Tuesday, December 24, 2024

ಕುರ or ಕೀವು ಗುಳ್ಳೆಯಿಂದ ಬಳಲುತ್ತಿದ್ದೀರಾ..? ಇಲ್ಲಿದೆ ನೋಡಿ ಮನೆಮದ್ದು.!

ಕೆಲವೊಂದು ಖಾಯಿಲೆಗಳು ಮನುಷ್ಯನಿಗೆ ಜೀವ ಹಿಂಡುವಂತೆ ಮಾಡುತ್ತದೆ ಅದರಲ್ಲಿ ಕುರ (ಕುರು, ಕೀವುಗುಳ್ಳೆ) ಮುಖ್ಯವಾದ ಖಾಯಿಲೆ ಅಂದರೆ ತಪ್ಪಾಗೋದಿಲ್ಲ. ಕುರ ಅನ್ನೋ ರೋಗ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಈ ಕುರಕ್ಕೆ ಆಂಗ್ಲ ಭಾಷೆಯಲ್ಲಿ Butt Acne ಎಂದು ಕರೆಯುತ್ತಾರೆ. ಈ ಕುರ ಒಮ್ಮೆ ನಮ್ಮ ದೇಹದಲ್ಲಿ ಬಂದರೆ ಸಾಕು ಕೂರೋದಕ್ಕೂ ಆಗೋಲ್ಲ ನಿಲ್ಲೋದಕ್ಕೂ ಆಗೋಲ್ಲ ಆ ರೀತಿಯಾಗಿ ನೋವನ್ನುಂಟು ಮಾಡುತ್ತದೆ. ಈ ಕುರ ರೋಗ (ಕೀವುಗುಳ್ಳೆ) ಯಾಕೆ ಬರುತ್ತೆ? ಇದಕ್ಕೆ ಕಾರಣ ಏನು? ಅನ್ನೋದನ್ನ ನಾವು ನಿಮಗೆ ತಿಳಿಸಿಕೊಡ್ತೀವಿ ಜೊತೆಗೆ ಈ ಕುರಕ್ಕೆ ಮನೆಯಲ್ಲೇ ಸಿಗುವಂತಹ ಪದಾರ್ಥಗಳನ್ನ ಬಳಸಿ ವಾಸಿಮಾಡಿಕೊಳ್ಳಬಹುದು ಅದು ಹೇಗೆ ಅನ್ನೋದನ್ನ ನಾವು ನಿಮಗೆ ಹೇಳ್ತೀವಿ ಮುಂದೆ ಓದಿ.

ಕುರದ ಸಮಸ್ಯೆಯಿಂದ ಬಳಲಿದವರಿಗೆ ಗೊತ್ತು ಅದರ ನೋವು ಏನು ಎಂಬುದು. ಕುರ ಹಣ್ಣಾಗಿ ಅದು ಒಡೆಯುವವರೆಗೂ ತುಂಬಾ ನೋವನ್ನ ಅನುಭವಿಸುತ್ತಾರೆ. ಕೀವಾಗಿ ಅದು ಹೊರಗೆ ಬರುವವರೆಗೂ ಅದರ ನೋವನ್ನ ತಡೆಯೋದಕ್ಕೆ ಆಗೋದಿಲ್ಲ, ಒಂದು ವೇಳೆ ಕೀವು ಸರಿಯಾಗಿ ಹೊರಗೆ ಬರದೇ ಇದ್ದರೆ ಮತ್ತೆ ಪಕ್ಕದಲ್ಲಿ ಇನ್ನೊಂದು ಕಡೆ ಕುರ ಏಳುತ್ತದೆ ಇದ್ಯಾವುದೋ ಸಣ್ಣ ಗಾಯ ಇರಬಹುದು ಅಂತ ಮಾತ್ರ ಮೈಮರೆಯದೇ ಒಂದೇ ಒಂದು ಕುರ ದೇಹದಲ್ಲಿ ಕಾಣಿಸಿದ ತಕ್ಷಣ ಸರಿಯಾಗಿ ಔಷಧಿಯನ್ನ ತೆಗೆದುಕೊಂಡರೆ ಒಳಿತು.

ಕುರ ಆಗೋದಕ್ಕೆ ಕಾರಣ ಏನು..?

ಕುರು ಸಾಮಾನ್ಯವಾಗಿ ದೇಹದಲ್ಲಿ ಎಲ್ಲಿ ಅತೀ ಹೆಚ್ಚು ಕೊಬ್ಬಿನ ಅಂಶ ಇರುತ್ತೋ ಅಲ್ಲಿ ಕಂಡು ಬರುತ್ತದೆ. ಇದಕ್ಕೆ ಕಾರಣ ಏನು ಅಂದ್ರೆ ರಕ್ತ ಕೆಟ್ಟಿದ್ದರೆ, ರಕ್ತದಲ್ಲಿನ ಇನ್ಫೆಕ್ಷನ್​​​​​​​ನಿಂದ, ದೇಹದಲ್ಲಿ ಪಿತ್ತ ಅತಿಯಾದಾಗ, ದೇಹದಲ್ಲಿ ಉಷ್ಣಾಂಶ ಜಾಸ್ತಿ ಆದಾಗ, ಕೆಟ್ಟ ನೀರು ಇರುವ ಜಾಗದಲ್ಲಿ ಓಡಾಡಿದಾಗ ಕುರ ಆಗುತ್ತದೆ. ಇದು ಹೇಗೆ ಆಗುತ್ತೆ ಅಂದ್ರೆ, ಇದರ ಗುಣಲಕ್ಷಣಗಳೇನು ಅನ್ನೋದನ್ನ ನೀಡುವುದಾದರೆ, ಇದು ಆರಂಭದಲ್ಲಿ ಸಣ್ಣ ಗುಳ್ಳೆ ಆಗುತ್ತೆ ಅನಂತರ ಕ್ರಮೇಣವಾಗಿ ಅದೇ ಗುಳ್ಳೆ ದಪ್ಪವಾಗಿ ಗಂಟು ಆಗಿ ವಿಪರೀತ ನೋವು ಉಂಟಾಗುತ್ತದೆ. ಕುರದ ನೋವನ್ನ ಯಾರಿಗೂ ವಿವರಣೆ ಮಾಡಲು ಸಾಧ್ಯವಿಲ್ಲ ಅಷ್ಟು ನೋವನ್ನ ಉಂಟು ಮಾಡುತ್ತದೆ. ಕುರದ ಕೀವು ಓಪನ್​​​ ಆಗಿ ಹೊರಗೆ ಬರುತ್ತೆ ಆ ಸಂದರ್ಭದಲ್ಲಿ ಕೆಲವರಿಗೆ ಜ್ವರ ಕೂಡ ಬರುವ ಸಾಧ್ಯತೆ ಕೂಡ ಹೆಚ್ಚು. ಈ ರೀತಿಯಾದ ಗುಣಲಕ್ಷಣಗಳು ಕುರ ಆದಾಗ ಕಂಡು ಬರುತ್ತೆ. ಸಾಮಾನ್ಯವಾಗಿ ಕೀವು ಗುಳ್ಳೆಗಳು ತೊಡೆ, ತೊಡೆಸಂಧಿ, ಸೊಂಟ, ಕಂಕಳು, ಎದೆ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ಕುರ ವಾಸಿಯಾಗಲು ಏನೆಲ್ಲಾ ಮಾಡಬೇಕು?

* ಬೆಳುಳ್ಳಿಯನ್ನ ಸೇವನೆ ಮಾಡಿದ್ರೆ ಕುರ ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯನ್ನು ಪೇಸ್ಟ್​ ಮಾಡಿ ಅದನ್ನ ಕುರಕ್ಕೆ ಮತ್ತು ಕುರದ ಸುತ್ತ ಚರ್ಮಕ್ಕೆ ದಿನದಲ್ಲಿ ಮೂರು ಬಾರಿ ಹಚ್ಚಿದರೆ ಕುರ ಕಡಿಮೆ ಆಗುತ್ತದೆ ಮತ್ತು ನೋವನ್ನ ಕಡಿಮೆ ಮಾಡುತ್ತದೆ.

* ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಅರಿಶಿಣ ಪುಡಿ, ಸ್ವಲ್ಪ ಉಪ್ಪನ್ನ ಬೆರಸಿ ಪ್ರತಿದಿನ ಕುಡಿಯುತ್ತಾ ಬಂದರೆ ಕುರ ಕಡಿಮೆಯಾಗುತ್ತದೆ. ಅರಿಶಿಣದಲ್ಲಿ ರಕ್ತ ಶುದ್ಧೀಕರಣ ಮಾಡುವ ಗುಣ ಇರೋದ್ರಿಂದ ಕುರ ಆಗದೇ ಇರಲು ಸಹಾಯಕಾರಿಯಾಗುತ್ತೆ.

* ವಿಳ್ಳೇದೆಲೆ ಆಂಟಿ ಆಕ್ಸಿಡೆಂಟ್ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿರೋದ್ರಿಂದ ಹಲವಾರು ಆರೋಗ್ಯ ಲಾಭಗಳನ್ನು ನೀಡುತ್ತದೆ ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿಯಾಗಿದೆ. ವೀಳ್ಯದೆಲೆಯನ್ನು ಸ್ವಲ್ಪ ಬಿಸಿ ಮಾಡಿ ಕುರ ಎದ್ದಿರುವಂತ ಜಾಗಕ್ಕೆ ಹಚ್ಚಿ ಒಂದು ತೆಳ್ಳಗಿನ ಬಟ್ಟೆಯನ್ನ ಕಟ್ಟಿದರೆ ಕುರ ಕಡಿಮೆಯಾಗಿತ್ತದೆ.

* ಬೇವಿನ ಎಲೆಯಲ್ಲಿ ಬ್ಯಾಕ್ಟೀರಿಯಾ ನಿರೋಧಕ, ಸೂಕ್ಷ್ಮಜೀವಿ ನಿರೋಧಕ, ಉರಿಯೂತ ನಿವಾರಕ, ಆಂಟಿಆಕ್ಸಿಡೆಂಟ್, ನಂಜುನಿರೋಧಕ, ಮತ್ತು ವೈರಸ್ ನಿವಾರಕ ಗುಣಲಕ್ಷಣಗಳನ್ನ ಹೊಂದಿರೋದ್ರಿಂದ ಕುರಕ್ಕೆ ಇದು ಕೂಡ ರಾಮಬಾಣವಾಗಿ ಕಾರ್ಯನಿರ್ವಯಿಸುತ್ತದೆ. ಬೇವಿನ ಎಲೆಯ ರಸ ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಪೇಸ್ಟ್ ತಯಾರಿಸಿಕೊಂಡು, ಅದನ್ನು ಕುರ ಇರುವಂತ ಜಾಗಕ್ಕೆ ಲೇಪಿಸಿದರೆ ಕುರ ಕಡಿಮೆಯಾಗುತ್ತದೆ.

ಯಾವ ಆಹಾರ ಸೇವನೆ ಮಾಡಿದರೆ ಉತ್ತಮ?

ವಿಟಮಿನ್​​ ಸಿ, ಇ. ಮತ್ತು ಎ ಹೆಚ್ಚಿನ ಪ್ರಮಾಣ ಹೊಂದಿರುವ ಆಹಾರವನ್ನ ಅತೀ ಹೆಚ್ಚು ಸೇವನೆ ಮಾಡಬೇಕು. ಬ್ರೋಕೋಲಿ, ಸೇಬು, ಪ್ಲಮ್, ಪೇರಳೆ, ಪಿಯರ್ಸ್ ಟೊಮಾಟೊ, ಬೀಟ್ರೂಟ್, ಬೆಲ್ಲ, ಅರಿಶಿನ, ನಿಂಬೆಹಣ್ಣು, ಶುಂಠಿ ಬೆಳ್ಳುಳ್ಳಿ, ಕೇಯ್ನ್​​​​ ಮೆಣಸು, ಕ್ಯಾರೆಟ್​​, ಹಾಗಲಕಾಯಿ ಸೇವನೆ ಮಾಡಿದರೆ ರಕ್ತ ಶುದ್ಧವಾಗಿ ಇಡಲು ಸಹಕಾರಿಯಾಗುತ್ತೆ. ಕುರದಂತಹ ಖಾಯಿಲೆಗಳು ಹತ್ತಿರ ಕೂಡ ಸುಳಿಯೋದಿಲ್ಲ.

ಸಾಮಾನ್ಯವಾಗಿ ಸೊಪ್ಪು ಅಂದರೆ ಇಷ್ಟ ಆಗೋದಿಲ್ಲ ನನಗೆ ಸೊಪ್ಪು ಬೇಡ ಎಂದು ತಿರಸ್ಕರಿಸುವವರೇ ಹೆಚ್ಚು. ಆದರೆ ತಮ್ಮಲ್ಲಿ ಹೆಚ್ಚಿನ ಪ್ರಮಾಣದ ಅವಶ್ಯಕ ಪೋಷಕಾಂಶಗಳು ಮತ್ತು ಆಂಟಿ ಆಕ್ಸಿಡೆಂಟುಗಳನ್ನು ಸೊಪ್ಪುಗಳು ಹೊಂದಿರುತ್ತವೆ. ವಿಶೇಷವಾಗಿ ಕೇಲ್ ಎಲೆಗಳು, ಬಸಲೆ, ಪಾಲಕ್, ಮೆಂತೆಸೊಪ್ಪು, ಹರಿವೆ ಸೊಪ್ಪು ಕೊತ್ತಂಬರಿ ಮತ್ತು ಪಾರ್ಸ್ಲಿ ಎಲೆ, ತುಳಸಿ, ಮುಂತಾದವು. ರಕ್ತ ಶುದ್ದೀಕರಿಸಲು ಅತಿ ಹೆಚ್ಚು ಸಹಾಯಕಾರಿಯಾಗಿವೆ.

ಯಾವ ಆಹಾರ ಸೇವನೆ ಮಾಡಬಾರದು?

ಆಲೂಗಡ್ಡೆ, ಬದನೆಕಾಯಿ, ಹಸಿಮೆಣಸಿನಕಾಯಿ, ಗಿಣ್ಣು, ಕಾಫಿ ಟೀ ಈ ತರಹದ ಪದಾರ್ಥಗಳನ್ನು ತೆಗೆದುಕೊಳ್ಳಬಾರದು ತಕ್ಷಣ ನಿಲ್ಲಿಸಬೇಕು.

ಮುಖ್ಯವಾದ ಅಂಶ

ಕುರದ ಗುಳ್ಳೆಗಳನ್ನ ಚಿವುಟದಿರಿ, ಸೂಜಿ ಅಥವಾ ಬಟ್ಟೆಪಿನ್ನನ್ನ ಕೀವನ್ನು ಹೊರತೆಗೆಯಲು ಪ್ರಯತ್ನಿಸದಿರಿ ಇದರಿಂದ ಸೋಂಕು ಹೆಚ್ಚಾಗಿ ಕುರಗಳು ಮತ್ತಷ್ಟು ಜಾಸ್ತಿಯಾಗುತ್ತದೆ. ಕುರದ ಗಾಯಗಳನ್ನ ಒರೆಸಲು ಯಾವಾಗಲು ಸ್ವಚ್ಛವಾಗಿರುವ ಬಟ್ಟೆಯನ್ನೇ ಬಳಸಿ, ಗಾಯವನ್ನ ಕ್ಲೀನ್ ಮಾಡಿದ ಬಟ್ಟೆಯನ್ನ ಅಲ್ಲಲ್ಲಿ ಬಿಸಾಡದೇ ನೀಟಾಗಿ ಡೆಟಾಯಿಲ್​​ ಹಾಕಿ ವಾಸ್​​ ಮಾಡಿ ಆ ನಂತರ ಉಪಯೋಗಿಸಿ. 4-5 ದಿನದೊಳಗೆ ಕುರ ವಾಸಿಯಾಗದೇ ಇದ್ದರೆ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಿ.

ರಮ್ಯ , ಪವರ್​ ಟಿವಿ

RELATED ARTICLES

Related Articles

TRENDING ARTICLES