ಶಿವಮೊಗ್ಗ : ಮನೆ ಮುಂಭಾಗದಲ್ಲಿ ಇಡಲಾಗಿದ್ದ ಮಗುವಿನ ಶೂ ಒಳಗೆ ಹಾವು ಸೇರಿಕೊಂಡು ಮನೆಯವರೆಲ್ಲಾ ಗಾಬರಿ ಉಂಟಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ನಗರದ ಗೋಪಿಶೆಟ್ಟಿಕೊಪ್ಪ ಮಂಜಪ್ಪ ಗದ್ದೆಮನೆ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ಅಳವಡಿಸುತ್ತಿರುವ 24 ಗಂಟೆ ನೀರು ಸರಬರಾಜು ಯೋಜನೆಯ ಮಾಪಕದ ಮೂಲಕ ಬಂದು, ಮನೆ ಮುಂಭಾಗದಲ್ಲಿ ಬಿಡಲಾಗಿದ್ದ ಮಗುವಿನ ಶೂ ಒಳಗಡೆ ಸೇರಿಕೊಂಡಿದೆ.
ಈ ವೇಳೆ ಮನೆಯಲ್ಲಿದ್ದವರೆಲ್ಲಾ ಗಾಬರಿಯಾಗಿದ್ದಾರೆ. ಸುಮಾರು 3 ಅಡಿ ಉದ್ದದ ಹಾವನ್ನು ಕಂಡು ಬೆಚ್ಚಿದ ಮನೆಯವರು, ಬಳಿಕ ಉರಗಪ್ರೇಮಿ ಸ್ನೇಕ್ ಕಿರಣ್ ಅವರನ್ನು ಕರೆಸಿದ್ದಾರೆ. ಬಳಿಕ ಸ್ನೇಕ್ ಕಿರಣ್, ಶೂನಲ್ಲಿ ಅವಿತು ಕುಳಿತಿದ್ದ ಹಾವನ್ನು ಸಂರಕ್ಷಿಸಿದ್ದಾರೆ. ಇದು ನೀರು ಹಾವು ಎಂದ ಬಳಿಕವಷ್ಟೇ, ಮನೆಯವರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ, ಹಾವು ಹಿಡಿಯಲು ಎಲ್ಲರೂ ಟ್ರೈ ಮಾಡಬೇಡಿ ಎಂದು ಹಾವುಗಳ ಬಗ್ಗೆ ತಿಳುವಳಿಕೆ ನೀಡಿದ ಸ್ನೇಕ್ ಕಿರಣ್, ಬಳಿಕ ಹಾವನ್ನು ಕಾಡಿಗೆ ಬಿಟ್ಟಿದ್ದಾರೆ.
ಹಾವು ನೋಡದೇ, ಕತ್ತಲಲ್ಲಿ ಶೂ ಹಾಕಿಕೊಳ್ಳಲು ಮುಂದಾಗಿದ್ದರೆ, ನಮ್ಮ ಗತಿ ಏನು ಅಂತಾ ಮನೆಯವರು ಯೋಚನೆ ಮಾಡಿದ್ದಾರೆ.