Wednesday, December 25, 2024

‘ಕುಂಡಲಿನಿ ಚಕ್ರ’ಕ್ಕೆ ಮಿಸೆಸ್​​ ವರ್ಲ್ಡ್​​​ ಜಡ್ಜ್​​​ ಫಿದಾ..!

ವಿದೇಶ: 2021ರ ಮಿಸೆಸ್ ಇಂಡಿಯಾ ಪಟ್ಟ ಗೆದ್ದು ಲಾಸ್​ ವೇಗಾಸ್​ನಲ್ಲಿ ನಡೆಯುತ್ತಿರುವ ಮಿಸೆಸ್​ ವರ್ಲ್ಡ್​ 2022ರ ಸ್ಪರ್ಧೆಗೆ ಆಯ್ಕೆಯಾಗಿರುವ ಭಾರತದ ನವದೀಪ್​ ಕೌರ್​ ಮಿಸೆಸ್​ ವರ್ಲ್ಡ್ ಸ್ಪರ್ಧೆಯಲ್ಲಿ ನಡೆದ ಬೆಸ್ಟ್​ ನ್ಯಾಷನಲ್​ ಕಾಸ್ಟ್ಯೂಮ್​​ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ಕುಂಡಲಿನಿ ಚಕ್ರದ ವೇಷಭೂಷಣ ಧರಿಸಿ ಪ್ರಶಸ್ತಿ ಗೆದ್ದಿದ್ದಾರೆ.  ಈ ವಸ್ತ್ರವಿನ್ಯಾಸವನ್ನು ಕಲಾವಿದ ಎಗ್ಗಿ ಜಾಸ್ಮಿನ್ ಕೌರ್​ ವಿನ್ಯಾಸಗೊಳಿಸಿದ್ದಾರೆ. ಈ ವಿಶೇಷ ವಸ್ತ್ರ ವಿನ್ಯಾಸವನ್ನು ಧರಿಸಿದ ಫೋಟೋವನ್ನು ನವದೀಪ್​ ಕೌರ್​ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಶೇರ್​ ಮಾಡಿದ ಅವರು ಉಡುಗೆಯ ಬಗ್ಗೆ ಚಕ್ರವು ತಲೆಯ ಮೇಲೆ ಧರಿಸಿದ ಕಿರೀಟದ ಬುಡದಿಂದ ಬೆನ್ನುಮೂಳೆಯವರೆಗೆ ದೇಹದ ಶಕ್ತಿಯ ಚಲನೆಯನ್ನು ಸಂಕೇತಿಸುತ್ತದೆ ಎಂದು ತಮ್ಮ ಉಡುಪಿನ ಅರ್ಥವನ್ನು ಹೇಳಿದ್ದಾರೆ.

RELATED ARTICLES

Related Articles

TRENDING ARTICLES