Friday, July 19, 2024

ಪದ್ಮ ವಿಭೂಷಣ ಪಂಡಿತ್ ಬಿರ್ಜೂ ಮಹಾರಾಜ್​ ವಿಧಿವಶ

ಕಥಕ್ ನೃತ್ಯದ ಲಖನೌ ಕಾಲ್ಕಾ-ಬಿಂದಾದಿನ್ ಘರಾನಾ ಶೈಲಿಯ ನೃತ್ಯ ಪರಿಣತ ಕಲಾಗಾರರಾಗಿದ್ದಾರೆ.ಇವರು ಕಥಕ್ ನೃತ್ಯ ಕಲಾವಿದರಾದ ಮಹರಾಜ್ ಕುಟುಂಬದ ವಂಶಸ್ಧವರಾಗಿದ್ದರು. ಇವರ ತಂದೆ ಗುರು ಅಚ್ಚನ್ ಮಹರಾಜ್ ಹಾಗೂ ಅವರ ತಂದೆಯ ಸಹೋದರರಾದ ಶಂಭು ಮಹರಾಜ್ ಮತ್ತು ಲಚ್ಚೂ ಮಹರಾಜ್ ಸಹ ಕಥಕ್ ಪರಿಣಿತರಾಗಿದ್ದರು.ನೃತ್ಯ ಕಲೆಯತ್ತ ಒಲವಿದ್ದರೂ ಅವರು ಹಿಂದುಸ್ಧಾನಿ ಶಾಸ್ತ್ರೀಯ ಸಂಗೀತವನ್ನು ಶೈಲಿಯಲ್ಲಿ ಸಂಯೋಜಿಸುವುದರ ಮೂಲಕ ಕಥಕ್ ನೃತ್ಯಕಲೆ ಮತ್ತು ಶೈಲಿಯನ್ನು ಇನ್ನಷ್ಟು ಉತ್ತುಂಗಕ್ಕೆ ಒಯ್ದರು.ವಿಶ್ವದ ಹಲವಡೆ ಅವರು ಪ್ರವಾಸ ಮಾಡಿ,ಸಾವಿರಾರು ನೃತ್ಯ ಪ್ರದರ್ಶನಗಳನ್ನು ನೀಡಿದ್ದಾರೆ.

ಇದರ ಜತೆಗೆ ಕಲಿಯುವ ಆಸಕ್ತರಿಗೆ ನೂರಕ್ಕೂ ಹೆಚ್ಚು ನೃತ್ಯಕಮ್ಮಟ ಕಾರ್ಯಗಾರಗಳನ್ನು ನಡೆಸಿದ್ದಾರೆ.ನವದೆಹಲಿಯಲ್ಲಿನ ಭಾರತೀಯ ಕಲಾ ಕೇಂದ್ರದಲ್ಲಿ ತಮ್ಮ ತಂದೆಯವರ ಸಹೋದರ ಶಂಭು ಮಹರಾಜ್ ಅವರೊಂದಿಗೆ ಕಾರ್ಯನಿರ್ವಹಿಸಿದರು.ನಂತರ ಬಿರ್ಜೂ ಹಲವು ವರ್ಷಗಳ ಕಾಲ ಈ ನೃತ್ಯ ಶಾಲೆಯ ಅಧ್ಯಕ್ಷರಾಗಿದ್ದರು.ಹಾಗೆನೇ ದೆಹಲಿಯಲ್ಲಿ ಕಲಾಶ್ರಮ ಎಂಬ ತಮ್ಮದೇ ಆದ ನೃತ್ಯಶಾಲೆಯನ್ನು ಬಿರ್ಜೂ ಆರಂಭಿಸಿದರು.

ಬಿರ್ಜೂ ಮಹರಾಜ್ ಅವರಿಗೆ 1986ರಲ್ಲಿ ಪದ್ಮವಿಭೂಷಣ,ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಕಾಳಿದಾಸ ಸಮ್ಮಾನ್ ಸೇರಿದಂತೆ ಹಲವು ಪ್ರಶಸ್ತಿ ಗೌರವಗಳು ಲಭಿಸಿವೆ.2013ರಲ್ಲಿ ವಿಶ್ವರೂಪ ಚಿತ್ರದ ನೃತ್ಯ ನಿದೇರ್ಶನಕ್ಕಾಗಿ 60ನೇ ನ್ಯಾಷಿನಲ್ ಫಿಲಂ ಅವಾರ್ಡ್​ ಅತ್ಯುತ್ತಮ ನೃತ್ಯ ನಿರ್ದೇಶನ ಬಿರುದು ದೊರಕಿತು.ಇಂತಹ ಮಹಾನ್ ಕಥಕ್ ಕಲಾವಿದ ಬಿರ್ಜೂ ಮಹಾರಾಜ್​ (83) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

RELATED ARTICLES

Related Articles

TRENDING ARTICLES