Monday, December 23, 2024

ಸಂಕ್ರಾಂತಿಗೆ ‘ಜೇಮ್ಸ್’ ಪೋಸ್ಟರ್ ಗಿಫ್ಟ್

ಪುನೀತ್​ ರಾಜ್​ಕುಮಾರ್​ ಸ್ಯಾಂಡಲ್​​ವುಡ್​ನ ಭಾರೀ ಬೇಡಿಕೆಯ ನಟ.. ಅವರು ಏಕಾಏಕಿ ನಿಧನ ಹೊಂದುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಅವರು ಮೃತಪಟ್ಟಿದ್ದು ಸ್ಯಾಂಡಲ್​ವುಡ್ ಪಾಲಿಗೆ ದೊಡ್ಡ ನಷ್ಟ.

ಪುನೀತ್​ ಒಪ್ಪಿಕೊಂಡಿದ್ದ ಹಲವು ಪ್ರಾಜೆಕ್ಟ್​ಗಳು ಅರ್ಧಕ್ಕೆ ನಿಂತಿವೆ. ಅವರು ಅಭಿನಯಿಸುತ್ತಿದ್ದ ‘ಜೇಮ್ಸ್​’ ಸಿನಿಮಾ ಹೆಚ್ಚು ನಿರೀಕ್ಷೆ ಮೂಡಿಸಿತ್ತು. ನಿರ್ದೇಶಕ ಚೇತನ್​ ಕುಮಾರ್ ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಚಿತ್ರದ ಕೆಲಸಗಳು ಪೂರ್ಣಗೊಳ್ಳುವುದಕ್ಕೂ ಮುನ್ನವೇ ಪುನೀತ್​ ರಾಜ್​ಕುಮಾರ್​ ಇಹಲೋಕ ತ್ಯಜಿಸಿದ್ದರು. ಆದಾಗ್ಯೂ, ಜೇಮ್ಸ್​ ಸಿನಿಮಾ ರಿಲೀಸ್​ ಆಗುತ್ತಿದೆ. ಈಗ ಚಿತ್ರತಂಡ ಸಂಕ್ರಾಂತಿ ಪ್ರಯುಕ್ತ ವಿಶೇಷ ಪೋಸ್ಟರ್​ ರಿಲೀಸ್​ ಮಾಡಿದ್ದು. ಈ ಪೋಸ್ಟರ್​ನಲ್ಲಿ ಪುನೀತ್​ ಬೈಕ್​ ಏರಿ ಕುಳಿತಿದ್ದಾರೆ. ಅವರು ಈ ಪೋಸ್ಟರ್​ನಲ್ಲಿ ಸಖತ್​ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದು. ಇದನ್ನು ನೋಡಿದ ಫ್ಯಾನ್ಸ್​ ‘ಮಿಸ್​ ಯೂ ಅಪ್ಪು’ ಎಂದಿದ್ದಾರೆ. ಈ ಪೋಸ್ಟರ್​ನಲ್ಲಿ ಎಲ್ಲಿಯೂ ರಿಲೀಸ್​ ದಿನಾಂಕ ಉಲ್ಲೇಖ ಮಾಡಿಲ್ಲ. ಹೀಗಾಗಿ ಈ ಚಿತ್ರ ಯಾವಾಗ ತೆರೆಗೆ ಬರಲಿದೆ ಎನ್ನುವ ಕುತೂಹಲ ಹಾಗೆಯೇ ಉಳಿದುಕೊಂಡಿದೆ.

RELATED ARTICLES

Related Articles

TRENDING ARTICLES