Monday, December 23, 2024

ಹೆಚ್​​ ಡಿ ರೇವಣ್ಣ ಏಕಾಂಗಿ ಪ್ರತಿಭಟನೆ

ರಾಜ್ಯ: ಹೊಳೆನರಸೀಪುರ ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜಿನಲ್ಲಿ ಎಂಎಸ್‍ಸಿ ಸೈಕಾಲಜಿ ಮತ್ತು ಫುಡ್ ಮತ್ತು ನ್ಯೂಟ್ರೀಷಿಯನ್ ಕೋರ್ಸ್‍ಗಳ ಆರಂಭಕ್ಕೆ ಆಗ್ರಹಿಸಿ ಮತ್ತು ಕರ್ನಾಟಕ ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಏಕಾಂಗಿಯಾಗಿ ಪ್ರತಿಭಟನೆ ಮಾಡಿದ್ದಾರೆ.

2022-23ನೆ ಶೈಕ್ಷಣಿಕ ಸಾಲಿನಲ್ಲಿ ಎರಡು ಹೊಸ ಕೋರ್ಸ್‍ಗಳ ಪ್ರಾರಂಭಕ್ಕೆ ಸರ್ಕಾರ ಅನುಮತಿ ನೀಡಬೇಕೆಂದು ಒತ್ತಾಯಿಸಿ ಇಂದು ಸಿಎಂ ಗೃಹ ಕಚೇರಿ ಕೃಷ್ಣಾ ಎದುರು ಪ್ರತಿಭಟನೆ ನಡೆಸಿದ ರೇವಣ್ಣ, M.Sc ಫುಡ್ ಆ್ಯಂಡ್ ನ್ಯೂಟ್ರಿಷನ್, M.Sc ಸೈಕಾಲಜಿ ಸ್ನಾತಕೋತ್ತರ ಪದವಿ ಮಂಜೂರಿಗೆ ಒತ್ತಾಯಿಸಿದ್ದಾರೆ.

ಹೊಸ ಸ್ನಾತ್ತಕೋತ್ತರ ಪದವಿ ನೀಡಲು ರಾಜ್ಯ ಸರ್ಕಾರ ನಿರಾಕರಿಸಿದ್ದು, ಹೊಸ ಪದವಿಗಳನ್ನು ನೀಡಲು ಸಾಧ್ಯವಿಲ್ಲ ಅಂತ ಸಚಿವ ಅಶ್ವಥ್ ನಾರಾಯಣ್ ತಿಳಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜೂರು ಮಾಡಿದ್ದರೂ ಸಚಿವರು ತಡೆ ಹಿಡಿದಿದ್ದಾರೆ ಅಂತ  ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರು ಪ್ರತಿಭಟನೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES