Sunday, December 22, 2024

ಮಕ್ಕಳಿಗೆ ಕಾಫಿ ಟೀ ಕೊಡುವ ಮುನ್ನ ಎಚ್ಚರ!

ಈ ಜಗತ್ತು ಹೆಚ್ಚು ಆಧುನಿಕವಾಗಿ ಬದಲಾಗ್ತಾ ಇದ್ದ ಹಾಗೆ ಮಾನವನ ಆಹಾರ ಪದ್ಧತಿಯಲ್ಲಿ ಕೂಡ ಹೆಚ್ಚು ಬದಲಾವಣೆಗಳು ಕಂಡು ಬರ್ತಾ ಇದೆ. ಅದ್ರಲ್ಲೂ ಪ್ರಮುಖವಾಗಿ ಇತ್ತರೀಚೆಗಿನ ದಿನಗಳಲ್ಲಿ ಆಹಾರಕ್ಕೆ ಬಳಸಲಾಗುವ ರಾಸಾಯನಿಕಗಳು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಲಭ್ಯವಾಗ್ತಾ ಇದ್ದ, ಇದು ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನ ಬೀರೋದಕ್ಕೆ ಶುರು ಮಾಡಿದೆ. ಹಾಗಾಗಿ ಇದು ಇಂದಿನ ಪೀಳಿಗೆಯವರ ಆರೋಗ್ಯದ ಮೇಲೆ ಪರಿಣಾಮ ಬೀರಿರೋದಂತು ಸುಳ್ಳಲ್ಲ.

ಅದ್ರಲ್ಲೂ ನಮ್ಮಲ್ಲಿ ಹೆಚ್ಚಿನ ಜನಕ್ಕೆ ಕಾಫಿ ಹಾಗು ಟೀ ಕುಡಿಯುವ ಅಭ್ಯಸವಿದ್ದು, ಹೀಗಾಗಿ ಸಾಕಷ್ಟು ಕಂಪನಿಗಳು ಟೀ ಹಾಗು ಕಾಫಿ ಹುಡಿಗಳನ್ನ ಉತ್ಫಾದಿಸುತ್ತಿವೆ. ಆದ್ರೆ ಇದೇ ಟೀಹಾಗು ಕಾಫಿ ಹುಡಿಗಳು ಜನ ಸಮಾನ್ಯರ ಆರೋಗ್ಯಕ್ಕೆ ಅಪಾಯ ತಂದಿದ್ದು, ಇಂದು ಕಾಫಿ ಹುಡುಗಳಿಗೆ ಬೆರೆಸಕಲಾಗುವ ಕೊಕೊ ಪೌಡರ್,​ ಚಕೋ ಪೌಡರ್​ಗಳು ಮಾನವನ ಆರೋಗ್ಯವನ್ನ ಸಂಫೂರ್ಣವಾಗಿ ಹದಗಡಿಸುತ್ತಿದೆ. ಇನ್ನು ಟೀಗಳಲ್ಲಿರುವ ಕ್ಯಾಟಚಿನ್ಸ್ (catechins), ಹಾಗು ಆ್ಯಂಟಿಆಕ್ಸಿಡೆಂಟ್​ ಕೂಡ ಅಷ್ಟೊಂದು ಉತ್ತಮವಲ್ಲ, ಆದ್ರೂ ಕೂಡ ಸಾಕಷ್ಟು ಜನ ಟೀ ಕಾಫಿಗಳನ್ನ ಅಗತ್ಯಕ್ಕಿಂತ ಹೆಚ್ಚಾಗಿ ಸೇವಿಸುತ್ತಾರೆ. ಹೀಗಾಗಿ ಸಾಕಷ್ಟು ಜನರ ಆರೋಗ್ಯ ಟೀ ಕಾಫಿಯ ಸೇವನೆಯಿಂದಲೇ ಹಾಳಗುತ್ತಿದೆ.

ಇನ್ನು ಕೆಲವು ಮನೆಗಳಲ್ಲಿ ಮಕ್ಕಳಿಗೆ ಹೆಚ್ಚಾಗಿ ಕಾಫಿ ಟೀಗಳನ್ನ ಕುಡಿಯುವ ಅಭ್ಯಾಸವಿದೆ, ಇವುಗಳನ್ನ ಕೆಲವೊಮ್ಮೆ ಪೋಷಕರು ಗಮನಿಸಿದ್ರು ಸುಮ್ಮನಾಗಿ ಬಿಡ್ತಾರೆ, ಆದ್ರೆ ಹೀಗೆ ಮಕ್ಕಳು ಹೆಚ್ಚಾಗಿ ಕಾಫಿ ಟೀ ಸೇವಿಸಿದ್ರೆ ಆವರಲ್ಲಿ ಆರೋಗ್ಯದ ಸಮಸ್ಯೆ ತಲೆ ದೂರಲಿದೆ ಅಂತ ಕೆಲವೊಂದು ವರದಿಗಳು ಹೇಳ್ತಾ ಇದ್ದು, 3 ರಿಂದ 11ನೇ ವರ್ಷದವರೆಗಿನ ಮಕ್ಕಳ ಆಹಾರ ಶೈಲಿಯು ಅವರ ಭೌತಿಕ, ದೈಹಿಕ, ಮಾನಸಿಕ, ಬೌದ್ಧಿಕ ಮಟ್ಟದ ಮೇಲೆ ಪ್ರಭಾವ ಬೀರಲಿದೆ ಅಂತ ಹೇಳಲಾಗ್ತಾ ಇದೆ. ಅದ್ರಲ್ಲೂ ಮಕ್ಕಳಿಗೆ ಕಾಫಿ ಟೀ ಕೊಡುವ ಮುನ್ನ ಸಾಕಷ್ಟು ಎಚ್ಚರಿಕೆಯಿಂದ ಇರಬೇಕು. ಕೆಫಿನ್ ಅಂಶಗಳು ಮೆದುಳಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಿಯಮಿತವಾಗಿ ಟೀ ಕಾಫಿಯನ್ನು ಮಕ್ಕಳಿಗೆ ನೀಡಿದರೆ ಇದರಿಂದ ಭಯವಿಲ್ಲ, ಆದ್ರೆ ಇದು ಹೆಚ್ಚಾದ್ರೆ ಮಕ್ಕಳ ಆರೋಗ್ಯಕ್ಕೆ ಹೆಚ್ಚು ಸಮಸ್ಯೆಯಾಗಲಿದೆ ಅಂತ ಹೇಳಲಾಗ್ತಾ ಇದೆ.

ಮಕ್ಕಳಿಗೆ ಹೆಚ್ಚಾಗಿ ಕಾಫಿ ಟೀಗಳ ಅಭ್ಯಾಸದಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುವ ಸಾಧ್ಯತೆ ಇದ್ದು, ಕಾಫಿಯಲ್ಲಿ ಕೆಫೀನ್ ಎಂಬ ಸಾವಯವ ಅಂಶದಿಂದ ಕೆಲವೊಂದು ಅಪಾಯಗಳಿವೆ. ಮೊದಲನೇದಾಗಿ ಕೆಫೆನ್​ ನರಮಂಡಲವನ್ನು ಪ್ರಚೋದಿಸುವ ಕಾರಣ ಕಾಫಿ ಸೇವಿಸಿದಾಗ ಒಂದು ಬಗೆಯ ಉತ್ತೇಜಕ ಪರಿಣಾಮ ಉಂಟಾಗುವುದು, ಇನ್ನು ಮಕ್ಕಳಿಗೆ ಕಾಫಿ ಕೊಡುವುದರಿಂದ ಅವರ ಬೆಳವಣಿಗೆ ಕುಂಠಿತವಾಗುವುದು, ಇದರ ಜೊತೆಗೆ  ಜೀರ್ಣಾಂಗ ವ್ಯವಸ್ಥೆಯ ಮೇಲೂ ಕಾಫಿ ಹಾಗು ಟೀ ಪರಿಣಾಮ ಪರಿಣಾಮ ಬೀರಲಿದ್ದು ಕೆಫಿನ್ ಅಂಶಗಳಿರುವ ಕಾಫಿ, ಟೀ ಸೇವನೆಯಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತವೆ. ಅಲ್ಲದೆ, ಗ್ಯಾಸ್ಟ್ರಿಕ್, ಹೊಟ್ಟೆಯುಬ್ಬರದಂತಹ ಅನಾರೋಗ್ಯ ಉಂಟಾಗುತ್ತದೆ. ಅನ್ನೋದನ್ನ ವರದಿ ದೃಢಪಡಿಸಿದೆ.

ಇದರ ಜೊತೆಗೆ ಮಕ್ಕಳಲ್ಲಿ ಕ್ಯಾಲ್ಸಿಯಂ ಕೊರತೆ, ನರಕೋಶಗಳ ಸಾಮರ್ಥ್ಯವನ್ನು ತಗ್ಗಿಸುವುದು, ಹೃದಯ ಸ್ತಂಭನ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನ ತಂದೊಡ್ಡುವುದರ ಜೊತೆಗೆ ಮಾರಕವಾದ ಕಾಯಿಲೆಳನ್ನ ತರಬಹುದು ಎಂದು ಹೇಳಲಾಗ್ತಾ ಇದೆ. ಅದ್ರೆ ಈ ಎಲ್ಲಾ ಸಮಸ್ಯೆಗಳು ನೇರವಾಗಿ ಕಾಫಿ ಹಾಗು ಟೀ ಹುಡಿಗಳಿಂದ ಬರ್ತಾ ಇಲ್ಲ ಬದಲಾಗಿ ಕಾಫಿ, ಟೀ ಹುಡಿಗಳಿಗೆ ಬೆರೆಸಲಾಗುವ ರಾಸಾಯನಿಕ ಅಂಶಗಳು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿವೆ ಅಂತ ಹೇಳಲಾಗ್ತಾ ಇದೆ. ಹಾಗಾಗಿ ರಾಸಾಯನಿಕ ಬೆರೆಸದ ಕಾಫಿ, ಟೀ ಹುಡಿಗಳು ಆರೋಗ್ಯಕ್ಕೆ ಉತ್ತಮ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.

ಒಟ್ಟಾರೆಯಾಗಿ ಈಗ ದೊರೆತಿರುವ ಈ ವರದಿಗಳಿಂದ ಮಕ್ಕಳಿಗೆ ಕಾಫಿ, ಟೀಗಳನ್ನ ನೀಡೋದಕ್ಕೆ ಪೋಷಕರು ಹೆದರುವಂತಾಗಿದೆ. ಹಾಗಾಗಿ ಈ ವಿಚಾರದಲ್ಲಿ ಪ್ರತಿಷ್ಟಿತ ಕಂಪನಿಗಳು ಹಾಗು ಸರ್ಕಾರಗಳು ಹೆಚ್ಚು ಮುತುವರ್ಜಿಯನ್ನ ವಹಿಸುವ ಅಗತ್ಯವಿದೆ. ಒಂದು ವೇಳೆ ಹಾಗಾಗದೇ ಇದ್ದಲ್ಲಿ ಮುಂದಿನ ಪೀಳಿಗೆ ಇನ್ನಷ್ಟು ಆರೋಗ್ಯ ಸಮಸ್ಯೆಯಿಂದ ಬಳಲುವುದರಲ್ಲಿ ಅನುಮಾನವಿಲ್ಲ.

ಲಿಖಿತ್​​ ರೈ, ಪವರ್​​ ಟಿವಿ 

RELATED ARTICLES

Related Articles

TRENDING ARTICLES