ಬೆಂಗಳೂರು: ಪಾದಯಾತ್ರೆ ಮುಗಿದರು ರಾಜಕೀಯ ನಾಯಕರ ವಾಗ್ವಾದಗಳು ಮಾತ್ರ ಇನ್ನೂ ಮುಂದುವರೆಯುತ್ತಲೇ ಇವೆ. ಈ ಮೂಲಕ ರಾಮನಗರದ ರಾಜಕೀಯ ಮೇಲಾಟ ಸಾಕಷ್ಟು ಸದ್ದು ಮಾಡುತ್ತಿದೆ.
ರಾಜ್ಯ ರಾಜಕೀಯದಲ್ಲಿ ಬೆಳಗಾವಿ ಮತ್ತು ಮಂಡ್ಯ ವಿಶೇಷ ಚಾಪು ಮೂಡಿಸಿವೆ. ರಾಜ್ಯ ರಾಜಕೀಯ ಒಂದು ಕಡೆ ಸಾಗುತ್ತಿದ್ದರೆ, ಇವೇರಡು ಜಿಲ್ಲೆಯ ರಾಜಕೀಯವಾಗಿ ಸ್ಥಳೀಯ ಮಟ್ಟದಲ್ಲಿ ಬೇರೆ ದಿಕ್ಕಿನಲ್ಲಿ ಸಾಗುತ್ತವೆ. ಈ ಎರಡು ಜಿಲ್ಲೆಗಳ ಪಟ್ಟಿಯಲ್ಲಿ ರಾಮನಗರ ಕೂಡ ಸೇರಿಕೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಯಾಕೆಂದರೆ ಸದ್ಯ ರಾಮನಗರ ಜಿಲ್ಲೆ ರಾಜ್ಯ ರಾಜಕೀಯ ಗಮನ ಸೆಳೆಯುತ್ತಿದೆ. ಒಂದು ಕಡೆ ಡಿ ಕೆ ಬ್ರದರ್ಸ್ ಜಿಲ್ಲೆಯಲ್ಲಿ ಪ್ರಭಾವ ಹೊಂದಿದರೆ ಮತ್ತೊಂದು ಕಡೆ ದಳಪತಿ ಮಾಜಿ ಸಿಎಂ ಕುಮಾರಸ್ವಾಮಿ ಹಿಡಿತ ಕೂಡ ಬಿಗಿಯಾಗಿದೆ. ಇದರ ಜೊತೆಗೆ ಸಚಿವ ಅಶ್ವಥ್ ನಾರಾಯಣ್ ಕೂಡ ರಾಮನಗರದಲ್ಲಿ ಪ್ರಭಾವ ಬೆಳೆಸಿಕೊಳ್ಳು ಪ್ರಯತ್ನ ನಡೆಸಿದ್ದಾರೆ. ಹೀಗಾಗಿಯೇ ರಾಜ್ಯ ರಾಜಕೀಯ ಗಮನವನ್ನು ರಾಮನಗರ ತನ್ನತ್ತ ಸೆಳೆಯುತ್ತಿದೆ. ಇತ್ತೀಚೆಗೆ ಮುಗಿದ ಪಾದಯಾತ್ರೆ ಬಳಿಕ ಮೂರು ಪಕ್ಷಗಳು ನಾಯಕರ ಮೇಲಾಟ ಜೋರಾಗುತ್ತಿದೆ.
ಇನ್ನೂ ಪಾದಯಾತ್ರೆ ಬಳಿಕ ನನ್ನನ್ನ ಟಾರ್ಗೆಟ್ ಮಾಡಲಾಗಿದೆ ಎಂಬ ಡಿಕೆಶಿ ಹೇಳಿಕೆ ಕೂಡ ಸಾಕಷ್ಟು ಸದ್ದು ಮಾಡುತ್ತಿದೆ. ರಾಜ್ಯ ಸರ್ಕಾರ ಪಾದಯಾತ್ರೆ ತಡೆಯುವ ಎಲ್ಲ ಪ್ರಯತ್ನ ಮಾಡಿತು. ಆದರೆ ಯಾವುದಕ್ಕೂ ಬಗ್ಗೆ ಪಾದಯಾತ್ರೆ ಮಾಡಿದೆ. ಹೀಗಾಗಿ ನನ್ನನ್ನೂ ರಾಜಕೀಯವಾಗಿ ಟಾರ್ಗೆಟ್ ಮಾಡಲಾಗಿದೆ. ಎಲ್ಲವನ್ನೂ ದಾಖಲೆ ಸಮೇತ ಜನರ ಮುಂದೆ ಬಿಚ್ಚಿಡುತ್ತೇನೆ ಅಂತ ನಿನ್ನೆ ಡಿ ಕೆ ಶಿವಕುಮಾರ್ ಅಚ್ಚರಿ ಮಾತುಗಳನ್ನು ಮಾಧ್ಯಮದ ಮುಂದೆ ಹೇಳಿದ್ರು. ಇದಕ್ಕೆ ಸಚಿವ ಅಶ್ವಥ್ ನಾರಾಯಣ ತಿರುಗೇಟು ನೀಡದ್ದಾರೆ.
ಡಿ ಕೆ ಶಿವಕುಮಾರ್ ಗೆ ಒಂದು ಕಾನೂನು, ಸಾಮನ್ಯ ಜನರಿಗೆ ಮತ್ತೊಂದು ಕಾನೂನು ಅಂತ ಇರೋದಿಲ್ಲ. ಯಾರೇ ಆಗಲಿ ಕಾನೂನನ್ನು ಗೌರವಿಸಬೇಕು. ಮೊದಲೇ ಗುಂಡು ಹೊಡೆಯೋದು, ಏನು ಮಾಡಿದರು ಜಯಿಸಿಕೊಳ್ತೀವಿ ಎನ್ನೋದು ಡಿಕೆಶಿಗೆ ಕರಗತವಾಗಿದೆ. ಕಾನೂನಿನ ಅಡಿಯಲ್ಲೇ ಎಲ್ಲರೂ ಬದುಕಿ ಬಾಳಬೇಕು. ಹಲವಾರು ಸ್ಥಾನ ಅಲಂಕರಿಸಿದ ಡಿಕೆಶಿ ಇಂಥ ಬೇಜಾವ್ದಾರಿ ಹೇಳಿಕೆಗಳನ್ನು ಕೊಡಬಾರದು. ಅವರ ಭಾಗದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ಹೇಗೆ ಸಾಮಾನ್ಯ ಜನರ ದ್ವನಿ ಧ್ವಂಸ ಮಾಡಿದ್ದಾರೆ ಎನ್ನೋದು ಎಲ್ಲರಿಗೂ ಗೊತ್ತಿದೆ. ಇಂಥಹ ಹೇಳಿಕೆಗಳು ಡಿಕೆಶಿಯಂತ ಉನ್ನತ ಸ್ಥಾನದಲ್ಲಿದ್ದವರಿಗೆ ಸೂಕ್ತವಲ್ಲ ಅಂತ ತಿರುಗೇಟು ನೀಡಿದರು