Wednesday, January 22, 2025

ಐತಿಹಾಸಿಕ ಚಿಕ್ಕಲೂರು ಜಾತ್ರೆಗೆ ಕೊರೋನಾ ಕರಿ‌‌ ನೆರಳು

ಚಾಮರಾಜನಗರ : ಪ್ರತಿವರ್ಷ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನಡೆಯುತ್ತಿದ್ದ ಚಿಕ್ಕಲ್ಲೂರು ಜಾತ್ರೆ, ಈ ಬಾರಿ ಜಾತ್ರಯಲ್ಲಿ ದೇವಾಲಯ ಆವರಣದ ಬಿಕೋ ಎನ್ನುತ್ತಿತ್ತು.

ಜಿಲ್ಲೆಯ ಐತಿಹಾಸಿಕ ಚಿಕ್ಕಲೂರು ಜಾತ್ರೆಯು ಐದು ದಿನಗಳ ತನಕ ನಡೆಯುವ ಜಾತ್ರೆಯಲ್ಲಿ ಅಪಾರ ಭಕ್ತರರನ್ನು ಬರುತ್ತಿದ್ದರು,ಆದರೆ ಈ ವರ್ಷ ಕೊರೋನಾ ಹಿನ್ನೆಲೆ ಭಕ್ತರ ನಿಷೇಧದೊಂದಿಗೆ ಸರಳವಾಗಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳಿಗೆ ಮಾತ್ರ ಸೀಮಿತವಾಗಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಐತಿಹಾಸಿಕ ದೇವಾಲಯವಾದ ಸಿದ್ದಪಾಜಿ ಸಂಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಜಾತ್ರೆ ನಡೆಯುತ್ತಿದ್ದು, ಕೊವೀಡ್ ಮೂರನೇ ಅಲೆಯ ಆತಂಕದಲ್ಲಿ ಸರಳವಾಗಿ ದೇವಸ್ಥಾನದ ಅರ್ಚಕರು ಹಾಗೂ ಕಮಿಟಿಯವರಿಗೆ ಮಾತ್ರ ಜಿಲ್ಲಾಡಳಿತ ಅವಕಾಶ ನೀಡಿದೆ. ಹಾಗೂ ಜಾತ್ರೆಗೆ ಸಾರ್ವಜನಿಕರು ಮತ್ತು ಭಕ್ತರನ್ನು ನಿಷೇಧಿಸಿದೆ.

ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಜಾತ್ರೆಯು ಐದು ದಿನಗಳ ಕಾಲ ನಡೆಯುತ್ತದೆ, ಆದರೆ ನೆನ್ನೆಯಿಂದ ಜಾತ್ರೆ ಪ್ರಾರಂಭವಾಗಿದ್ದು ಮೊದಲ ದಿನವಾದ ನಿನ್ನೆ ರಾತ್ರಿ‌ ಧಾರ್ಮಿಕ ವಿಧಿ ವಿಧಾನದಲ್ಲಿ ರಾಜ ಬೊಪ್ಪೇಗೌಡನ ಪುರ ಸಂಸ್ಥಾನ ಮಠದ ಜ್ಞಾನಾನಂದ ಚನ್ನರಾಜೇ ಅರಸ್ ಅವರು ಅಗ್ನಿ ಸ್ಪರ್ಶ ಮಾಡುವ ಮೂಲಕ ಜಾತ್ರೆಗೆ ವಿದ್ಯುಕ್ತ ಚಾಲನೆ ನೀಡಿದರು. ಮತ್ತು ಪೊಲೀಸರ ಸರ್ಪಗಾವಲಿನಲ್ಲಿ ಜಾತ್ರೆಯ ಮೊದಲ ದಿನದ ಚಂದ್ರಮಂಡಲ ಕಾರ್ಯಕ್ರಮವೂ ಜರುಗಿತು.

ಕಠಿಣ ರೂಲ್ಸ್ ಪಾಲನೆ ನಡುವೆಯೇ ಪವಾಡ ಪುರುಷ ಶ್ರೀಸಿದ್ದಪ್ಪಾಜಿ ಸರಳ ಜಾತ್ರೆ ಪ್ರಾರಂಭವಾಗಿದ್ದು, ದೇವಾಲಯದ ಮುಂಭಾಗವಿರುವ ಚಂದ್ರಮಂಡಲ ಕಟ್ಟೆಯಲ್ಲಿ ಸಿದ್ದ ಪಡಿಸಿದ್ದ  ಬಿದಿರಿನಾಕೃತಿಯ ಚಂದ್ರ ಮಂಡಲಕ್ಕೆ ಬಸವ, ಕಂಡಾಯಗಳು, ಸತ್ತಿಗೆ, ಸುರಾಪಾನಿ’ ಜಾಗಟೆ, ತಮಟೆ, ನಗಾರಿ ಮಂಗಳ ವಾದ್ಯಗಳು ಹಾಗೂ ನೀಲಗಾರರ ಸಾಂಪ್ರದಾಯಿಕ ವಿಧಿ ವಿಧಾನಗಳೊಡನೆ ಚಾಲನೆ ನೀಡಲಾಯಿತು.

ಅಗ್ನಿ ಸ್ಪರ್ಶ ಬಳಿಕ ಧಗಧಗನೆ ಹೊತ್ತಿ ಹುರಿದ ಚಂದ್ರ ಮಂಡಲ ಜ್ವಾಲೆಯು ದಕ್ಷಿಣ ದಿಕ್ಕಿಗೆ ವಾಲಿ ಉರಿದು ಆಕಾಶಕ್ಕೆ ಮುಖ ಮಾಡಿ‌ ಪ್ರಜ್ವಲಿಸಿದೆ. ಇದು ಯಾವ ದಿಕ್ಕಿಗೆ ಪ್ರಜ್ವಲಿಸುತ್ತದೆಯೋ ಆ ದಿಕ್ಕಿನಲ್ಲಿ ಮಳೆ ಬೆಳೆ ಉತ್ತಮವಾಗುತ್ತದೆ ಎಂಬುದು ಈ ಭಾಗದ ಜನರ‌ ನಂಬಿಕೆ. ಅಲ್ಲದೇ ಈ ವೇಳೆ ಸುಗ್ಗಿಯಾದ ಕಾರಣ ಬೆಳೆದ ದವಸ ಧಾನ್ಯವನ್ನು ಭಕ್ತರು ಚಂದ್ರಮಂಡಲಕ್ಕೆ ಹಾಕುವ ಮೂಲಕ ಭಕ್ತಿ ಮೆರೆಯುತ್ತಾರೆ.

ಜಾತ್ರೆಗೆ ಸಾರ್ವನಿಕರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಬಂದೋಬಸ್ತ್​​​ಗಾಗಿ 150 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿರುವ ಜಿಲ್ಲಾಡಳಿತ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಭಕ್ತರ ಆಗಮನಕ್ಕೆ ಕಡಿವಾಣ ಹಾಕಿದ್ದಾರೆ.

RELATED ARTICLES

Related Articles

TRENDING ARTICLES