Sunday, January 19, 2025

ಇಂದು ಆರೋಗ್ಯ ತಜ್ಞರ ಜೊತೆ ಸಿಎಂ ಸಭೆ

ಬೆಂಗಳೂರು : ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಈ ಕಾರಣದಿಂದಾಗಿ ಸರ್ಕಾರವು ಈಗಾಗಲೇ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿದ್ದು,ಜನರಲ್ಲಿ ಆತಂಕ ಮೂಡಿದೆ.

ವೀಕೆಂಡ್​ ಕರ್ಫ್ಯೂ ವಿರುದ್ಧ ಸಿಡಿದೆದ್ದಿರುವ ಹೋಟೆಲ್ ಮಾಲೀಕರು ಈ ವಾರದಿಂದ ವೀಕೆಂಡ್​ ಕರ್ಫ್ಯೂ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.ಈ ವಾರವೇ ವೀಕೆಂಡ್ ಕರ್ಫ್ಯೂ ಹಿಂಪಡೆಯುವಂತೆ ಪಟ್ಟು ಹಿಡಿದಿದ್ದಾರೆ.

ಆದರೆ ಹೋಟೆಲ್, ಬಾರ್ & ರೆಸ್ಟೋರೆಂಟ್ ಮಾಲೀಕರ ಒತ್ತಡಕ್ಕೆ ಸರ್ಕಾರ ಮಣಿಯುತ್ತಾ ಅಥವಾ ಈ ವಿರೋಧದ ನಡುವೆ ವೀಕೆಂಡ್ ಕರ್ಫ್ಯೂ ರದ್ದು ಮಾಡುತ್ತಾ ಎಂದು ಕಾದುನೋಡಬೇಕಾಗಿದೆ. ಸರ್ಕಾರಕ್ಕೆ ಡೆಡ್​ಲೈನ್ ಕೊಟ್ಟ ಹೋಟೆಲ್, ಬಾರ್ ಮಾಲೀಕರು. ಕರ್ಫ್ಯೂ ಜಾರಿಯಲ್ಲಿದ್ದರೂ ಹೋಟೆಲ್ ತೆರೆಯುತ್ತೇವೆ ಎಂದು ಮಾಲೀಕರು ಹೇಳಿದ್ದಾರೆ. ಹಾಗೆನೇ ಇಂದು ತಜ್ಞರ ಜೊತೆ ಮಾತುಕತೆ ನಡೆಸಿದ ನಂತರ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.

RELATED ARTICLES

Related Articles

TRENDING ARTICLES