ಜಗತ್ತಿನಲ್ಲಿ ಅತ್ಯಂತ ಹೆಚ್ಚು ಬೆಲೆಬಾಳುವ ಹಾಗು ಹೊಳೆಯುವ ಹರಳು ಅಂದ್ರೆ ಅದು ವಜ್ರ ಮಾತ್ರ. ಸಾಧಾರಣವಾಗಿ ವಜ್ರಗಳು ಹೆಚ್ಚು ಹೊಳೆಯುವುದರಿಂದ ಎಲ್ಲರನ್ನ ಬೇಗ ಆಕರ್ಶಿಸುತ್ತದೆ. ಹಾಗಾಗಿ ಜಗತ್ತಿನ ಆಭರಣ ಪ್ರಿಯರಿಗೆ ಅತ್ಯಂತ ಹೆಚ್ಚು ಇಷ್ಟವಾಗೋದು ವಜ್ರದಿಂದ ತಯಾರಿಸಿದ ಆಭರಣವೇ. ಹಾಗಾಗಿ ಇದರ ಬೆಲೆಯುವ ಅಧಿಕವಿದ್ದು, ಇವುಗಳನ್ನ ಖರೀದಿಸೋದಕ್ಕೆ ಶ್ರೀಮಂತ ಕುಟುಂಬಗಳು ಸದಾ ಮುಂದಿರುತ್ತವೆ. ಹೀಗಾಗಿನೇ ಇವತ್ತು ಹಲವು ಆಭರಣ ಕಂಪನಿಗಳು ವಜ್ರವನ್ನ ನಾ ಮುಂದು ತಾ ಮುಂದು ಎಂದು ತಯಾರಿಸಿ ಸಿರಿವಂತರ ಹಾಗು ಸಾಮಾನ್ಯ ಗ್ರಾಹಕರನ್ನ ಸೆಳೆಯೋದಕ್ಕೆ ಮುಂದಾಗಿದ್ದಾರೆ.
ಆದ್ರೆ ಇಲ್ಲಿ ಗಮನಿಸ ಬೇಕಾದ ಅಂಶ ಅಂದ್ರೆ, ಜಗತ್ತಿನಲ್ಲಿ ಬಹುತೇಕ ಜನ್ರು ಕೇವಲ ಪಾರದರ್ಶಕ ವಜ್ರ ಮಾತ್ರ ಇದೆ ಅಂತ ಅಂದು ಕೊಂಡಿದ್ದಾರೆ. ಆದ್ರೆ ಪಾರದರ್ಶಕ ವಜ್ರಕ್ಕೆ ತದ್ವಿರುದ್ಧವಾದ ಕಪ್ಪು ವಜ್ರದ ಅಸ್ತಿತ್ವ ಇರೋದು ಬಹುತೇಕ ಜನರಿಗೆ ತಿಳಿದೇ ಇಲ್ಲ. ಒಂದು ವೇಳೆ ಇದರ ಬಗ್ಗೆ ಕೇಳಿದ್ರೆ. ಅದ್ರಿಂದ ಏನ್ರಿ ಪ್ರಯೋಜನ? ಮಾಮೂಲಿ ವಜ್ರಕ್ಕಿರೋ ಬೆಲೆ ಅದಿಕ್ಕೇದ್ರು ಇರುತ್ತೇನ್ರಿ ಅಂತ ಸಾಕಷ್ಟು ಜನ ಮೂಗು ಮುರಿಯುವವರೆ ಹೆಚ್ಚು. ಒಂದು ವೇಳೆ ನಿಮ್ಮಲ್ಲೂ ಅದೇ ರೀತಿಯಾದ ಅಭಿಪ್ರಾಯ ಇದ್ರೆ, ನೀವು ಆ ಅಭಿಪ್ರಾಯವನ್ನ ಬದಲಾಯಿಸಿಕೊಳ್ಳ ಬೇಕಾಗಬಹುದು. ಯಾಕಂದ್ರೆ ಇವತ್ತು ನಾವು ಹೇಳೋದಕ್ಕೆ ಹೊರಟಿರೋದು ಈ ಕಪ್ಪು ವಜ್ರದ ಬಗ್ಗೆ ಅದ್ರಲ್ಲೂ ಇದರ ಬೆಲೆ ಕೇಳಿದ್ರೆ ಎಂತವರಿಗಾದ್ರು ಒಮ್ಮೆ ಅಚ್ಚರಿ ಮೂಡದೆ ಇರೋದಿಲ್ಲ.
ಅಂತಾರಾಷ್ಟ್ರೀಯ ಹರಾಜು ಸಂಸ್ಥೆಯಾದ ಸೊದೆಬಿಯ ದುಬೈ ಘಟಕವು, ಸೋಮವಾರ ಬಾಹ್ಯಾಕಾಶದಿಂದ ಬಂದಿದೆಯೆಂದು ನಂಬಲಾದ ಅಪರೂಪದ ಕಪ್ಪುವಜ್ರವನ್ನು ಪ್ರದರ್ಶನಕ್ಕೆ ಇರಿಸಿದೆ. ಇದೀಗ ಈ ವಜ್ರ ಎಲ್ಲರನ್ನ ಆಕರ್ಶಿಸಿಸ್ತಾ ಇದ್ದು, ಈ ಅಪರೂಪದ ಕಪ್ಪು ವಜ್ರಕ್ಕೆ ‘ದಿ ಎನಿಗ್ಮಾ’ ಅಂತ ಹೆಸರಿಡಲಾಗಿದೆ. ಈ ಕಪ್ಪು ವಜ್ರ 555.55 ಕ್ಯಾರಟ್ನಾದ್ದಾಗಿದ್ದು ಫೆಬ್ರವರಿಯಲ್ಲಿ ಲಂಡನ್ನಲ್ಲಿ ಹರಾಜಾಗಲಿದೆ. ಇದೇ ಕಾರಣಕ್ಕಾಗಿ ಇದರ ಬೆಲೆಯು ಅತ್ಯಧಿಕವಾಗುದ್ದು 50 ಲಕ್ಷ ಬ್ರಿಟಿಶ್ ಪೌಂಡ್ಗೆ ಮಾರಾಟವಾಗುವ ನಿರೀಕ್ಷೆ ಇದೆ. ಅಂದ್ರೆ ಭಾರತೀಯ ಕರೆನ್ಸಿಯಲ್ಲಿ 50,66,78,500 ರೂಪಾಯಿಗೆ ಮಾರಟವಾಗಲಿದೆ ಅನ್ನೋ ಅಂದಾಜು ಹಾಕಲಾಗಿದೆ
ಇನ್ನು ಈ ಕಪ್ಪು ವಜ್ರದ ಮತ್ತೊಂದು ವಿಶೇಷ ಅಂದ್ರೆ ಅದು ಈ ವಜ್ರದಲ್ಲಿರು ನ್ಯೂಮಾರಾಲಜಿ. ಈ ವಜ್ರಕ್ಕು ಹಾಗು 5 ಸಂಖ್ಯೆಗೆ ಒಂದು ಅವಿನಭಾವದ ಸಂಬಂಧವಿದೆ. ಸಾಧಾರಣವಾಗಿ ಪಾರದರ್ಶಕ ವಜ್ರಗಳು 24 ಮುಖಗಳನ್ನ ಹೊಂದಿದ್ರೆ. ಈ ವಜ್ರ 55 ಮುಖಗಳನ್ನ ಹೊಂದಿದೆ. ಹಾಗು ಈ ವಜ್ರವನ್ನ 555.5 ಕ್ಯಾರಟ್ನದ್ದಾಗಿದ್ದು, ಈ ಕಪ್ಪು ವಜ್ರ ಸುಮಾರು 50 ಲಕ್ಷ ಪೌಂಡ್ಗೆ ಕೂಡ ಮಾರಟವಾಗಲಿದೆ ಅಂತ ಹೇಳಲಾಗ್ತಾ ಇದ್ದು, ಈ ವಜ್ರದ ಜೊತೆ 5 ಅಂಕಿ ಹೇಗೆ ತಳುಕು ಹಾಕಿಕೊಂಡಿದೆ ಅನ್ನೊದು ಇದುವರೆಗೆ ಯಾರಿಗೂ ತಿಳಿದಿಲ್ಲ. ಹಾಗಾಗಿಈ ಕಪ್ಪು ವಜ್ರವನ್ನ ಲಕ್ಕಿ ವಜ್ರವೆಂದು ಬಹುತೇಕರು ನಂಬುತ್ತಿದ್ದಾರಂತೆ. ಹೀಗಾಗಿ ಹರಾಜಿನ ವೇಳೆ ಈ ವಜ್ರ ಇನ್ನು ಹೆಚ್ಚಿನ ಬೆಲೆಗೆ ಮಾರಾಟವಾಗ ಬಹುದು ಎಂದು ಹೇಳಲಾಗ್ತಾ ಇದೆ.
ಅಷ್ಟಕ್ಕೂ ಈ ಕಪ್ಪು ವಜ್ರವನ್ನ ಸಾಕಷ್ಟು ಜನ ಬಾಹ್ಯಾಕಾಶದಿಂದ ಬಂದಿದ್ದು ಎಂದು ನಂಬುತ್ತಾರೆ. ಇದಕ್ಕೆ ಕೆಲ ವೈಜ್ಞಾನಿಕ ಮಾಹಿತಿಯನ್ನ ನೀಡಲಾಗಿದ್ದು, ಉಲ್ಕಾಶಿಲೆಗಳು ಭೂಮಿಯೊಂದಿಗೆ ಘರ್ಷಿಸುವಾಗ ಉಂಟಾದಂತಹ ರಾಸಾಯನಿಕ ಅನಿಲ ಸಂಯೋಜನೆಯಿಂದ ಈ ಕಪ್ಪು ವಜ್ರ ರೂಪುಗೊಂಡಿರಬಹುದು ಅಂತ ಅಂದಾಜಿಸಲಾಗಿದೆ ಇನ್ನೂ ಕೆಲವರ ಪ್ರಕಾರ ಸ್ವತಃ ಉಲ್ಕಾಶಿಲೆಗಳಿಂದಲೇ ಕಪ್ಪು ವಜ್ರ ಭೂಮಿಗೆ ಬಂದಿರಬಹುದು ಎಂದು ಹೇಳಲಾಗುತ್ತೆ. ಸದ್ಯಕ್ಕೆ ಈ ಕಪ್ಪು ವಜ್ರವನ್ನ ಕಾರ್ಬನಾಡೊ ಎಂದು ಕೂಡಾ ಕರೆಯಲಾಗುತ್ತಿದ್ದು, ಈ ಕಪ್ಪುವಜ್ರವು ಅತ್ಯಂತ ಅಪರೂಪವಾಗಿ ದೊರೆಯುತ್ತದೆ. ಈವರೆಗೆ ಪ್ರಾಕೃತಿಕವಾಗಿ ಬ್ರೆಜಿಲ್ ಹಾಗೂ ಮಧ್ಯ ಆಫ್ರಿಕದಲ್ಲಿ ಮಾತ್ರವೇ ಈ ಕಪ್ಪು ವಜ್ರಗಳು ಪತ್ತೆಯಾಗಿದೆ
ಒಟ್ಟಾರೆಯಾಗಿ ಇದೀಗ ಸಾಕಷ್ಟು ಜನ ಸಿರಿವಂತರ ಕಣ್ಣು ಇಂಗ್ಲೆಂಡ್ ನಡೆಯಲಿರುವ ಈ ಕಪ್ಪು ವಜ್ರದ ಹಾರಾಜಿನ ಮೇಲೆ ಬಿದ್ದಿದ್ದು, ಇದರ ಖರೀದಿಗೆ ಸಿರಿವಂತರಲ್ಲಿ ಹೆಚ್ಚು ಪೈಪೋಟಿ ಬೀಳಲಿದೆ ಎಂದು ಹೇಳಲಾಗ್ತಾ ಇದೆ. ಆದ್ರೆ ಇತ್ತೀಚೆಗೆ ಇಂಗ್ಲೆಂಡ್ನಲ್ಲಿ ಒಮೈಕ್ರಾನ್ ಹಾವಳಿ ಹೆಚ್ಚಾಗ್ತಾ ಇರೋದ್ರಿಂದ ಈ ಹರಾಜು ಪ್ರಕ್ರಿಯೆ ಮುಂದಕ್ಕೆ ಕೂಡ ಹೋಗಬಹುದು ಅಂತ ಹೇಳಲಾಗ್ತಾ ಇದೆ. ಒಂದು ವೇಳೆ ಹಾಗೇನಾದ್ರ ಹರಾಜು ಪ್ರಕ್ರಿಯೆ ಮುಂದಕ್ಕೆ ಹೋದ್ರೆ ಈ ವಜ್ರಕ್ಕೆ ಮತ್ತಷ್ಟು ಬೇಡಿಕೆ ಹೆಚ್ಚಾಗಲಿದೆ ಅನ್ನೋ ಅಭಿಪ್ರಾಯವನ್ನ ತಜ್ಞರು ವ್ಯಕ್ತ ಪಡಿಸುತ್ತಿದ್ದಾರೆ.
ಲಿಖಿತ್ ರೈ, ಪವರ್ ಟಿವಿ