Wednesday, January 22, 2025

ಈಜಲು ಹೋಗಿ ಬಾಲಕಿ ನೀರು ಪಾಲು

ಚಾಮರಾಜನಗರ: ಹೊಳೆಗೆ ಈಜಲು ಹೋಗಿ ಬಾಲಕಿಯೊಬ್ಬಳು ನೀರುಪಾಲು ಆಗಿರುವ ಘಟನೆ ನಡೆದಿದೆ.

ಚಾಮರಾಜನಗರ ಜಿಲ್ಲೆ, ತಾಲೂಕಿನ ಚಿಕ್ಕಹೊಳೆ ಜಲಾಶಯದಲ್ಲಿ ಈ ದುರಂತ ಸಂಭವಿಸಿದ್ದು, ಸೌಂದರ್ಯ(15) ಎಂಬ ಬಾಲಕಿ ಮೃತ ದುರ್ದೈವಿ. ಇವರು ಚೆಂದುಕಟ್ಟೆಮೋಳೆ ಗ್ರಾಮದ ಕುಮಾರ್​ ಎಂಬುವವರ ಪುತ್ರಿಯಾಗಿದ್ದಾರೆ.

ಇಂದು ಸೌಂದರ್ಯ ತನ್ನ ಸ್ನೇಹಿತೆಯೊಟ್ಟಿಗೆ ಡ್ಯಾಮ್​​ ನೋಡಲು ತೆರಳಿದ್ದರು. ಈ ವೇಳೆ ನೀರಿನೊಳಗೆ ಇಳಿದು ಈ ಅವಘಡ ಜರುಗಿದೆ.

ಸದ್ಯ ಸ್ಥಳಕ್ಕೆ ರಾಮಸಮುದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಇನ್ನು ಈ ಸಂಬಂಧ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES