Thursday, January 23, 2025

ಪೀಟರ್ಸನ್​​​ನಲ್ಲಿ GRV ಕಂಡ ಶಾಸ್ತ್ರಿ

ವಿದೇಶ : ಟೀಮ್​ ಇಂಡಿಯಾ ವಿರುದ್ಧದ ಕೊನೆಯ ಪಂದ್ಯದ ನಿರ್ಣಾಯಕ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಧಾನ ಕೊಡುಗೆ ನೀಡಿದ್ದು ದಕ್ಷಿಣ ಆಫ್ರಿಕಾದ ಯುವ ಆಟಗಾರ ಕೀಗನ್ ಪೀಟರ್ಸನ್. ಪೀಟರ್ಸನ್ ಭರ್ಜರಿ 82 ರನ್‌ಗಳಿಸಿ ಭಾರತೀಯ ತಂಡಕ್ಕೆ ಸವಾಲಾದರು.

ಈ ಮೂಲಕ ದಕ್ಷಿಣ ಆಫ್ರಿಕಾ ಸುಲಭವಾಗಿ ಗೆಲ್ಲಲು ಕಾರಣವಾದರು. ಅಲ್ಲದೆ ಸರಣಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದಕ್ಕೆ ಸರಣಿ ಶ್ರೇಷ್ಠ ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡರು. ಸದ್ಯ ಕೀಗನ್ ಪೀಟರ್ಸನ್ ಅವರ ಈ ಅದ್ಭುತ ಪ್ರದರ್ಶನದ ಬಗ್ಗೆ ಅನೇಕ ಕ್ರೀಡಾ ಪಂಡಿತರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಅವರು ಕೀಗನ್ ಪೀಟರ್ಸನ್ ಆಟವನ್ನು ಹಾಡಿಹೊಗಳಿದ್ದು, ಪೀಟರ್ಸನ್ ಆಟ ತನ್ನ ಬಾಲ್ಯದ ಹೀರೋ ಬೆಂಗಳೂರಿನ ಗುಂಡಪ್ಪ ವಿಶ್ವನಾಥ್​​ ಅವರನ್ನು ನೋಡಿದಂತಾಯಿತು ಎಂದು ಟ್ವೀಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES