ಹುಲಿ ಈ ಪ್ರಾಣಿಯನ್ನ ನೋಡಿದ್ರೆ ಅದೆಂತವರಾದ್ರು ಒಮ್ಮೆ ಆಕರ್ಶಿತರಾಗದೆ ಇರಲಾರರು. ಅಂದರ ಗಂಭೀತ ನಡೆ, ತೀಕ್ಷ್ಣ ನೋಟ, ಬೇಟೆಗಾಗಿ ಅವುಗಳು ಹಾಕುವ ರಣತಂತ್ರ, ಜಿಂಕೆಗಳನ್ನ ಕೊಂಡು ಭಕ್ಷಿಸುವ ರೀತಿ ಹೀಗೆ ನಾನಾ ಕಾರಣಗಳಿಂದ ಹುಲಿ ಸಾಕಷ್ಟು ರೀತಿಯಾಗಿ ಆಕರ್ಷಿಸುವುದರ ಜೊತೆಗೆ, ಕುತೂಹಲದ ಪ್ರಾಣಿಯಾಗಿ ಹೊರಹೊಮ್ಮಿದೆ. ಇವತ್ತು ದೇಶದಲ್ಲಿ ಸಾಕಷ್ಟು ಹುಲಿಗಳಿದ್ದು, ಆದ್ರೆ ಅವುಗಳ ಸಂಖ್ಯೆ ಹೇಳಿಕೊಳ್ಳುವಷ್ಟರ ಮಟ್ಟಿಗೆ ಇಲ್ಲ. ಹಾಗಾಗಿ ಇವತ್ತು ಹುಲಿಗಳ ರಕ್ಷಣೆಗಾಗಿ ಅರಣ್ಯ ಇಲಾಕೆ ಸಾಕಷ್ಟು ರೀತಿಯಾದ ಕ್ರಮಗಳನ್ನ ಕೈಗೊಂಡಿದ್ದು, ಅವುಗಳ ಮೂಲಕ ಹುಲಿಗಳ ಉಳಿವಿನ ಬಗ್ಗೆ ಸಾಕಷ್ಟು ಜಾಗೃತಿಯನ್ನ ಮೂಡಿಸುತ್ತಿವೆ.
ಇದಕ್ಕೆ ಪೂರಕವಾಗಿ ಹುಲಿಗಳ ರಕ್ಷಣೆಗಾಗಿ ಟೊಂಕ ಕಟ್ಟಿ ನಿಂತಿರುವ ಅರಣ್ಯ ಇಲಾಕೆ ಹುಲಿಗಳ ರಕ್ಷಣೆಯ ಬಗ್ಗೆ ಹೆಚ್ಚು ಕಾಳಜಿಯನ್ನ ವಹಿಸಿಕೊಂಡು ಬಂದಿದೆ. ಅದರಲ್ಲೂ ರಾಷ್ಟ್ರೀಯ ಉದ್ಯಾನವನದಲ್ಲಿರುವ ಹುಲಿಗಳಿಗೆ ಪ್ರವಾಸಿಗರಿಂದ ಯಾವುದೇ ಸಮಸ್ಯೆಯಾಗದಂತೆ ಅರಣ್ಯ ಇಲಾಖೆ ಹೆಚ್ಚು ಕಾಳಜಿಯನ್ನ ವಹಿಸಿಕೊಂಡು ಬಂದಿದೆ. ಇನ್ನು ಹೀಗೆ ಹುಲಿಗಳನ್ನ ನೋಡಲು ಬರುವ ಪ್ರವಾಸಿಗರಿಗೆ ಕೂಡ ಹೆಚ್ಚಾಗಿ ಹುಲಿಗಳ ಹೆಸರು ಜ್ಞಾಪಕದಲ್ಲಿ ಇರೋದಿಲ್ಲ, ಆದ್ರೆ ಮಧ್ಯ ಪ್ರದೇಶದ ಪೆಂಚ್ ನ್ಯಾಷನಲ್ ಪಾರ್ಕ್ಗೆ ಭೇಟಿ ನೀಡಿದ್ರೆ ಅಲ್ಲಿ ಎಲ್ಲರು ನೆನಪಿಟ್ಟು ಕೊಳ್ಳಬಹುದಾದ ಒಂದು ಹುಲಿಯ ಹೆಸರು ಅಂದ್ರೆ ಅದು ಸೂಪರ್ ಮಾಮ್ ಕಾಲರ್‌ವಾಲಿ ಟೈಗ್ರೆಸ್.
ಮಧ್ಯಪ್ರದೇಶದ ಈ ಹುಲಿಯ ಬಗ್ಗೆ ಸಾಕಷ್ಟು ಜನ ಕೇಳಿರ್ತಾರೆ. 2008 ರಿಂದ 2018 ರ ಅವಧಿಯಲ್ಲಿ ಒಟ್ಟು 29 ಮರಿಗಳಿಗೆ ಜನ್ಮ ನೀಡಿದ್ದ ಈ ಕಾಲರ್‌ವಾಲಿ ಹುಲಿ ಸೂಪರ್ ಮಾಮ್ ಎಂದೇ ಖ್ಯಾತಿಯನ್ನ ಪಡೆದಿತ್ತು. ಇದು ಜಗತ್ತಿನಲ್ಲಿಯೇ ಅತಿ ಹೆಚ್ಚು ಮರಿಗಳಿಗೆ ಜನ್ಮ ನೀಡಿದ ಹುಲಿ ಅನ್ನೋ ಖ್ಯಾತಿಗೆ ಕೂಡ ಕಾರಣವಾಗಿತ್ತು. ಹಾಗಾಗಿ ಈ ಹುಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನ ಕೂಡ ಪಡೆದಿತ್ತು. ಹೀಗಾಗಿ ಹುಲಿಯನ್ನ ನೋಡಲು ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಇದೇ ಕಾರಣದಿಂದ ಮಧ್ಯಪ್ರದೇಶ ಸರ್ಕಾರ ಹಾಗು ಅಲ್ಲಿನ ಅರಣ್ಯ ಇಲಾಖೆ ಈ ಹುಲಿಯ ಆರೈಕೆಗೆ ವಿಶೇಷ ಒಲವು ತೋರಿಸಿತ್ತು.
ಇದರ ಜೊತೆಗೆ ಈ ಹುಲಿಗೆ ಕಾಲರ್ ವಾಲಿ ಎಂದು ಹೆಸರಿಟ್ಟಿದ್ದ ಅರಣ್ಯ ಇಲಾಖೆ ಸಿಬ್ಬಂದಿ, ಈ ಹುಲಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಿತ್ತು. ಹಾಗೇಯೆ ಇದರ ಮರಿಗಳ ಚಲನೆ ವಲನೆಗಳನ್ನ ಕೂಡ ಅರಣ್ಯ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿತ್ತು, ಹಾಗಾಗಿ ಈ ಹುಲಿ ಹಲವು ಅನಾರೋಗ್ಯವಿದ್ರು ಕೂಡ ಬದುಕಿಳಿದಿತ್ತು ಅಂತ ಅಲ್ಲಿನ ಜನ ಹೇಳಿಕೊಂಡಿದ್ದಾರೆ. ಆದ್ರೆ ಇದೀಗ ಸುಮಾರು 15 ರಿಂದ 17 ವರ್ಷದ ಕಾಲರ್ ವಾಲಿ ಹೆಣ್ಣು ಹುಲಿ ವಯೋಸಹಜ ಅನಾರೋಗ್ಯದಿಂದ ಮೃತ ಪಟ್ಟಿದೆ ಅಂತ ಅರಣ್ಯ ಇಲಾಖೆ ಹೇಳಿಕೆ ನೀಡಿದೆ. ಈ ವಿಷಯವನ್ನ ಕೇಳಿ ಪ್ರಾಣಿ ಪ್ರಿಯರು ಬೇಸರವನ್ನ ವ್ಯಕ್ತ ಪಡಿಸಿದ್ರೆ, ಅರಣ್ಯ ಇಲಾಖೆಯ ಸಿಬ್ಬಂಧಿ ಕಣ್ಣೀರಿನ ವಿದಾಯವನ್ನ ಹೇಳಿದ್ದಾರೆ. ಕಾಲರ್ ವಾಲಿ ಹುಲಿಯ ಸಾವಿನ ಸದ್ದಿ ಕೇಳಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಸಂತಾಪ ಸೂಚಿಸಿದ್ದು, ಕಾಲರ್‌ವಾಲಿ ಸೂಪರ್ ಮಾಮ್ ಮಧ್ಯಪ್ರದೇಶದ ಹೆಮ್ಮೆಯಾಗಿತ್ತು ಅಂತ ಸ್ಮರಿಸಿದ್ದಾರೆ.
ಇದೀಗ ಈ ಕಾಲರ್‌ವಾಲಿ ಹುಲಿಯ ಅಂತ್ಯ ಸಂಸ್ಕಾರ ನೆರವೇರಿಸಿರುವ ಮಧ್ಯಪ್ರದೇಶದ ಅರಣ್ಯ ಇಲಾಖೆ ಕಾಲರ್ವಾಲಿಗೆ ಭಾವಪೂರ್ಣವಾದ ವಿದಾಯವನ್ನ ಹೇಳಿದೆ. ಒಟ್ಟಾರೆಯಾಗಿ ಭಾರತದ ಹೆಮ್ಮೆಯಾಗಿದ್ದ ಹುಲಿಯೊಂದು ಸಾವನ್ನಪ್ಪಿರೋದು ಬೇಸರದ ಸಂಗತಿಯಾಗಿದೆ.
ಲಿಖಿತ್ ರೈ, ಪವರ್ ಟಿವಿ