Monday, December 23, 2024

ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ನಾರಾಯಣ ಮೂರ್ತಿ ಅಳಿಯ ರಿಷಿ ಸುನಕ್

ಆಂಗ್ಲರ ನಾಡು ಬ್ರಿಟನ್​ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇದ್ದೇ ಇರುತ್ತದೆ. ಅಲ್ಲಿನ ರಾಜಕಾರಣಿಗಳು ಮಾಡುವ ಸಣ್ಣ ತಪ್ಪು ಕೂಡ ಬಹುದೊಡ್ಡ ವಿವಾದವಾಗಿ ಮಾರ್ಪಡುತ್ತದೆ. ಹೀಗೆ ವಿವಾದಕ್ಕೆ ಒಳಪಟ್ಟ ಅಲ್ಲಿನ ರಾಜಕಾರಣಿಗಳು ವೈಯಕ್ತಿಕವಾಗಿ ಟೀಕೆಗೆ ಗುರಿಯಾಗುವುದರ ಜೊತೆಗೆ, ರಾಜಕೀಯವಾಗಿ ಅವರ ತಲೆದಂಡವಾಗುವುದು ಕೂಡ ಅಲ್ಲಿ ಸರ್ವೇಸಾಮಾನ್ಯವಾಗಿದೆ. ಹೀಗಾಗಿ ಬ್ರಿಟನ್​​ನಲ್ಲಿ ಸಾಕಷ್ಟು ಜನ ರಾಜಕೀಯಕ್ಕೆ ಇಳಿಯ ಬೇಕು ಅಂದ್ರೆ ಹಲವು ಬಾರಿ ಹಿಂದೆ ಮುಂದೆ ಯೊಚನೆ ಮಾಡ್ತಾರೆ. ಒಂದು ವೇಳೆ ಧೈರ್ಯ ಮಾಡಿ ಅಲ್ಲಿನ ರಾಜಕೀಯಕ್ಕೆ ಇಳಿಯುವ ನಾಯಕರು ತಾವು ಯಾವುದೇ ವಿವಾದದಲ್ಲಿ ಸಿಲುಕಿಕೊಳ್ಳದ ಹಾಗೆ ನೋಡಿಕೊಳ್ತಾರೆ. ಇದೀಗ ಇದೇ ರೀತಿಯಾದ ಧರ್ಮ ಸಂಕಟಕ್ಕೆ ಸಿಲುಕಿರುವ ಬೋರಿಸ್​ ಜಾನ್ಸನ್​ ಈಗ ತಮ್ಮ ತಲೆದಂಡವಾಗುವ ಭೀತಿಯಲ್ಲಿದ್ದಾರೆ.

57 ವರ್ಷದ ಬೋರಿಸ್​ ಜಾನ್ಸನ್ ಇದೀಗ ವಿವಾದದ ಸುಳಿಗೆ ಸಿಲುಕಿದ್ದಾರೆ. ಸ್ವಪಕ್ಷೀಯದವರಿಂದಲೇ​ ತೀವ್ರ ವಿರೋಧವನ್ನ ಕೂಡ ಎದುರಿಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಬ್ರಿಟನ್​ ಪ್ರಧಾನಿಯ ಎಣ್ಣೆ ಪಾರ್ಟಿ ವಿಚಾರ. ಇಡೀ ಬ್ರಿಟನ್​ 2020ರ ಮೇ ತಿಂಗಳಲ್ಲಿ ಮೊದಲ ಕೋವಿಡ್​ ಲಾಕ್​ಡೌನ್​ನಿಂದ ತತ್ತರಿಸಿ ಹೋಗಿತ್ತು. ಆದರೆ, ಇದೇ ವೇಳೆ ಲಂಡನ್​ನ ಡ್ರೌವ್ನಿಂಗ್ ಸ್ಟ್ರೀಟ್​ನಲ್ಲಿ ಪ್ರಧಾನಿ ಜಾನ್ಸನ್​ ಎಣ್ಣೆ  ಪಾರ್ಟಿ ನಡೆಸಿದ್ದಾರೆ ಅಂತ ಹೇಳಲಾಗ್ತಾ ಇದೆ. ಇದನ್ನು ಸ್ವತಃ ಬ್ರಿಟನ್​ ಪ್ರಧಾನಿಯೇ ಒಪ್ಪಿಕೊಂಡಿದ್ದು, 2020ರ ಬೇಸಿಗೆಯಲ್ಲಿ ತನ್ನ ಕಚೇರಿಯಲ್ಲಿ ಪಾರ್ಟಿ ಆಯೋಜಿಸಿದ್ದಾಗಿ ಹೇಳಿದ್ದಾರೆ. ಆದರೆ, ಇದಕ್ಕೆ ಪ್ರಮುಖ ಕಾರಣವನ್ನ ನೀಡಿರುವ ಜಾನ್ಸನ್​, ಸಾಂಕ್ರಮಿಕ ಸಮಯದಲ್ಲಿ ತಮ್ಮ ಸಿಬ್ಬಂದಿಯ ಶ್ರಮಕ್ಕೆ ಪ್ರತಿಫಲವಾಗಿ ಈ ಕಾರ್ಯಕ್ರಮ ನಡೆಸಲಾಯಿತು ಅಂತ ಸಮರ್ಥಿಸಿಕೊಂಡಿದ್ದಾರೆ.

ಇದೀಗ ಈ ವಿಚಾರ ಬ್ರಿಟನ್​ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿದ್ದು, ಪಾರ್ಟಿ ನಡೆಸಿದಕ್ಕೆ ಸಂಬಂಧಿಸಿದ ವಿಡಿಯೋವೊಂದು  ಇತ್ತೀಚೆಗಷ್ಟೇ ಸಿಕ್ಕಾಪಟ್ಟೆ ವೈರಲ್​ ಆಗಿದೆ, ಇದರ ಬಗ್ಗೆ  ಪ್ರತಿಪಕ್ಷ ಲೇಬರ್​ ಪಾರ್ಟಿ ಮತ್ತು ತಮ್ಮದೇ ಕನ್ಸರ್ವೇಟಿವ್​ ಪಕ್ಷದಲ್ಲೇ ತೀವ್ರ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ಬ್ರಿಟನ್​ ಜನರ ಕೆಂಗಣ್ಣಿಗೂ ಜಾನ್ಸನ್​ ಅವರ ನಡೆ ಗುರಿಯಾಗಿದ್ದು, ಅವರ ಖ್ಯಾತಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಾ ಇದೆ, ಇದು ಪಕ್ಷದ ಮೇಲೆ ಪರಿಣಾಮ ಬೀಳಲಿದೆ ಎಂಬುದು ಸ್ವಪಕ್ಷದ ನಾಯಕರ ಅಭಿಪ್ರಾಯವಾಗಿದ್ದು. ಬೊರೀಸ್​ ಜಾನ್ಸನ್​ ಅವರನ್ನ ಪ್ರಧಾನಿ ಹುದ್ದಯಿಂದ ಕೈಬಿಡಲು ಅಲ್ಲಿನ ಸದಸ್ಯರು ಒತ್ತಾಯವನ್ನ ಮಾಡುತ್ತಿದ್ದಾರೆ.

ಇದೀಗ ಇದೇ ಕಾರಣಕ್ಕೆ ಬೊರೀಸ್​ ಜಾನ್ಸನ್​ ಹೆಸರು ಸಿಕ್ಕಾಪಟ್ಟೆ ಸುದ್ದಿ ಮಾಡ್ತಾ ಇದ್ದು, ಬ್ರಿಟನ್ ಪ್ರಧಾನಿ ಕೆಲ ತಿಂಗಳಲ್ಲಿ ರಾಜೀನಾಮೆ ಸಲ್ಲಿಸಲಿದ್ದಾರೆ ಅಂತ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿವೆ. ಆದ್ರೆ ಕೇವಲ ಇಷ್ಟು ಮಾತ್ರವಾಗಿದ್ದರೆ ಈ ವಿಚಾರ  ಸುದ್ಧಿಯಾಗ್ತಾ ಇರಲಿಲ್ಲ. ಅಂತರಾಷ್ಟ್ರೀಯ ಮಾಧ್ಯಮಗಳು ಮಾಡಿರುವ ವರದಿಯ ಪ್ರಕಾರ ಒಂದು ವೇಳೆ ಬೋರಿಸ್​ ಜಾನ್ಸನ್​ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಅವರ ಸ್ಥಾನಕ್ಕೆ ಇನ್ಫೋಸಿಸ್​ ಸಹ ಸಂಸ್ಥಾಪಕ ನಾರಯಣ ಮೂರ್ತಿ ಅಳಿಯ ಹಾಗು ಭಾರತೀಯ ಮೂಲದ ರಿಷಿ ಸುನಕ್​ ಪ್ರಧಾನಿಯಾಗುವ ಸಾಧ್ಯತೆ ಇದೆ ಅನ್ನೊ ಅಭಿಪ್ರಾಯವನ್ನ ಹೊರ ಹಾಕಿದ್ದಾರೆ.

ಒಂದು ವೇಳೆ ತಮ್ಮ ಪಕ್ಷದವರ ಒತ್ತಾಯಕ್ಕೆ ಮಣಿದು ಜಾನ್ಸನ್​​​ ರಾಜೀನಾಮೆ ನೀಡಿದರೆ, ಮುಂದಿನ ಬ್ರಿಟನ್​ ಪ್ರಧಾನಿ ಯಾರಾಗಲಿದ್ದಾರೆ ಅನ್ನೋ ಕುತೂಹಲ ಕೂಡ ಗರಿಗೆದರಿದೆ. ಇದೀಗ ಈ ಪ್ರಧಾನಿ ಹುದ್ದೆಯ ರೇಸ್​ನಲ್ಲಿ ಭಾರತೀಯ ಮೂಲದ ರಿಷಿ ಸುನಕ್​ ಮುಂಚೂಣಿಯಲ್ಲಿದ್ದಾರೆ. ಈಗಾಗಲೇ ಜಾನ್ಸನ್​ ನೇತೃತ್ವದ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ರಿಷಿ ಸುನಕ್​ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಈ ವಿವಾದ ಬುಗಿಲೇಳುತ್ತಿದ್ದಂತೆ ಬುಧವಾರ ಜಾನ್ಸನ್​​ ಅವರು ಹೌಸ್​ ಆಫ್​ ಕಾಮನ್​ನಲ್ಲಿ ಕ್ಷಮೆಯಾಚಿಸಿದ್ದಾರೆ. ಈ ವೇಳೆ ಸುನಕ್​ ಗೈರಾಗಿದ್ದರು. ಆದರೆ, ಈ ಬಗ್ಗೆ ಟ್ವೀಟ್​ ಮಾಡಿದ್ದ ರಿಷಿ ಸುನಕ್, ಪ್ಲಾನ್​ ಫಾರ್​ ಜಾಬ್ ಯೋಜನೆಯ ನಿರಂತರ ಕೆಲಸ​ ಹಾಗು ಇಂಧನ ಪರಿಸ್ಥಿತಿ ಬಗ್ಗೆ ಸಂಸದರೊಂದಿಗೆ ಮೀಟಿಂಗ್​ ಇದ್ದಿದ್ದರಿಂದ ಹಾಜರಾಗೋದಕ್ಕೆ ಸಾಧ್ಯವಾಗಿಲ್ಲ ಅಂತ ಹೇಳಿದ್ದಾರೆ. ಆದರೆ, ಗೈರಿನ ಹಿಂದೆ ಮತ್ತೊಂದು ಊಹಾಪೋಹ ಕೂಡ ಹರಿದಾಡ್ತಾ ಇದೆ. ಜಾನ್ಸನ್​ ಅವರಿಂದ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದಲೇ ಸುನಕ್​ ಗೈರಾಗಿದ್ದಾರೆ ಅಂತ ಹೇಳಲಾಗುತ್ತ ಇದೆ.

ಸದ್ಯಕ್ಕೆ ಹಣಕಾಸು ಸಚಿವರಾಗಿ ಆಯ್ಕೆಯಾದಾಗಿನಿಂದ ರಿಷಿ ಸುನಕ್​ ಅವರಿಗೆ ಸಾಕಷ್ಟು ಜನ ಬೆಂಬಲವಿದೆ. ಇದರ ಜೊತೆಗೆ ಅವರಿಗೂ ಪ್ರಧಾನಿ ಹುದ್ದೆಯ ಮೇಲೆ ತುಂಬಾ ಉತ್ಸಾಹವಿದೆ. ಅಲ್ಲದೆ ಅವರ ಪಕ್ಷದಲ್ಲೂ ಸುನಕ್​ಗೆ ಒಳ್ಳೆಯ ಬೆಂಬಲವಿದೆ ಹೀಗಾಗಿ ರಿಷಿ ಸುನಕ್​ ಬಗ್ಗೆ ಸಾಕಷ್ಟು ಅಂತರಾಷ್ಟ್ರೀಯ ಮಾಧ್ಯಮಗಳು ಸುದ್ಧಿ ಮಾಡ್ತಾ ಇದ್ದು, ಒಂದು ವೇಳೆ ರಿಷಿ ಸುನಕ್​ ಇಂಗ್ಲೆಂಡಿನ ಪ್ರಧಾನಿಯಾದ್ರು ಅದ್ರಲ್ಲಿ ಅಚ್ಚರಿ ಪಡುವಂತಹದ್ದು ಏನು ಇಲ್ಲ ಅಂತ ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಲಿಖಿತ್​​ ರೈ, ಪವರ್​ ಟಿವಿ

RELATED ARTICLES

Related Articles

TRENDING ARTICLES