Monday, December 23, 2024

ಅಕ್ಷಯ್​ ಮೇಲೆ ‘ಪುಷ್ಪ’ ಡೈರೆಕ್ಟರ್ ಕಣ್ಣು

ಸುಕುಮಾರ್ ​ ಓರ್ವ ಯಶಸ್ವಿ ನಿರ್ದೇಶಕ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಅವರ ನಿರ್ದೇಶನದಲ್ಲಿ ಮೂಡಿಬಂದ ‘ಪುಷ್ಪ’ ಸಿನಿಮಾ ಸೂಪರ್​ ಹಿಟ್​ ಆಗಿದೆ. ವಿಶ್ವಾದ್ಯಂತ 300 ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್​ ಮಾಡಿ ಈ ಚಿತ್ರ ಮುನ್ನುಗ್ಗುತ್ತಿದೆ.

ಈ ಸಿನಿಮಾದ ಗೆಲುವಿನಿಂದಾಗಿ ಅಲ್ಲು ಅರ್ಜುನ್​ ಅವರ ವೃತ್ತಿಜೀವನಕ್ಕೆ ದೊಡ್ಡ ಬೂಸ್ಟ್​ ಸಿಕ್ಕಂತೆ ಆಗಿದೆ. ಹಾಗಾಗಿ ಸುಕುಮಾರ್​ ಜೊತೆ ಕೆಲಸ ಮಾಡಲು ಬೇರೆಲ್ಲ ಹೀರೋಗಳು ಕೂಡ ಕಾಯುತ್ತಿದ್ದಾರೆ. ಆದರೆ ಸುಕುಮಾರ್​ ಅವರ ಆಯ್ಕೆ ಪಟ್ಟಿಯಲ್ಲಿ ಯಾವೆಲ್ಲ ಹೀರೋಗಳು ಇದ್ದಾರೆ ಎಂಬುದು ಕುತೂಹಲದ ಪ್ರಶ್ನೆ. ಸದ್ಯದಲ್ಲೇ ಅವರು ‘ಪುಷ್ಪ 2’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ನಡುವೆ ಅಕ್ಷಯ್​ ಕುಮಾರ್​ ಜೊತೆ ಕೆಲಸ ಮಾಡಬೇಕು ಎಂಬ ಆಸೆಯನ್ನು ಸುಕುಮಾರ್​ ವ್ಯಕ್ತಪಡಿಸಿದ್ದಾರೆ. ಈ ಸುದ್ದಿ ಕೇಳಿದ ಬಳಿಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ. ‘ಪುಷ್ಪ 2’ ಸಿನಿಮಾದಲ್ಲಿ ಅಕ್ಷಯ್​ ಕುಮಾರ್​ ನಟಿಸಬಹುದೇ ಎಂಬ ಕೌತುಕ ನಿರ್ಮಾಣವಾಗಿದೆ.

RELATED ARTICLES

Related Articles

TRENDING ARTICLES