Sunday, November 17, 2024

ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ನರಳಾಟ

ಬಳ್ಳಾರಿ: ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಕೊರೊನಾ ಸೊಂಕಿತರು ಆಕ್ರೋಶಕೊಳಗಾಗಿದ್ದಾರೆ.ಪಾಸಿಟಿವ್ ಬಂದು ನಾಲ್ಕು ದಿನಗಳಾದರು ಯಾವುದೇ ಚಿಕಿತ್ಸೆ ಇಲ್ಲ ಬಿ.ಘಟಿಕಾಚಲಂ ಎಂಬುವವರಿಗೆ ನಾಲ್ಕು ದಿನದ ಹಿಂದೆ ಪಾಸಿಟಿವ್ ಆಗಿತ್ತು, ಆದರೆ ಇದುವರೆಗೆ ಯಾವುದೇ ಚಿಕಿತ್ಸೆ ನೀಡಲು ಜಿಲ್ಲಾಡಳಿತ ಮುಂದೆ ಬಾರಲಿಲ್ಲ ಎಂದರು.

ಘಟಿಕಾಚಲಂ ಅವರ ಪತ್ನಿ ಲತಾ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಅಂಬ್ಯುಲೆನ್ಸ್ ಕಳಿಸಿ ಅಂದರು ಯಾವುದೇ ಉತ್ತರ ಇಲ್ಲ, ಅದೇರೀತಿ ಜಿಲ್ಲಾ ಆರೋಗ್ಯ ಅಧಿಕಾರಿ, ತಾಲೂಕ ಆರೋಗ್ಯ ಅಧಿಕಾರಿಗೆ ಕರೆ ಮಾಡಿದರೂ ಸ್ಪಂದನೆ ಇಲ್ಲ.ಯಾರು ಸಹಾಯಕ್ಕೆ ಬರಾದಿದ್ದಾಗ, ತಾವೇ ಸ್ವತಃ ಪತ್ನಿಯನ್ನ ಕರೆದುಕೊಂಡು ಕಿಮ್ಸ್ ಆಸ್ಪತ್ರೆಗೆ ಹೋದ ಸೋಂಕಿತ ವ್ಯಕ್ತಿ‌.

ಪತ್ನಿ ಲತಾರಿಗೆ RTPCR ಟೆಸ್ಟ್ ಮಾಡಿಸಲು ಕಿಮ್ಸ್ ಆಸ್ಪತ್ರೆ ಹೊದರೆ ಅಲ್ಲಿಯೂ ನಿರಾಸೆ ಕಂಡುಬಂತು. ಮಧ್ಯಾಹ್ನ ಒಂದು ಗಂಟೆ ನಂತರ ಟೆಸ್ಟ್ ಮಾಡುವುದಿಲ್ಲ ಎಂದ ಸಿಬ್ಬಂದಿ.ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಪತ್ನಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಿದ್ದಾರೆ.
ಕೊನೆಗೆ ಮನೆಗೆ ಮರಳಿ‌ ಮನಯಲ್ಲೇ ಪತ್ನಿಗೆ ಚಿಕಿತ್ಸೆ ನೀಡಿದ್ದು.ಸಂಬಂಧಿ ವೈದ್ಯರ ಸಹಾಯ ಪಡೆದು ಮನೆಯಲ್ಲಿ ಪತ್ನಿಗೆ ಚಿಕಿತ್ಸೆ.ಯನ್ನು ನೀಡಿದ್ದಾರೆ.ಹೊಮ್ ಐಸೋಲೇಸಷ್ ಇರಿ ಎಂಬ ಸಲಹೆ ಬಿಟ್ಟರೆ ಜಿಲ್ಲಾಡಳಿತದಿಂದ ಯಾವುದೇ ನೆರವು ಇಲ್ಲ,ಧಾರವಾಡ ಜಿಲ್ಲಾಡಳಿತದಿಂದ ಕೊವಿಡ್ ನಿರ್ವಹಣೆ ಅಂದರೆ ಇದೇನಾ ಆರೋಗ್ಯ ಇಲಾಖೆ ನೆಪ‌ ಮಾತ್ರಕ್ಕೆ ಕೆಲಸ.ಸೋಂಕಿತರಿಗೆ ಉಚಿತ ಸಲಹೆ ಬಿಟ್ಟರೆ ಬೇರೇನೂ ಇಲ್ಲ ಎಂದು ಹುಬ್ಬಳ್ಳಿ ಶಿಮ್ಲಾ ನಗರದ ನಿವಾಸಿ ಬಿ‌.ಘಟಿಕಾಚಲಂ ಹೇಳಿದರು.

RELATED ARTICLES

Related Articles

TRENDING ARTICLES