ಬೆಂಗಳೂರು : ರಾಜ್ಯದಲ್ಲೇ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಲೇ ಇದೆ.ಈ ಕಾರಣದಿಂದಾಗಿ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿಗೊಂಡಿದೆ.
ಒಂದು ಕಡೆ ವೀಕೆಂಡ್ ಕರ್ಫ್ಯೂ ಇನ್ನೊಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಅತೀ ಶೀಘ್ರದಲ್ಲೇ ಏರಿಕೆಯಾಗಲಿದೆ ಹಾಲಿನ ದರ ಏರಿಕೆ ಕಂಡುಬಂದಿದೆ.ಹಾಲಿನ ದರ 3 ರೂ. ಏರಿಕೆ ಮಾಡಲು KMF ಚಿಂತನೆ ನಡೆಸಿದೆ.
ಸದ್ಯ ಲೀಟರ್ ಗೆ ೩೭ ರೂ.ಇದ್ದು, ಅದನ್ನ ೪೦ ರೂ.ಗೆ ಏರಿಕೆಗೊಂಡಿದ್ದು.ಸಿಎಂ ಬಸವರಾಜ್ ಬೊಮ್ಮಾಯಿ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ.ಕರ್ನಾಟಕ ಹಾಲು ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ ಯಲ್ಲಿ ದರ ಏರಿಕೆ ಬಗ್ಗೆ ಪ್ರಸ್ತಾಪಿಸಿದ KMF ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ,ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ, ನಂದಿನಿ ಹಾಲಿನ ದರ ರಾಜ್ಯದಲ್ಲಿ ಅತಿ ಕಡಿಮೆ ಇದೆ.ಪ್ರತಿ ಲೀಟರ್ ಗೆ 3 ರೂ. ದರ ಏರಿಕೆ ಮಾಡುವಂತೆ KMF ಅಧ್ಯಕ್ಷರಿಗೆ ಮನವಿ ಮಾಡಿರುವ ಹಾಲು ಒಕ್ಕೂಟಗಳು ಈ ಹಿನ್ನಲೆ, ಹಾಲಿನ ದರ ಏರಿಕೆ ಮಾಡುವ ಕುರಿತು ಸಿಎಂ ಜೊತೆ ಚರ್ಚಿಸಿ, ದರ ಪರಿಷ್ಕರಣೆ ಮಾಡಿ ಸಿಎಂ ರಿಂದ ಗ್ರೀನ್ ಸಿಗ್ನಲ್ ನೀಡಿದರೆ ಅಧಿಕೃತ ದರ ಏರಿಕೆಯ ಬಗ್ಗೆ ಘೋಷಣೆಯ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.