Monday, December 23, 2024

2ಲಕ್ಷ ವರ್ಷಗಳ ಹಿಂದಿನ ಮಾನವ ಪಳೆಯುಳಿಕೆಗಳು ಪತ್ತೆ

ಮಾನವ ಈ ಜಗತ್ತಿನ ಅತ್ಯಂತ ಬುದ್ಧಿವಂತ ಜೀವಿ.. ಇವತ್ತು ಜಗತ್ತಿನಾದ್ಯಂತ ಇರುವ ಜೀವ ಸಮೂಹದಲ್ಲಿ ಅತ್ಯಂತ ಹೆಚ್ಚಯು ವಿಕಾಸನ ಹೊಂದಿರುವ ಜೀವಿ ಕೂಡ ಮನುಷ್ಯನೇ. ಮಂಗನಿಂದ ಮಾನವನಾಗಿ, ಆದಿ ಮಾನವನಿಂದ ನಾಗರಿಕ ಸಮಾಜದ ಮಾನವನವರೆಗೆ ಬಹುದೊಡ್ಡ ಪ್ರಯಾಣವೇ ಇದೆ. ಇವತ್ತು ಮಾನವ ಸಾಕಷ್ಟು ಅಭಿವೃದ್ಧಿಯನ್ನ ಹೊಂದಿದ್ದಾನೆ. ಬಾಹ್ಯಕಾಶಕ್ಕೆ ಹೋಗಬಲ್ಲ, ಸಾಗರದ ಅತ್ಯಂತ ಆಳಕ್ಕೆ ಇಳಿಯ ಬಲ್ಲ, ಹೀಗೆ ಹೇಳುತ್ತಾ ಹೋದ್ರೆ ಮಾನವನ ಸಾಧನೆಗಳ ಪಟ್ಟಿ ಮುಗಿಯೊದೇ ಇಲ್ಲ. ಅಷ್ಟರ ಮಟ್ಟಿಗೆ ಮಾನವ ಇವತ್ತು ವೈಜ್ಞಾನಿಕವಾಗಿ ತನ್ನನ್ನ ತಾನು ಬಲ ಪಡಿಸಿಕೊಂಡು ಬಂದಿದ್ದಾನೆ. ಹೀಗೆ ಇವತ್ತು ಮಾನವ ಸಾಕಷ್ಟು ಅಭಿವೃದ್ಧಿಯನ್ನ ಸಾಧಿಸಿಕೊಂಡು ಬಂದಿದ್ದು ತನ್ನ ಹಿಂದಿನ ತಲೆಮಾರುಗಳ ಬಗ್ಗೆ ಅಧ್ಯಯನ ನಡೆಸೋದಕ್ಕೆ ಶುರು ಮಾಡಿದ್ದಾನೆ.

ಮಾನವ ತನ್ನ ಬೆಳವಣಿಗೆ ಹಾಗು ವಿಕಸನಕ್ಕೆ ಪ್ರಮುಖ ಕಾರಣ ಏನು? ತಾನು ಎಷ್ಟು ವರ್ಷಗಳಿಂದ ಈ ಭೂಮಿಯಲ್ಲಿ ವಾಸಿಸುತ್ತಿದ್ದೇನೆ? ತಾನು ಹೇಗೆ ಈ ಭೂಮಿಗೆ ಬಂದೆ ಎನ್ನುವಂತಹ ಹಲವು ಪ್ರಶ್ನೆಗಳನ್ನ ಹಲವು ವರ್ಷಗಳಿಂದ ಮಾನವನ ವಿಜ್ಞಾನ ಸಮೂಹ ತನ್ನೋಳಗೆ ಕೇಳಿಕೊಂಡು ಬರುತ್ತಿದೆ. ಇದಕ್ಕೆ ಇರುವ ಒಂದೇ ಒಂದು ಮಾರ್ಗ ಅಂದ್ರೆ ಅದು ತನ್ನ ಪೂರ್ವಜರ ಪಳೆಯುಳಿಕೆಗಳನ್ನ ಮಾನವ ಹುಡುಕ ಬೇಕು. ಈ ನಿಟ್ಟಿನಲ್ಲಿ ನಮ್ಮ ವಿಜ್ಞಾನಿಗಳು ಆದಿ ಮಾನವ ವಾಸಿಸಿದ ಗುಹೆಗಳು, ಶಿಲಾಯುಗ ಕಾಲದಿಂದಲೂ ಸ್ವಲ್ಪ ಮಾರ್ಪಾಡು ಹೊಂದಿರುವ ಕೆಲ ಜಾಗಗಳನ್ನ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಈ ವೇಳೆ ಅವರಿಗೆ ಹಳೆ ಶಿಲಾಯುಗ ಕಾಲದ ಕೆಲ ಆಯುಧಗಳು, ಕೆಲ ಮಾನವನ ಪಳಯುಳಿಕೆಗಳು, ಡೈನೋಜರ್​ಗಳ ಅವಶೇಷಗಳು ಪತ್ತೆಯಾಗಿದ್ವು ಇದು ಮಾನವನ ಅಧ್ಯಯನಕ್ಕೆ ಹೊಸ ದಿಕ್ಕನ್ನೇ ತೋರಿಸಿಕೊಟ್ಟಿತ್ತು.

ಹೀಗೆ ಅಧ್ಯಯನ ನಡೆಸುತ್ತಿದ್ದ ವಿಜ್ಞಾನಿಗಳಿಗೆ ಮೊದ ಮೊದಲು 50-80 ಸಾವಿರ ವರ್ಷಗಳಷ್ಟು ಹಳೆಯ ಮಾನವ ಪಲೆಯುಳಿಕೆಗಳು ಪತ್ತೆಯಾಗಿದ್ವು, ಆದ್ರೆ ಆ ಪಳೆಯುಳಿಕೆಗಳು ಕೊಂಚ ಮಟ್ಟಿಗೆ ಮಾನವ ಆ ಕಾಲದಲ್ಲಿ ವಿಕಾಸ ಹೊಂದಿರೊದು ಅಂತ ಹೇಳುತ್ತಿದ್ದವು, ಆದ್ರೆ ದಿನ ಹೋದಂತೆ 1 ಲಕ್ಷ ವರ್ಷ, 2 ಲಕ್ಷ ವರ್ಷಗಳಷ್ಟು ಹಳೆಯ ಪಳೆಯುಳಿಕೆಗಳು ಪತ್ತೆಯಾಗೋದಕ್ಕೆ ಶುರುವಾಗಿತ್ತು. ಆದ್ರೂ ಕೂಡ ಇದು ಮಾನವ ವಿಕಸನ ಆರಂಭದ ಕಾಲಘಟ್ಟ ಅಂತ ಪೂರ್ಣವಾಗಿ ಒಪ್ಪಿಕೊಳ್ಳೋದಕ್ಕೆ ಜೀವ ವಿಜ್ಞಾನಿಗಳು ತಯಾರಾಗಿ ಇರಲಿಲ್ಲ. ಇದೀಗ  ಇದೇ ಸಾಲಿಗೆ ಇಥಿಯೋಪಿಯಾದಲ್ಲಿ  2,30,000 ವರ್ಷಗಳಷ್ಟು ಹಳೆಯದಾದ ಮಾನವ ಪಳೆಯುಳಿಕೆ ಪತ್ತೆಯಾಗಿದೆ. ಸದ್ಯಕ್ಕೆ ಈ ಪಳೆಯುಳಿಕೆಗೆ ಒಮೋ ಎಂದು ಹೆಸರಿಡಲಾಗಿದೆ ಅಂತ ತಜ್ಙರು ತಿಳಿಸಿದ್ದಾರೆ.

1960 ರ ದಶಕದ ಇದೇ ರೀತಿಯಾದ ಮಾನವನ ಪಳೆಯುಳಿಕೆಗಳು ಪತ್ತೆಯಾಗಿದ್ವು, ಆದ್ರೆ ಅವುಗಳನ್ನ 2 ಲಕ್ಷ ವರ್ಷಗಳಷ್ಟು ಹಳೆಯದು ಅಂತ ಹೇಳಲಾಗಿತ್ತು. ಈಗ ಇಥಿಯೋಪಿಯದಲ್ಲಿ ಪತ್ತೆಯಾಗಿರುವ ಪಳೆಯುಳಿಕೆಗಳನ್ನ  2,30,000 ವರ್ಷಗಳಷ್ಟು ಹಳೆಯದು ಅಂತ ಕೇಂಬ್ರಿಡ್ಜ್​ ವಿಶ್ವವಿದ್ಯಾನಿಲಯದ ಹೊಸ ಅಧ್ಯಯನ ಹೇಳ್ತಾ ಇದೆ. ಸಂಶೋಧಕರ ತಂಡ ಹೇಳಿರುವ ಹಾಗೆ ಈ ಪಳೆಯುಳಿಕೆ ಜ್ವಾಲಮುಖಿ ಹತ್ತಿರದಲ್ಲಿ ಪತ್ತೆಯಾಗಿದ್ದು ಇದು ಜ್ವಾಲಮುಖಿ ಸ್ಪೋಟಕ್ಕೂ ಮುಂಚಿನ ಅವಶೇಷವಾಗಿದೆ ಅಂತ ಹೇಳ್ತಾ ಇದ್ದಾರೆ. ಇದಕ್ಕೆ ಪೂರಕವಾಗಿ ಕೆಸರು ಹಾಗು ಜ್ವಾಲಾಮುಖಿಯ ಬೂದಿ ಪದರಗಳ ರಾಸಾಯನಿಕಳ ಮೇಲೆ ನಡೆಸಲಾದ ಕಾರ್ಬನ್​ ಡೇಟಿಂಗ್​ನಿಂದ ಈ ಮಾನವನ ಪಳೆಯುಳಿಕೆ ಇದಕ್ಕೂ ಹಳೆಯದು ಅನ್ನೊದು ನಿಖರವಾಗಿದೆ.

ಸದ್ಯಕ್ಕೆ ಇಥಿಯೋಪಿಯಾದಲ್ಲಿ ಪತ್ತೆಯಾಗಿರುವ ಈ ಮಾನವ ಪಳೆಯುಳಿಕೆಯ ಬಗ್ಗೆ ಇನ್ನೂ ಕೂಡ ಅಧ್ಯಯನ ನಡೆಸಲಾಗ್ತಾ ಇದ್ದು, ಇದು  2017 ರಲ್ಲಿ ಪುರಾತತ್ವ ಶಾಸ್ತ್ರಜ್ಞರು ಪತ್ತೆಹಚ್ಚಿದ್ದ, 3,00,000 ವರ್ಷಗಳಷ್ಟು ಹಳೆಯದಾದ ತಲೆಬುರುಡೆಯ ಪಳೆಯುಳಿಕೆಗಿಂತಲೂ ಹಳೆಯದಾಗ ಬಹುದು ಎಂದು ಅಂದಾಜಿಸುತ್ತಿದ್ದಾರೆ. ಹಾಗೆ ಒಂದು ವೇಳೆ ನಡೆದರೆ ಈ ಒಮೊ  ಪಳೆಯುಳಿಕೆ ವಿಶ್ವದ ಹಳೆಯ ಪಳೆಯುಳಿಕೆಯಾಗುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ಇದರ ಜೊತೆಗೆ ಈ ಹಿಂದೆ ಆಫ್ರಿಕಾದಲ್ಲಿ ಪತ್ತೆಯಾದ ಹಳೆಯ ಪಳೆಯುಳಿಕೆಗಳ ಬಗ್ಗೆ ವಿಜ್ಞಾನಿಗಳು ದಶಕಗಳಿಂದ ಅಧ್ಯಯನ ನಡೆಸುತ್ತಿದ್ದು ಅವುಗಳ ನಿಖರವಾದ ಕಾಲಮಾನ ತಿಳಿದುಕೊಳ್ಳೋದಕ್ಕೆ ಪ್ರಯತ್ನ ಪಡ್ತಾ ಇದ್ದಾರೆ. ಆದ್ರೆ ಅದಕ್ಕೆ ಪೂರಕವಾದ ಹಾಗು ನಿಖರ ಮಾಹಿತಿ ಇನ್ನು ಕೂಡ ಸಿಕ್ಕಿಲ್ಲ.

ಒಟ್ಟಾರೆಯಾಗಿ  ಇಥಿಯೋಪಿಯಾದಲ್ಲಿ ಪತ್ತೆಯಾಗಿರುವ ಈ ಪಳೆಯುಳಿಕೆ ಮಾನವ ನಾಗರಿಕತೆ ಹಾಗು ಜೀವ ವಿಜ್ಞಾನದ ಅಧ್ಯಯನಕ್ಕೆ ಹೊಸ ಅಯಾಮ ನೀಡಿದೆ. ಸದ್ಯಕ್ಕೆ ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸುತ್ತಿರುವ ಸಂಶೋಧಕರು ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ನೀಡುವ ಸಾಧ್ಯತೆ ಇದೆ. ಹಾಗಾಗಿ ಸಂಶೋಧಕರಿಗೆ ಈ ಪಳೆಯುಳಿಕೆ ಅತ್ಯಂತ ಮಹತ್ವದ್ದಾಗಿದ್ದು, ಹಲವು ಬಹುಮುಖ್ಯ ಮಾಹಿತಿಯನ್ನ ಈ ಪಳೆಯುಳಿಕೆ ಬಿಚ್ಚಿಡುವ ಸಾಧ್ಯತೆ ಇದೆ.

ಲಿಖಿತ್​​ ರೈ, ಪವರ್​ ಟಿವಿ

RELATED ARTICLES

Related Articles

TRENDING ARTICLES