ಬೆಂಗಳೂರು : ರಾಜ್ಯದಲ್ಲಿ ಮಾಹಾಮಾರಿ ಕೊರೋನಾ ತನ್ನ ಆರ್ಭಟವನ್ನು ಮುಂದುವರಿಸಿದೆ. ಈ ಹಿಂದೆ ಒಂದು ಮತ್ತು ಎರಡನೇ ಅಲೆಯಿಂದ ಜನರು ಈಗ ತಾನೇ ಚೇತರಿಸಿಕೋಳ್ಳುತ್ತಿದ್ದು, ಈಗ ಮೂರನೇ ಅಲೆ ತನ್ನ ಆರ್ಭಟವನ್ನು ಮುಂದುವರಿಸಿದೆ. ರಾಜ್ಯದ ಜನರು ಮತ್ತೆ ಕರುನಾಡು ಲಾಖ್ಡೌನ್ ಆಗುತ್ತಾ ಎಂಬ ಗೊಂದಲದಲ್ಲಿದ್ದಾರೆ.
ಕರ್ನಾಟಕ ಯಾವಾಗ ಲಾಕ್ ಡೌನ್ ಆಗುತ್ತಾ, ಫೆಬ್ರವರಿಯಲ್ಲಿ ಕರ್ನಾಟಕ ಲಾಕ್ ಡೌನ್ ಆಗೇ ಬಿಡುತ್ತಾ..? ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ. ಸದ್ಯ ಲಾಕ್ ಡೌನ್ ಬೇಡ ಎಂದು ಸರ್ಕಾರ ನಿರ್ಧಾರಿಸಿದೆ. ಆಸ್ಪತ್ರೆ ಗೆ ದಾಖಲಾಗುವರ ಸಂಖ್ಯೆ ಹೆಚ್ಚಾದರೆ ಮಾತ್ರ ಲಾಕ್ ಡೌನ್ ಮಾಡುವ ಎಲ್ಲಾ ಸಾಧ್ಯತೆಗಳು ಇವೆ.
ಸೋಂಕಿತರು ಆಸ್ಪತ್ರೆಗಳಲ್ಲಿ ಹೌಸ್ ಪುಲ್ ಆದ್ರೆ ಮಾತ್ರ ಕುರುನಾಡಿಗೆ ಬೀಗ ಎಂದು ಸರ್ಕಾರ ನಿರ್ಧಾರಿಸಿದೆ. ಈ ಮೊದಲು ಪಾಸಿಟಿವಿಟಿ ರೇಟ್ ಆಧಾರದ ಮೇಲೆ ಲಾಕ್ ಡೌನ್ ಅಸ್ತ್ರ ಪ್ರಯೋಗ ಮಾಡುತ್ತಿದ್ದ ಸರ್ಕಾರ ಇದೀಗ ಪಾಸಿಟಿವಿಟಿ ರೇಟ್ ಬದಲಾಗಿ ಆಸ್ಪತ್ರೆ ಹೌಸ್ ಪುಲ್ ಆದ್ರೆ ಮಾತ್ರ ಲಾಕ್ ಡೌನ್ ಎಂದು ಘೋಷಿಸಿದೆ. ಸದ್ಯ ಲಾಕ್ ಡೌನ್ ನಿಂದ ರಿಲೀಫ್ ಸಿಕ್ಕಿದಂತಾಗಿದೆ. ರಾಜ್ಯದಲ್ಲಿ ಶೇ 10 ರಷ್ಟು ಸೋಂಕಿತರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಸದ್ಯ ಲಾಕ್ ಡೌನ್ ಬದಲಾಗಿ ಸೆಮಿ ಲಾಕ್ ಮುಂದುವರಿಸಲು ಸರ್ಕಾರ ನಿರ್ಧಾರಿಸಿದೆ. ಸೋಂಕು ನಿಯಂತ್ರಿಸಲು ಸದ್ಯ ಸೆಮಿ ಲಾಕ್ ಸಾಕು ಎಂದು ತಜ್ಞರು ತಿಳಿಸಿದ್ದಾರೆ.