Monday, December 23, 2024

ಸದ್ಯಕ್ಕಿಲ್ಲ ‘ಆಚಾರ್ಯ’ ದರ್ಶನ

ಕೊರೊನಾ ವೈರಸ್​ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಬಹುತೇಕ ಉದ್ಯಮಗಳು ಸೊರಗುತ್ತಿವೆ. ನೈಟ್​ ಕರ್ಫ್ಯೂ, ವೀಕೆಂಡ್​ ಕರ್ಫ್ಯೂ ಜಾರಿ ಆದ ನಂತರವಂತೂ ಚಿತ್ರೋದ್ಯಮ ತಣ್ಣಗಾಗಿದೆ. ಸಿನಿಮಾಗೆ ಸಂಬಂಧಿಸಿದ ಎಲ್ಲ ವಹಿವಾಟುಗಳು ಸ್ಥಗಿತಗೊಂಡಿವೆ. ಅನೇಕ ದೊಡ್ಡ ಬಜೆಟ್​ನ ಸಿನಿಮಾಗಳು ಸಹ ರಿಲೀಸ್​ ದಿನಾಂಕ ಮುಂದೂಡಿಕೊಂಡಿವೆ.

ಜ.7ರಂದು ಬಿಡುಗಡೆ ಆಗಿಬೇಕಿದ್ದ ‘RRR​’, ಜ.14ರಂದು ತೆರೆಕಾಣಬೇಕಿದ್ದ ‘ರಾಧೆ ಶ್ಯಾಮ್​’ ಸೇರಿದಂತೆ ಹಲವು ಚಿತ್ರಗಳ ರಿಲೀಸ್​ ದಿನಾಂಕ ಪೋಸ್ಟ್​ ಪೋನ್​ ಆಗಿವೆ. ಇವಿಷ್ಟು ಜನವರಿ ತಿಂಗಳಲ್ಲಿ ಬರಬೇಕಿದ್ದ ಸಿನಿಮಾಗಳ ಸ್ಥಿತಿ. ಅಷ್ಟೇ ಅಲ್ಲ, ಫೆಬ್ರವರಿಯಲ್ಲೂ ಕೊರೊನಾ ತಗ್ಗುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಫೆ.4ರಂದು ರಿಲೀಸ್​ ಆಗಬೇಕಿದ್ದ ‘ಆಚಾರ್ಯ’ ಚಿತ್ರ ಕೂಡ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದೆ. ‘ಮೆಗಾ ಸ್ಟಾರ್​’ ಚಿರಂಜೀವಿ ಅಭಿನಯದ ಈ ಸಿನಿಮಾ ಮೇಲೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಚಿತ್ರತಂಡವೇ ಈ ಸುದ್ದಿಯನ್ನು ಅಧಿಕೃತಗೊಳಿಸಿದೆ..

RELATED ARTICLES

Related Articles

TRENDING ARTICLES