Sunday, November 3, 2024

ಚರ್ಮದ ಆರೋಗ್ಯಕ್ಕೆ ಅಲೊವೇರಾ ರಾಮಬಾಣ

ಚರ್ಮದ ಆರೈಕೆಯು ಎಲ್ಲಾ ಕಾಲದಲ್ಲಿಯೂ ಮುಖ್ಯ, ಅದರಲ್ಲೂ ಚಳಿಗಾಲದಲ್ಲಿ ತುಸು ಹೆಚ್ಚಾಗಿಯೆ ಇರುತ್ತದೆ.ಈ ಚಳಿಗಾಲದಲ್ಲಿ ಮುಖ,ತುಟಿ,ಒಡೆಯುವುದು,ಚರ್ಮದ ಕಾಂತಿ ಕಳೆದುಕೊಳ್ಳುತ್ತದೆ.ಚರ್ಮದಲ್ಲಿ ಸುಕ್ಕು ಕಾಣಿಸಿಕೊಳ್ಳುತ್ತದೆ. ಶುಷ್ಕತೆಯನ್ನು ಸಹ ಉಂಟು ಮಾಡುತ್ತದೆ.ಅಲೋವೆರಾ ಎಲೆಗಳಲ್ಲಿರುವ ಜೆಲ್​ನಲ್ಲಿ ವಿಟಮಿನ್ ಎ,ಸಿ,ಇ ಮತ್ತು ಬಿ 12 ಸಮೃದ್ಧವಾಗಿದೆ. ಚಳಿಗಾಲದಲ್ಲಿ ಇದನ್ನು ಪ್ರತಿದಿನ ತ್ವಚೆಯ ಮೇಲೆ ಹಚ್ಚುವುದರಿಂದ ಅದು ತೇವಾಂಶದಿಂದ ಕೂಡಿರುತ್ತದೆ.

ಚರ್ಮದ ಪೋಷಣೆ :
ಅಲೊವೇರಾ ಚರ್ಮದ ಮೇಲೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ತ್ವಚೆಯ ಮೇಲೆ ಹಚ್ಚುವುದರಿಂದ ಚರ್ಮಕ್ಕೆ ತೇವಾಂಶ ಬರುತ್ತದೆ.ಅಲ್ಲದೆ,ಚರ್ಮಕ್ಕೆ ಬೇಕಾದ ಪೋಷಕಾಂಶ ಕೂಡ ಲೋಳೆಸರದಿಂದ ಸಿಗುತ್ತದೆ.

ಚರ್ಮದ ಹೊಳಪು :
ಚರ್ಮದ ಸೌಂದರ್ಯವನ್ನು ಸುಧಾರಿಸಲು ಬಯಸಿದರೆ,ಅಲೋವೆರಾ ಜೆಲ್ ಅನ್ನು ಬಳಸುವುದು ಉತ್ತಮ.ನಿಮ್ಮ ಮುಖದಿಂದ ಧೂಳು,ಕೊಳಕು,ಡೆಡ್ ಸ್ಕಿನ್ ಮತ್ತು ಕೊಳೆಯನ್ನು ಸ್ವಚ್ಚಗೊಳಿಸಲು ಇದು ತುಂಬಾ ಸಹಾಯಕವಾಗಿದೆ.ಇದು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸುವುದಲ್ಲದೆ ಆಕರ್ಷಣೀಯವಾಗಿಸುತ್ತದೆ.

ವಿರೋಧಿ ಗುಣಲಕ್ಷಣಗಳು:
ವಯಸ್ಸಾಗುವಿಕೆಯ ವಿರೋಧಿ ಗುಣಗಳು ಅಲೋವೆರಾದಲ್ಲಿದೆ.ಇದರಲ್ಲಿರುವ ಆಂಟಿಆಕ್ಸಿಡೆಂಟ್​ಗಳೂ ಮುಖದ ಸುಕ್ಕುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಅನ್ನು ಪ್ರತಿದಿನ ಬಳಸುವುದರಿಂದ ಯೌವ್ವನ ಮತ್ತು ಸೌಂದರ್ಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಬಹುದು.

ಪಾದದ ತೊಂದರೆ:
ಕಣಕಾಲುಗಳನ್ನು ಮೃದು ಮತ್ತು ಸುಂದರವಾಗಿಸಲು ಮತ್ತು ಪಾದದ ಬಿರುಕಿನ ಸಮಸ್ಯೆಗೂ ಅಲೋವೆರಾ ಜೆಲ್​ಗಳನ್ನು ಬಳಸಬಹುದು.ಹಾಗೆಯೇ ಈ ಜೆಲ್​ ತುಟಿಗಳನ್ನು ಮೃದುವಾಗಿ ಮತ್ತು ಗುಲಾಬಿಯಂತೆ ಸುಂದರವಾಗಿಸಲು ಸಹ ಮಾಡುತ್ತದೆ.

 

RELATED ARTICLES

Related Articles

TRENDING ARTICLES