Wednesday, January 22, 2025

ಇಂದಿರಾ ಗಾಂಧಿಯಿಂದ ಸ್ಫೂರ್ತಿ ಪಡೆದಿಲ್ಲ : ನಟಿ ರವೀನಾ ಟಂಡನ್​​​

ನಟಿ ರವೀನಾ ಟಂಡನ್​​​ ಅವರ ಪಾತ್ರವು ಕೆಜಿಎಫ್​​​​ ಚಿತ್ರದಲ್ಲಿ ದಿವಂಗತ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರ ಮಾದರಿಯಲ್ಲಿದೆ ಎಂದು ಈ ಹಿಂದೆ ವರದಿಯಾಗಿತ್ತು.

ಇದನ್ನು ನಿರಾಕರಿಸಿದ ರವೀನಾ ಟಂಡನ್ ಈ ಚಿತ್ರದಲ್ಲಿ ಇಂದಿರಾ ಗಾಂಧಿಜಿ ಬಗ್ಗೆ ಏನೂ ಇಲ್ಲ. ನನ್ನ ನೋಟ ಅಥವಾ ನನ್ನ ಪಾತ್ರ ಅವರಿಂದ ಸ್ಪೂರ್ತಿ ಪಡೆದಿಲ್ಲ. ನಾವು ಅಂತಹ ಯಾವುದೇ ಉಲ್ಲೇಖಗಳನ್ನು ತೆಗೆದುಕೊಂಡಿಲ್ಲ. ಈ ಚಿತ್ರವು 80 ರ ದಶಕದ ಕಥೆಯನ್ನ ಆಧಾರಿತವಾಗಿದ್ದು, ಚಿತ್ರದಲ್ಲಿ ನಾನು ಪ್ರಧಾನ ಮಂತ್ರಿಯಾಗಿ ನಟಿಸುತ್ತಿದ್ದೇನೆ.

ಅದನ್ನ ಹೊರತುಪಡಿಸಿ ನಾನು ಚಿತ್ರದಲ್ಲಿ ಇಂದಿರಾ ಗಾಂಧಿ ಅವರ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಎಂದು ಅನೇಕ ಊಹಾಪೋಹಗಳು ಕೇಳಿಬರುತ್ತಿವೆ ಎಂದರು.

RELATED ARTICLES

Related Articles

TRENDING ARTICLES