Thursday, December 19, 2024

ಸ್ನೇಹಿತರಿಂದಲೇ ಯುವಕನ ಕೊಲೆ

ಚಿಕ್ಕಬಳ್ಳಾಪುರ : ಸ್ನೇಹಿತರ ಗುಂಪೊಂದು ಇನ್ನೋರ್ವ ಸ್ನೇಹಿತನ ಕತ್ತು ಕೊಯ್ದು ಬರ್ಬರವಾಗಿ ಕೊಂದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗೆಜ್ಜೆಗಾನಹಳ್ಳಿಯಲ್ಲಿ ನಡೆದಿದೆ.

ಚಳಿಗಾಲದ ಮಾಘಿಯ ಚಳಿಗೆ ಬೆಚ್ಚಗಾಗಲೂ ಅಂತ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಶೀಗೆಹಳ್ಳಿ ಗ್ರಾಮದ ಮೋಹನ್, ಪ್ರಭಾಕರ್, ಸುಮನ್, ನಂದನ್ ಅನ್ನೋ ಆಪ್ತರು ಎಣ್ಣೆ ಹೊಡೆಯಲು ಪಕ್ಕದ ಗ್ರಾಮ ಗೆಜ್ಜಿಗಾನಹಳ್ಳಿ ಬಳಿ ಇರುವ ನೀಲಗಿರಿ ತೋಪಿಗೆ ಹೋಗಿದ್ದಾರೆ. ನಾಲ್ಕು ಜನ ಜೀವದ ಗೆಳೆಯರು ಕಂಠಪೂರ್ತಿ ಎಣ್ಣೆ ಹೊಡೆದು ನಂತರ ಜೊತೆಗಿದ್ದ 25 ವರ್ಷದ ಸ್ನೇಹಿತ ಮೋಹನ್​​ನ ಕತ್ತಿಗೆ ಚಾಕುವಿನಿಂದ ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಕಳೆದ ಎರಡು ಮೂರು ದಿನಗಳಿಂದಳೇ ಪ್ರಭಾಕರ್, ಮೋಹನ್​​ದು ತುಂಬಾ ಆಗಿದೆ ಅವನನ್ನು ಕೊಲೆ ಮಾಡುವುದಾಗಿ ಹೇಳಿಕೊಂಡಿದ್ದಾನೆ. ಅದನ್ನು ಮೋಹನ್ ತನ್ನ ಸಂಬಂಧಿ ಮನು ಬಳಿ ಹೇಳಿಕೊಂಡಿದ್ದಾನೆ. ಆದ್ರೆ, ಮನು ಎಲ್ಲರೂ ಸ್ನೇಹಿತರು ಎಣ್ಣೆ ಹೊಡೆದಾಗ ಒಂದು ರೀತಿ, ನಶೆ ಇಳಿದ ಮೇಲೆ ಇನ್ನೊಂದು ರೀತಿ ಇರ್ತಿರಿ ಸ್ನೇಹಿತರು ಏನೋ ತಮಾಷೆ ಮಾಡಿರಬೇಕು ಅಂತ ಧೈರ್ಯ ತುಂಬಿದ್ದಾನೆ. ಆದ್ರೆ, ಇಂದು ಪ್ರಭಾಕರ್ ಮತ್ತವನ ಸ್ನೇಹಿತರು, ಹೇಳಿದಂತೆ ಮೋಹನ್ ನ ಕೊಲೆ ಮಾಡಿದ್ದಾರೆ.

ಮೋಹನ್ ಕೊಲೆ ಮಾಡಲೆಂದೇ ಪ್ರಭಾಕರ್, ಸುಮನ್, ನಂದನ್ , ಮೋಹನ್​​ನನ್ನು ನಂಬಿಸಿ ಎಣ್ಣೆ ಪಾರ್ಟಿಗೆ ಕರೆದುಕೊಂಡು ಹೋಗಿದ್ದಾರೆ. ಕಂಠಪೂರ್ತಿ ಎಣ್ಣೆ ಕುಡಿದ ಮೇಲೆ, ಮೊದಲೇ ಸ್ಕೇಚ್ ಹಾಕಿದಂತೆ ಮೋಹನ್​​ನ ಕಥೆ ಮುಗಿಸಿದ್ದಾರೆ. ಇದ್ರಿಂದ ಮೋಹನ್ ಸ್ಥಳದಲ್ಲೇ ಸಾವಿನ ಮನೆ ಸೇರಿದ್ದಾನೆ. ಪೊಲೀಸರು ಆರೋಪಿಗಳು ಮತ್ತೆ ಗ್ರಾಮಕ್ಕೆ ಬರದಿರುವಂತೆ ಕ್ರಮ ಕೈಗೊಳ್ಳಬೇಕು ಅಂತ ಮೋಹನ್ ಸಂಬಂಧಿ ಮನು ಮನವಿ ಮಾಡಿದ್ದಾರೆ.

ಯುವಕನ ಬರ್ಬರ ಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಶಿಡ್ಲಘಟ್ಟ ಗ್ರಾಮಾಂತರ ಠಾಣೆ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಇತ್ತ ಗ್ರಾಮದಲ್ಲಿ ಕಬಡ್ಡಿ ಕ್ರಿಕೆಟ್ ನಂಥಹ ಕ್ರೀಡೆಗಳನ್ನು ಆಯೋಜಿಸಿ, ಜನ ಮೆಚ್ಚುಗೆ ಪಡೆದಿದ್ದ ಮೋಹನ್, ಸ್ವತಃ ತನ್ನ ಆಪ್ತ ಸ್ನೇಹಿತರಿಂದಲೇ ಬರ್ಬರವಾಗಿ ಹತ್ಯೆಯಾಗಿದ್ದು ಮಾತ್ರ ವಿಪರ್ಯಾಸಯಾಗಿದೆ.

RELATED ARTICLES

Related Articles

TRENDING ARTICLES