Monday, December 23, 2024

ಕಾಳಿಸ್ವಾಮಿಗೆ ಷರತ್ತುಬದ್ಧ ಜಾಮೀನು

ಮಂಡ್ಯ : ಶ್ರೀರಂಗಪಟ್ಟಣ ಮಸೀದಿಯ ಬಗ್ಗೆ ವಿವಾದಿತ ಹೇಳಿಕೆ ಹಿನ್ನೆಲೆ ನೆನ್ನೆ ಬಂಧನಕ್ಕೊಳಪಡಿಸಿದ ಕಾಳಿಸ್ವಾಮಿಯನ್ನು ಇಂದು (ಬುಧವಾರ ) ನ್ಯಾಯಾಲಯವು ಷರತ್ತು ಬದ್ಧ ಜಾಮೀನನ್ನು ಮಂಜೂರು ಮಾಡಿದೆ.

ಪ್ರಚೋದನಕಾರಿ ಹೇಳಿಕೆ ನೀಡಿರುವ ಹಿನ್ನೆಲೆ ಮಂಗಳವಾರ ಕಾಳಿ ಸ್ವಾಮಿಯನ್ನು ಬಂಧಿಸಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಠಾಣೆಗೆ ಪೊಲೀಸರು ಕರೆತಂದಿದ್ದರು. ನಿನ್ನೆಯೇ ಜಾಮೀನು ಅರ್ಜಿಯನ್ನು ಕಾಳಿಸ್ವಾಮಿ ಪರ ವಕೀಲರು ಸಲ್ಲಿಸಿದ್ದರು. ನ್ಯಾಯಾಧೀಶರು ವಾದ-ವಿವಾದ ಆಲಿಸಿದರು. ಆದರೆ, ಕಾಳಿ ಸ್ವಾಮಿ ಜಾಮೀನು ನಿರಾಕರಿಸುವಂತೆ ಸರ್ಕಾರಿ ಅಭಿಯೋಜಕರ ಮನವಿ ಮಾಡಿದ್ದಾರೆ. ಸಾಕ್ಷ್ಯ ನಾಶ, ಮತ್ತೆ ಕೋಮು ಸೌಹಾರ್ಧಕ್ಕೆ ಧಕ್ಕೆ ತರುವ ಹೇಳಿಕೆ ಹಿನ್ನೆಲೆ ಜಾಮೀನು ನಿರಾಕರಿಸುವಂತೆ ಸರ್ಕಾರಿ ಅಭಿಯೋಜಕರು ಮನವಿ ಮಾಡಿದರು. ಇದರಿಂದ  ಶ್ರೀರಂಗಪಟ್ಟಣದ JMFC ನ್ಯಾಯಾಲಯ ನಿನ್ನೆ ಆದೇಶವನ್ನು ಕಾಯ್ದಿರಿಸಿತ್ತು.

ಆದರೆ,ಇಂದು 1 ಲಕ್ಷದ 1 ಬಾಂಡ್, ಪ್ರತಿ ಭಾನುವಾರ ಪಟ್ಟಣದ ಠಾಣೆಗೆ ಹಾಜರಾಗಿ ಸಹಿ ಹಾಕುವುದು,ಮತ್ತು ಸ್ಥಳೀಯ ವ್ಯಕ್ತಿ ಭದ್ರತೆ ಮೇರೆಗೆ ಕಾಳಿಸ್ವಾಮಿ ಅವರನ್ನು ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮೂಲಕ ಬಿಡುಗಡೆ ಮಾಡಿದೆ.

RELATED ARTICLES

Related Articles

TRENDING ARTICLES