Wednesday, January 22, 2025

OTTಯಲ್ಲಿ ‘GGVV’ ಅಬ್ಬರ

ದೇಶ : 2021ರಲ್ಲಿ ಪ್ರೇಕ್ಷಕರ ಮನಗೆದ್ದ ಸಿನಿಮಾಗಳ ಪೈಕಿ ‘ಗರುಡ ಗಮನ ವೃಷಭ ವಾಹನ’ ಚಿತ್ರ ಕೂಡ ಪ್ರಮುಖವಾಗಿದೆ. ರಾಜ್​ ಬಿ. ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ರೌಡಿಸಂ ಲೋಕದ ಕಥೆ ಹೇಳಲಾಗಿದೆ.

ನಿರ್ದೇಶನದ ಜತೆಗೆ ಪ್ರಮುಖ ಪಾತ್ರದಲ್ಲೂ ರಾಜ್​ ಬಿ. ಶೆಟ್ಟಿ ನಟಿಸಿದ್ದಾರೆ. ಇನ್ನೊಂದು ಮುಖ್ಯ ಪಾತ್ರಕ್ಕೆ ರಿಷಬ್​ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಮೂರು ದಿನಗಳ ಹಿಂದೆ ಒಟಿಟಿಯಲ್ಲಿ ತೆರೆಗೆ ಬಂದಿತ್ತು. ಈ ಸಿನಿಮಾ ಈಗ ಒಟಿಟಿಯಲ್ಲೂ ಧೂಳೆಬ್ಬಿಸಿದೆ..ಜನವರಿ 13ರಂದು ಒಟಿಟಿಯಲ್ಲಿ ‘ಗರುಡ ಗಮನ ವೃಷಭ ವಾಹನ’ ಸಿನಿಮಾ ರಿಲೀಸ್​ ಆಗಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ಕೇವಲ ಮೂರು ದಿನಗಳಲ್ಲಿ ಬರೋಬ್ಬರಿ 8 ಕೋಟಿ ವೀಕ್ಷಣೆ ಕಂಡಿದೆ. ಈ ಮೂಲಕ ಒಟಿಟಿಯಲ್ಲೂ ಸಿನಿಮಾ ಭಾರೀ ಜನಮನ್ನಣೆ ಪಡೆದುಕೊಂಡಂತಾಗಿದೆ.

RELATED ARTICLES

Related Articles

TRENDING ARTICLES