Wednesday, January 22, 2025

ಮೈಸೂರಿನಲ್ಲಿ ಮೂವರನ್ನ ಬಲಿ ಪಡೆದ ಕೊರೊನಾ

ರಾಜ್ಯ : ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಉಲ್ಬಣವಾಗುತ್ತಿದ್ದು, ಒಂದೇ ದಿನ ಮೂವರು ಸೋಂಕಿತರನ್ನ ಬಲಿ ಪಡೆದುಕೊಂಡಿದೆ.

ಮೈಸೂರಿನ ಎನ್.ಆರ್. ಮೊಹಲ್ಲದ ನಿವಾಸಿ ಉಮ್ಮೇ ಹಬೀಬ ಎಂಬವರು ಸಾವನ್ನಪ್ಪಿದ ಪ್ರಥಮ ಪಿಯುಸಿ ವಿದ್ಯಾರ್ಥಿನಿ. ಜನವರಿ 13 ರಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿ ಚಿಕಿತ್ಸೆಗೆ ಸ್ಫಂದಿಸದೆ ಸಾವನ್ನಪ್ಪಿದ್ದಾರೆ. 65 ವರ್ಷ ಪ್ರಾಯದ ಟಿ ನರಸೀಪುರದ ಜಯಲಕ್ಷ್ಮಮ್ಮ ಸೋಂಕಿಗೆ ಬಲಿಯಾದ ಎರಡನೇ ವ್ಯಕ್ತಿಯಾದ್ರೆ, 67 ವರ್ಷ ಪ್ರಾಯದ ಹುಣಸೂರಿನ ಶ್ರೀಕಂಠಚಾರ್ಯ ಅವ್ರು ಚಿಕಿತ್ಸೆ ಫಲಕಾರಿಯಾಗದೆ ಸಾವೀಗೀಡಾದ ಮೂರನೇ ವ್ಯಕ್ತಿ.

RELATED ARTICLES

Related Articles

TRENDING ARTICLES