Sunday, December 22, 2024

ನಿರೂಪಣೆಗೊಂದು ಹೊಸ ಆಯಾಮ ಸಾಮಾಜಿಕ ಜಾಲತಾಣಗಳು

ಇಂದಿನ ಯುಗ ಸಾಮಾಜಿಕ ಜಾಲತಾಣಗಳ ಯುಗ. ಆನ್ಲೈನ್ ತಿಳಿಯದವರು ಅನಕ್ಷರಸ್ಥರಂತೆ ಭಾವಿಸಲಾಗುತ್ತಿದೆ. ಮೊಬೈಲ್ ಹಾಗೂ ಕಂಪ್ಯೂಟರ್ ಇದ್ದವರು ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳನ್ನು ಜಾಲಾಡಿಯೇ ಇರುತ್ತಾರೆ.

ಸಾಮಾಜಿಕ ಜಾಲತಾಣಗಳು; ಆಧುನಿಕ ಯುಗದ ಯಶಸ್ಸಿಗೆ ಅತ್ಯಗತ್ಯ. ವಿಡಿಯೋಗಳು ಆ ಎಲ್ಲಾ ಆನ್ಲೈನ್ ಪ್ರಪಂಚದ ಬಹು ಮುಖ್ಯವಾದ ಅಂಗವಾಗಿರುವುದರಲ್ಲಿ ಸಂದೇಹವಿಲ್ಲ. ವಿಡಿಯೋಗಳು ಮಿಂಚುತ್ತಿವೆ. ನೀವು ಮಿಂಚಬಾರದೇ?

ವಿಡಿಯೋಗಳು ಸೊಗಸಾಗಿರಬೇಕೆಂದರೆ ನಿಮ್ಮ ನಿರೂಪಣೆಯ ಕೌಶಲ ಆಕರ್ಷಕವಾಗಿರಬೇಕು. ಅಂದದ ಚೆಂದದ ಮಾತುಗಳನ್ನು ಒಳಗೊಂಡಿರಬೇಕು. ನಿಮ್ಮ ಉಡುಪು, ಧ್ವನಿ, ಹಾವ- ಭಾವ ಮಾತಿನೊಂದಿಗೆ ಸಮ್ಮಿಳಿತಗೊಂಡಿರಬೇಕು. ನೀವಾಡುವ ಭಾಷೆ ಎಲ್ಲರೂ ಮೆಚ್ಚುವಂತಿರಬೇಕು. ಈ ನಿರೂಪಣಾ ಕೌಶಲ ನಿಮಗೆ ಬೇಕೇ ಬೇಕು. ಕಲಿಯದಿದ್ದರೆ ನೀವು ನಿಮ್ಮ ಏಳ್ಗೆಯ ಸ್ಪರ್ಧೆಯಿಂದ ಹಿಂದೆ ಸರಿದಂತೆಯೇ ಸರಿ.

YOUTUBE:
ಇದನ್ನು ನಾವು ಆನ್ಲೈನ್ ಟಿವಿ ಎಂದು ಕರೆಯಬಹುದು. ಯಾವುದೇ ವಿಷಯಕ್ಕೊಂದು ಮಾಹಿತಿ ಈ ವೇದಿಕೆಯಲ್ಲಿ ನಿಮಗೆ ಲಭ್ಯ. ಹೆಸರು ಮಾಡುವುದರೊಂದಿಗೆ ಗಳಿಕೆಯೂ ಸಾಧ್ಯ.

FACEBOOK:
ಅನೇಕ ಹಳೆಯ ಸ್ನೇಹಿತರನ್ನು ಒಟ್ಟುಗೂಡಿಸಿದೆ. ಪ್ರಪಂಚವನ್ನೇ ಒಂದುಗೂಡಿಸಿದೆ. ಯಾವುದೇ ಸೇವೆ ಹಾಗೂ ಸರಕಿನ ಬಹುದೊಡ್ಡ ಮಾರುಕಟ್ಟೆ ಎನಿಸಿದೆ. ಇಲ್ಲಿನ ವಿಡಿಯೋಗಳು ಪ್ರಪಂಚವನ್ನು ಕ್ಷಣ ಮಾತ್ರದಲ್ಲಿ ತಲುಪುತ್ತವೆ.

INSTAGRAM:
ಮತ್ತಷ್ಟು ರಂಗು ನೀಡಿರುವ ವೇದಿಕೆ. IG ಟಿವಿ ಎರಡನೇ ಎಂದು ಪರಿಗಣಿಸಲ್ಪಟ್ಟಿದೆ. ವಿಭಿನ್ನವಾದ ಛಾಯಾಚಿತ್ರಗಳು ಹಾಗೂ ವಿಡಿಯೋಗಳ ಮೂಲಕ ಯುವಜನರು ಗಮನ ಸೆಳೆಯುತ್ತಿದ್ದಾರೆ.

LINKEDIN:
ವೃತ್ತಿಪರರಿಗೊಂದು ಪ್ರಮುಖವಾದ ವೇದಿಕೆ. ಕೆಲಸ ಪಡೆಯಲು ಉತ್ತಮ ವೇದಿಕೆ. ನಿಮ್ಮ ಉತ್ತಮ ಪರಿಚಯ ವಿವರಗಳು ಅನೇಕ ರೀತಿಗಳಲ್ಲಿ ನೆರವಾಗುತ್ತದೆ.

TELEGRAM & WHATSAPP:
ಸಂದೇಶಗಳಿಗೆ, ವಿಡಿಯೋಗಳಿಗೆ ಮತ್ತು ಚಿತ್ರಗಳನ್ನು ತಲುಪಿಸಲು ಸುಲಭ ಮಾರ್ಗ ಒದಗಿಸಿವೆ. ವಿಡಿಯೋ ಕಾಲ್ ಕೂಡ ಸಾಧ್ಯ.

TWITTER:
ನಮ್ಮ ಅನಿಸಿಕೆಗಳನ್ನು; ಭಾವನೆಗಳನ್ನು ತಕ್ಷಣವೇ ಹಂಚಿಕೊಳ್ಳಲು ಸಾಧ್ಯವನ್ನಾಗಿಸಿರುವ ವೇದಿಕೆ. ಪ್ರತಿ ವೇದಿಕೆಯ ಒಳ ಹೊಕ್ಕು ನೋಡಿದಾಗ ಮಾತ್ರ ಅಲ್ಲಿನ ಸೌಲಭ್ಯಗಳ ಬಳಕೆ ಸಾಧ್ಯ. ಬಳಸಿಕೊಳ್ಳಲು ಆರಂಭಿಸಿ; ನಿಮಗೆ ಹೊಸದೊಂದು ಲೋಕ ತೆರೆಯುತ್ತದೆ.

ನಿಮಗೆ ಶುಭವಾಗಲಿ.

ಜಯಪ್ರಕಾಶ್ ನಾಗತಿಹಳ್ಳಿ
ಮೆಂಟರ್, ಪವರ್ ಟಿವಿ

RELATED ARTICLES

Related Articles

TRENDING ARTICLES