Monday, December 23, 2024

ಇಲಿಯ ಸಾವಿಗೆ ಕಂಬನಿ ಮಿಡಿದ ಕಾಂಬೋಡಿಯ ಸೇನೆ

ಈ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಟೀಕೆಗೆ ಹಾಗು ಮಾನವನ ಶಾಪಕ್ಕೆ ಒಳಗಾಗುವ ಜೀವಿ ಅಂದ್ರೆ ಅದು ಇಲಿ ಮಾತ್ರ. ಸದಾ ಮಾನವನಿಗೆ ಒಂದಲ್ಲ ಒಂದು ರೀತಿಯಾಗಿ ಉಪದ್ರ ಮಾಡುವ ಇಲಿಗಳು, ಮಾನವನ ಕೆಂಗಣ್ಣಿಗೆ ಗುರಿಯಾಗುತ್ತವೆ. ಇದಕ್ಕೆ ಕಾರಣ ಇಲಿಗಳ  ವರ್ತನೆ, ಸಾಧಾರಣವಾಗಿ ಮಾನವ ಸ್ನೇಹಿಯಲ್ಲದ ಜೀವಿಯಾದ ಇಲಿ, ಮನೆಗಳಿಗೆ ಪ್ರವೇಶಿಸಿ ಜನರ ಬಟ್ಟೆಗಳನ್ನೋ, ಅಹಾರ ಸಾಮಾಗ್ರಿಗಳನ್ನೋ ಹಾಳು ಮಾಡುತ್ತವೆ. ಕೆಲವು ಸಂದರ್ಭದಲ್ಲಿ  ರೈತರು ಕಷ್ಟ ಪಟ್ಟು ಬೆಳೆದ ಬೆಳೆಗಳು ಕೂಡ ಇಲಿಗಳ ಪಾಲಾಗಿ ರೈತರು ನಷ್ಟ ಅನುಭವಿಸುವ ಹಾಗೆ ಮಾಡುತ್ತವೆ. ಹಾಗಾಗಿ ಬಹುತೇಕ ಜನ ಸಮಾನ್ಯರಿಂದ ಸಾವಿನ ಉಡುಗೋರೆಯನ್ನ ಇಲಿಗಳ ಸಂತತಿ ಸದಾ ಪಡೆಯುತ್ತಲೇ ಇರುತ್ತದೆ.

ಹೀಗೆ ಸಾಕಷ್ಟು ತೊಂದರೆಗಳನ್ನ ಕೊಡುವ ಇಲಿಗಳನ್ನ ಸಾಕುವವರು ಕೂಡ ಇದ್ದಾರೆ. ಬಿಳಿ ಇಲಿಗಳ ಸಾಕಾಣೆಯಿಂದ ವರ್ಷಕ್ಕೆ ಅಬ್ಬಬ್ಬ ಅಂದ್ರೂ 3ರಿಂದ ನಾಲ್ಕು ಲಕ್ಷ ರೂಪಾಯಿಗಳ ವರೆಗೆ ಕೂಡ ಆದಾಯ ಗಳಿಸುವವರು ಕೂಡ ಇದ್ದಾರೆ, ಹೀಗಾಗಿ ಇಲಿಗಳು ಮಾನವನಿಗೆ ಎಷ್ಟು ಉಪದ್ರ ಮಾಡುತ್ತವೆಯೋ ಅಷ್ಟೇ ಉಪಕಾರವನ್ನ ಕೂಡ ಮಾಡುತ್ತವೆ. ಇನ್ನು ಇಲಿಗಳು ಕೂಡ ಅಷ್ಟೇ ಅವುಗಳು ಸೂಕ್ಷ್ಮ ಸಂವೇದನೆಯ ಜೀವಿಗಳು. ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಆಹಾರ ಅರಸಿ ಹೋಗುವ ಇಲಿಗಳು, ಜನನಿಬಿಡ ಪ್ರದೇಶಗಳಲ್ಲಿರುವ ಬಿಲಗಳು, ಸುರಂಗಗಳು, ಮರದ ಪೊಟರೆಗಳ ಬದಿ ನೆಲೆಸಲು ಶುರು ಮಾಡುತ್ತವೆ. ಹೀಗಾಗಿ ಇಲಿಗಳು ಎಲ್ಲಾ ಪ್ರದೇಶಗಳಲ್ಲೂ ಸಾಧಾರಣವಾಗಿ ಕಂಡು ಬರುತ್ತಲೇ ಇರುತ್ತವೆ.

ಹೀಗೆ ಸಾಧಾ ಮಾನವನಿಗೆ ಒಂದಲ್ಲ ಒಂದು ರೀತಿಯಲ್ಲಿ ತೊಂದರೆ ಕೊಡುವ ಇಲಿಗಳ, ಮಾನವನ ಜೀವ ಉಳಿಸಲು ಕೂಡ ಸಿದ್ಧ ಇರುತ್ತವೆ ಅನ್ನೋದು ಬಹುತೇಕರಿಗೆ ಗೊತ್ತಿರೊಲ್ಲ. ಕಲವೊಮ್ಮ ಶ್ವಾನಗಳಂತೆ ಇಲಿಗಳು ಕೂಡ ಸೇನೆಯಲ್ಲಿ ಸೇವೆ ಸಲ್ಲಿಸುತ್ತವೆ. ಇವುಗಳ ಸಾಧನೆಗೆ ಸೇನೆಯಲ್ಲಿ ಪ್ರಶಸ್ತಿ ಹಾಗು ಗೌರವವನ್ನ ಕೂಡ ನೀಡಲಾಗುವುದು. ಜೊತೆಗೆ ಇದರ ಅಂತ್ಯದ ನಂತರ ಸಕಲ ಸೇನಾ ಗೌರವಗಳೊಂದಿಗೆ ಇದಕ್ಕೂ ಕೂಡ ವಿದಾಯವನ್ನ ಕೂಡ ಹೇಳುತ್ತಾರೆ. ಜೊತೆಗೆ ಇವುಗಳ ಸಾವಿಗೆ ಸೇನಾ ಸಿಬ್ಬಂದಿ ಸೇರಿದಂತೆ ಹಲವರು ಕಣ್ಣೀರಿನ ವಿದಾಯ ಕೂಡ ಸಲ್ಲಿಸುತ್ತಾರೆ. ಇದಕ್ಕೊಂದು ಉತ್ತಮ ಉದಾಹರಣೆ ಅಂದ್ರೆ ಅದು ಮಗವಾ ಇಲಿ.

2016ರಲ್ಲಿ ತಾಂಜೇನಿಯಾದಲ್ಲಿ ಹುಟ್ಟಿದ್ದ ಈ ಮಗವಾ ಇಲಿ, ಕಾಂಬೋಡಿಯಾ ಜಗತ್ತಿನಲ್ಲಿಯೇ ಅತಿ ಹೆಚ್ಚು ನೆಲಬಾಂಬ್​ಗಳನ್ನು ಪ್ರಯೋಗಿಸುವ ದೇಶವಾದ ಕಾರಣ. ವಿಶೇಷ ತರಬೇತಿ ಪಡೆದು 5 ವರ್ಷಗಳ ಕಾಲ ಕಾಂಬೋಡಿಯಾದಲ್ಲಿ ಭದ್ರತಾಪಡೆಗಳೊಂದಿಗೆ ಕಾರ್ಯನಿರ್ವಹಿಸಿತ್ತು. ಹೀಗೆ ಸೇನೆಯಲ್ಲಿದ್ದ  ಮಗವಾ ಇಲಿ ಸಾವನ್ನಪ್ಪಿದ್ದು, ಕಾಂಬೋಡಿಯಾ ಸೇನೆ ಬೇಸರವನ್ನ ವ್ಯಕ್ತ ಪಡಿಸಿದೆ ಈ ಇಲಿಗೆ ಅಪೊಪೊ (APOPO) ಅನ್ನೋ ಲಾಭ ರಹಿತ ಸಂಸ್ಥೆ ತರಬೇತಿಯನ್ನ ನೀಡಿತ್ತು. ಸದ್ಯಕ್ಕೆ ಈ ವಿಚಾರದ ಕುರಿತು ಅಧಿಕೃತವಾಗಿ ಮಾಹಿತಿಯನ್ನ ನೀಡಿರುವ ಅಪೊಪೊ ಸಂಸ್ಥೆ, ಮಗವಾ ಸಾವಿಗೆ ಬೇಸರವನ್ನ ವ್ಯಕ್ತ ಪಡಿಸಿ, ಈ ಇಲಿಯ ಸೇವೆಯನ್ನ ಸ್ಮರಿಸಿಕೊಂಡಿದೆ.  ಜೊತೆಗೆ ಈ ಮಗವಾ ಇಲಿಯ ಸೇವೆಯ ಕುರಿತು ಹಲವು ಮಹತ್ವದ ಮಾಹಿತಿಯನ್ನ ಕೂಡ ನೀಡಿದೆ.

ಕಳೆದ 5 ವರ್ಷಗಳಿಂದ ಕಾಂಬೋಡಿಯಾದ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಈ ಮಗವಾ ಇಲಿ, 100ಕ್ಕೂ ಹೆಚ್ಚು ನೆಲಬಾಂಬುಗಳನ್ನು ಪತ್ತೆ ಮಾಡಿತ್ತು. ಮಗವಾ ತನ್ನ ಈ ಅಪ್ರತಿಮ ಸಾಧನೆಗಾಗಿ ಚಿನ್ನದ ಪದಕವನ್ನ ಪಡೆದು ಹೊಸ ದಾಖಲೆಯನ್ನ ಕೂಡ ಪಡೆದಿತ್ತು. ಈ ಕಾರಣದಿಂದಾಗಿಯೇ ಮಗವಾವನ್ನ ಹಿರೋ ರ್ಯಾಟ್​ ಎಂದು ನಾಗರೀಕರು ಕರೆಯುತ್ತಿದ್ದರು. ಇದುವರೆಗೂ ಈ ಇಲಿ ಸುಮಾರು  2,25,000 ಚದರ ಕಿಮೀನಷ್ಟು ಭೂಮಿಯಲ್ಲಿ ಬಾಂಬ್​ಗಳನ್ನು ಹುಡುಕಿದೆ. 31 ಪುಟ್ಬಾಲ್​ ಕ್ರೀಡಾಂಗಣದಲ್ಲಿ 71 ಜೀವಂತ ನೆಲಬಾಂಬ್​ಗಳನ್ನು ಪತ್ತೆ ಮಾಡಿದ್ದು, 38 ನಿಶ್ಯೇಷ್ಟಿತ ಬಾಂಬ್​ಗಳನ್ನು ಗುರುತಿಸಿದೆ. ಈ ಮೂಲಕ ಹಲವು ಅಪಾಯಗಳನ್ನ ತಡೆಯುವುದರಲ್ಲಿ ತಾನು ಕೂಡ ನಿಸ್ಸಿಮ ಎಂಬುವುದನ್ನ ಈ ಇಲಿ ಸಾಬೀತು ಮಾಡಿತ್ತು.

ಹೀಗೆ ಹಲವು ಬಾರಿ ನೆಲ ಬಾಂಬ್​ಗಳನ್ನ ಪತ್ತೆ ಹಚ್ಚಿದ್ದ ಈ ಇಲಿಗೆ ಕಠಿಣವಾದ ತರಬೇತಿಯನ್ನ ಕೂಡ ನೀಡಲಾಗುತ್ತಿತ್ತು. ಪ್ರತಿ ದಿನ ಕಂಬೋಡಿಯಾದ ಸೇನೆ ಈ ಇಲಿಗೆ ನೆಲ ಬಾಂಬ್ ಪತ್ತೆ ಹಚ್ಚುವ ಟಾಸ್ಕ್​​ ನೀಡ್ತಾ ಇತ್ತು. ಈ ಟಾಸ್ಕ್​ ಅನ್ನ ಈ ಮಗವಾ ಇಲಿ ಪೂರ್ಣಗೊಳಿಸಿದ್ರೆ ಅದಕ್ಕೆ ಬಾಳೆ ಹಣ್ಣನ್ನ ನೀಡಲಾಗ್ತಾ ಇತ್ತು. ಹೀಗೆ ಪ್ರತಿದಿನ ತನ್ನ ಟಾಸ್ಕ್​ ಪೂರ್ಣಗೊಳಿಸಿದ ಇಲಿಗೆ ಬಾಳೆ ಹಣ್ಣನ್ನ ನೀಡಲಾಗ್ತಾ ಇತ್ತು. ಹಾಗಾಗಿ ಈ ಇಲಿ ಹಲವು ಬಾರಿ ನೆಲ ಬಾಂಬ್​ ಪತ್ತೆ ಹಚ್ಚಿದ್ದಾಗಲೂ ಇದೇ ಅಭ್ಯಾಸವನ್ನ ಮಾಡಿಸಲಾಗುತ್ತು ಇದೇ ಕಾರಣದಿಂದಾಗಿ ಮಗವಾ ಇಲಿ ಸರಾಗವಾಗಿ ನೆಲ ಬಾಂಬ್​ ಪತ್ತೆ ಹಚ್ಚಿ ಬಹುದೊಡ್ಡ ಯಶಸ್ಸನ್ನ ಸಾಧಿಸಿತ್ತು, ಜೊತೆಗೆ ಕಾಂಬೋಡಿಯಾದ ಸೇನೆಗೆ ಕೂಡ ಅಚ್ಚುಮೆಚ್ಚಿನ ಸಸ್ತನಿಯಾಗಿತ್ತು.

ಒಟ್ಟಾರೆಯಾಗಿ ಪರೋಪಕಾರಿಯಾಗಿದ್ದ ಮಗವಾ ಇಲಿ ಇದೀಗ ಸಾವನ್ನಪ್ಪಿದ್ದು, ಕಾಂಬೋಡಿಯಾದ ಸೇನೆ ಕಂಬನಿಯನ್ನ ಮಿಡಿದಿದೆ. ಈ ಬಗ್ಗೆ ಅಲ್ಲಿನ ಜನ ಸಾಮಾನ್ಯರು ಕೂಡ ಬೇಸರವನ್ನ ವ್ಯಕ್ತ ಪಡಿಸಿದ್ದು,  ಈ ಇಲಿಯ ಸೇವೆಯ ಬಗ್ಗೆ ಸ್ಮರಿಸಿಕೊಂಡಿದ್ದಾರೆ. ಇದೀಗ ಈ ಇಲಿಗೆ ಕಾಂಬೋಡಿಯಾ ಸೇನೆ ತನ್ನ ಗೌರವ ಸೂಚಿಸಿದೆ. ಕಾಂಬೋಡಿಯಾ ಸೇನೆ ಈ ಇಲಿ ಮಾಡಿದ್ದ ಸೇವೆಗೆ ಮತ್ತಷ್ಟು ಸೂಕ್ತ ಗೌರವವನ್ನ ಸಲ್ಲಿಸಲಾಗುವುದು ಎಂದು ಸೂಚಿಸಿದೆ.

ಲಿಖಿತ್​ ರೈ, ಪವರ್​ ಟಿವಿ

RELATED ARTICLES

Related Articles

TRENDING ARTICLES