ಬೆಂಗಳೂರು : ಕರ್ನಾಟಕ ಆರ್ಯವೈಶ್ಯ ಮಹಾಸಭಾ ಕಳೆದ 10 ವರ್ಷಗಳಿಂದ ಸಮಾಜದ ಶ್ರೇಯೋಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಲೇ ಇದೆ.ಇದಕ್ಕೆ ಸಾಕ್ಷಿ ಎಂಬುವಂತೆ ಅಂಗವಿಕಲರ ಮಾಸಾಶನ, ವಿಧವಾ ಮಾಸಾಶನ, ವಾನಪ್ರಸ್ಥಾಶ್ರಮ, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಬಡ್ಡಿರಹಿತ ಒಂದು ಲಕ್ಷದ ಸಾಲದ ಸೌಲಭ್ಯ, ಸೇರಿದಂತೆ ಹಲವಾರು ಸಮಾಜಮುಖಿ ಕೆಲಸವನ್ನ ಮಾಡುತ್ತಿದೆ.
ಇಂತಹ ಮಾನವೀಯ ಮೌಲ್ಯಗಳ ಕಾರ್ಯಕ್ರಮಗಳ ಜೊತೆಗೆ ಅರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಕ್ಕಾಗಿ, ಪ್ರತಿ ವರ್ಷವೂ ಉನ್ನತ ವ್ಯಾಸಂಗದ ಸುಮಾರು 200 ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಅವಶ್ಯಕತೆಗೆ ತಕ್ಕಂತೆ ಲ್ಯಾಪ್ ಟಾಪ್‌ಗಳನ್ನ ನೀಡುತ್ತಾ ಬಂದಿದೆ. ಅದೇ ರೀತಿ ಈ ಬಾರಿಯೂ ಕೂಡ ನಾಲ್ಕನೇ ವರ್ಷದ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮವನ್ನು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಸಂಸ್ಥೆಯಲ್ಲಿ ಆಯೋಜಿಸಲಾಗಿತ್ತು.
ಕೋವಿಡ್ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ 200ಲ್ಯಾಪ್‌ಟಾಪ್‌ಗಳನ್ನು ಉಚಿತವಾಗಿ ನೀಡಲಾಯ್ತು. ಈ ಕಾರ್ಯಕ್ರಮಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷರಾದ ಆರ್.ಪಿ ರವಿಶಂಕರ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಅಶೋಕ್ ಹಾರ್ನಹಳ್ಳಿ ಬಿಬಿಎಂಪಿ ಮಾಜಿ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದ ಮಂಜುನಾಥ್ ರಾಜು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದರು. ಲ್ಯಾಪ್‌ಟಾಪ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆಗಳ ಜೊತೆಗೆ ಮಾನವೀಯ ಮೌಲ್ಯಗಳ ಹಿತನುಡಿಗಳನ್ನು ನುಡಿದರು.ಇನ್ನು ಇದೇ ಸಂದರ್ಭದಲ್ಲಿ ಲ್ಯಾಪ್‌ಟಾಪ್ ಪಡೆದ ವಿದ್ಯಾರ್ಥಿಗಳು ಕೂಡಾ ಸಂತಸ ವ್ಯಕ್ತಪಡಿಸಿದರು.