Monday, December 23, 2024

ವೈದ್ಯರು ಭಿನ್ನ ಹೇಳಿಕೆ ನೀಡುವಂತಿಲ್ಲ : ಕೆ.ಸುಧಾಕರ್

ಬೆಂಗಳೂರು : ಮಹಾಮಾರಿ ಕೊರೋನಾ ವೈರಸ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈದ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸಾಕಷ್ಟು ವಿಡಿಯೋಗಳನ್ನು ಜನತೆ ವೀಕ್ಷಿಸಿದ್ದಾರೆ.

ಕೊರೋನಾ ಬಗ್ಗೆ ವೈದ್ಯರಲ್ಲೇ ಭಿನ್ನ ಹೇಳಿಕೆಗಳಿರುವುದನ್ನು ಗಮನಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ಕೆ. ಸುಧಾಕರ್​ ಅವರು ವೈದ್ಯರಿಂದ ನಾವಿದನ್ನು ನಿರೀಕ್ಷೆ ಮಾಡಿರಲಿಲ್ಲ. ಮೊದಲ ಎರಡು ಅಲೆಯಲ್ಲೂ ವೈದ್ಯರು ಕೊರೋನಾ ಬಗ್ಗೆ ಭಿನ್ನ ಹೇಳಿಕೆಗಳನ್ನು ನೀಡಿದ್ದರು.

ಆದರೆ, ಆ ರೀತಿ ಮಾತನಾಡಬಾರದು. ಹೀಗಾಗಿ ಈ ಅಂಶವನ್ನು ಸರ್ಕಾರ ಗಮನಿಸಿದ್ದು, ಕೊರೋನಾ ವಿಚಾರವಾಗಿ ಸರ್ಕಾರ ನೇಮಿಸಿದ ಅಧಿಕೃತ ಮಾನವ ಸಂಪನ್ಮೂಲ ಅಧಿಕಾರಿ ಅಥವಾ ವೈದ್ಯರು ಮಾತ್ರ ಮಾತನಾಡಬೇಕೆಂಬ ಆದೇಶವುಳ್ಳ ಕಡತಕ್ಕೆ ಈಗಾಗಲೇ ಸಹಿ ಕೂಡ ಹಾಕಲಾಗಿದೆ. ಹಾಗೂ ಇಂದೇ ಆ ಆದೇಶ ಹೊರಬೀಳಲಿದೆ ಎಂದು ಆರೋಗ್ಯ ಸಚಿವ ಕೆ.ಸುಧಾಕರ್​ ಅವರು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES