Wednesday, January 22, 2025

ಆದಿವಾಸಿಗಳ ಗೋಳು ಕೇಳೋರು ಇಲ್ಲ.. ಹೇಳೋರು ಇಲ್ಲ..!

ಮೈಸೂರು: ಆದಿವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ವಿಫಲ ಹಿನ್ನೆಲೆ ಮತ್ತೆ ಸ್ವಸ್ಥಾನಕ್ಕೆ ಬಂದ ಆದಿವಾಸಿ ಜನರು ಆದಿವಾಸಿಗಳ ಅರಣ್ಯ ಪ್ರವೇಶಕ್ಕೆ ಅರಣ್ಯ ಇಲಾಖೆ ವಿರೋಧ ವ್ಯಕ್ತಪಡಿಸಿದೆ.

10 ವರ್ಷದ ಬಳಿಕ ಮತ್ತೆ ಸ್ವಸ್ಥಾನಕ್ಕೆ ಬಂದ ಜನರು, ಸುಮಾರು 60ಕ್ಕೂ ಹೆಚ್ಚು ಆದಿವಾಸಿಗಳಿಂದ ಅರಣ್ಯ ಪ್ರವೇಶ 2010-11ನೇ ಸಾಲಿನಲ್ಲಿ ಪುನರ್ವಸತಿ ಕೊಡಿಸುವುದಾಗಿ ಸ್ಥಳಾಂತರ ಮಾಡಲಾಯಿತು.ಸುಮಾರು 40ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರ ಮಾಡಲಾಯಿತು.

ಉಳುಮೆಗೆ ಯೋಗ್ಯ ಭೂಮಿ ವಿತರಣೆ,18 ವರ್ಷ ತುಂಬಿದವರಿಗೆ 10 ಲಕ್ಷ ಪ್ಯಾಕೇಜ್ ಘೋಷಣೆ ಮಾಡಿತ್ತು.ಆದರೆ ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ ಹಂಚಿಕೆ ಆರೋಪದಿಂದಾಗಿ 10 ವರ್ಷವಾದರೂ ಪ್ಯಾಕೇಜ್ ತಲುಪದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬೇಡಿಕೆ ಈಡೇರಿಸದಿದ್ದರೆ ಸಾಮೂಹಿಕ ಆತ್ಮಹತ್ಯೆ ನಿರ್ಧಾರ ಮಾಡುತ್ತೇವೆ ಎಂದು ಹೇಳಿದ್ದಾರೆ.ಮೂಲ ಸ್ಥಾನದಲ್ಲಿ ವಾಸಿಸಲು ಅರಣ್ಯ ಇಲಾಖೆ ವಿರೋಧ ವ್ಯಕ್ತಪಡಿಸಿದ್ದು ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಹೆಚ್.ಡಿ.ಕೋಟೆ ತಾಲೂಕಿನ ಬೋಗಾಪುರ ಆದಿವಾಸಿಗಳು ಹೇಳಿದ್ದಾರೆ.

RELATED ARTICLES

Related Articles

TRENDING ARTICLES