ರೆ ಏನೋ ಹಠ ಬಿಡದೆ ಆರಂಭ ಮಾಡ್ತು.ಆದ್ರೆ ಕಾಂಗ್ರೆಸ್ ನಾಯಕರಿಗೆ ಕಿರುಕುಳ ಆರಂಭವಾದ್ವು, ಬರೋಬ್ಬರಿ ೧೩೪ ಕೇಸ್ ದಾಖಲಾದ್ವು. ಸಚಿವರ ವಾಗ್ದಾಳಿ ಆರಂಭವಾಯ್ತು. ಅಲ್ಲದೆ ಡಿಕೆಶಿ ಅವರನ್ನು ಕರೋನ ಚೆಕಪ್ ಮಾಡಲು ಜಿಲ್ಲಾಡಳಿತ ತಂಡ ಕೂಡ ಬಂದಿತ್ತು. ಇದು ಹೈಡ್ರಾಮ ನಡೆಯಲು ಕಾರಣವಾಯ್ತು. ಅಂತೂ ಇಂತು ನಾಲ್ಕು ದಿನ ಪಾದಯಾತ್ರೆ ‌ಮಾಡಿ ಕಾಂಗ್ರೆಸ್ ರಾಮನಗರದಲ್ಲಿ‌ ಮೊಟಕು ಮಾಡ್ತು. ಆದ್ರೆ ಈಗ ಸರ್ಕಾರ ಕರೋನ ನಿಯಮಗಳನ್ನು ಸಡಿಲ ಮಾಡಲು‌ ಹೊರಟಿದೆ. ಅದು ಸ್ವಪಕ್ಷೀಯರ  ವಾಗ್ದಾಳಿ ಬಳಿಕ ಎಚ್ಚೆತ್ತುಕೊಂಡಿದೆ. ಇದೆ ಶುಕ್ರವಾರದ ಸಭೆ ಬಳಿಕ ವೀಕೆಂಡ್ ಕರ್ಪ್ಯೂ ಬಹುತೇಕ ವಾಪಸ್ಸು ಪಡೆಯಲಿದೆ. ಇದು ಎಲ್ಲೋ ಒಂದು‌ ಕಡೆ‌ ಪಾದಯಾತ್ರೆ ತಡೆಯುವುದು ಮಾತ್ರ ಸರ್ಕಾರದ ಉದ್ದೇಶವಾಗಿತ್ತ ಎಂಬ ಬಲವಾದ ಅನುಮಾನವನ್ನು ಹುಟ್ಟುಹಾಕುತ್ತಿದೆ. ಸರ್ಕಾರ ತನ್ನ ಮೇಲಿನ ಮುಜುಗರ ತಪ್ಪಿಸಲು ಕರೋನ ಸೋಂಕಿನ ನಾಟಕವಾಡ್ತ ಎಂಬ ಪ್ರಶ್ನೆ ಮೂಡುತ್ತಿದೆ‌. ಇದಕ್ಕೆ ಕಾಂಗ್ರೆಸ್ ‌ಹೇಗೆ ಪ್ರತಿಕ್ರಿಯೆ ನೀಡುತ್ತೆ ಅಂತ ಕಾದು ನೋಡಬೇಕು.

ಬಸವರಾಜ್ ಚರಂತಿಮಠ್, ಪೊಲಿಟಿಕಲ್ ಬ್ಯೂರೋ ಪವರ್ ಟಿವಿ ಬೆಂಗಳೂರು.

RELATED ARTICLES

Related Articles

TRENDING ARTICLES