ದಕ್ಷಿಣ ಆಫ್ರಿಕಾ: ಭಾರತದ ಟೆಸ್ಟ್ ಕ್ರಿಕೆಟ್ಗೆ ದಾಖಲೆಗಳ ವೀರ ವಿರಾಟ್ ಕೊಹ್ಲಿ ಅವರು ಇಂದು ಟೆಸ್ಟ್ ತಂಡ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ.
ಈ ವಿಷಯವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿರು ಅವರು, ‘ಸಹಕಾರ, ಹೊಣೆಗಾರಿಕೆ ನೀಡಿದ ಎಲ್ಲರಿಗೂ ಧನ್ಯವಾದಗಳು! ಸುದೀರ್ಘ ಅವಧಿವರೆಗೆ (7 ವರ್ಷ) ಅವಕಾಶ ನೀಡಿದ್ದಕ್ಕೆ ಬಿಸಿಸಿಐಗೆ ಧನ್ಯವಾದ’ ಎಂದಿದ್ದಾರೆ.
ಏಳು ವರ್ಷಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ಅವರ ವಿದಾಯದ ನಂತರ ಆ ಸ್ಥಾನವನ್ನು ಕೊಹ್ಲಿ ಅವರು ವಹಿಸಿಕೊಂಡಿದ್ದರು. ಸದ್ಯ ವಿರಾಟ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಿದ್ದಾರೆ.
ಸದ್ಯ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿತ್ತು. ಟೆಸ್ಟ್ ಸರಣಿ ಸೋತ ಬೆನ್ನಲ್ಲೇ ವಿರಾಟ್ ಕೊಹ್ಲಿ ಅವರು ವಿದಾಯ ಹೇಳಿದ್ದಾರೆ. ಇತ್ತೀಚಿಗಷ್ಟೇ ಟಿ20 ಮತ್ತು ಏಕದಿನ ಕ್ರಿಕೆಟ್ನ ನಾಯಕತ್ವದಿಂದ ಹೊರಬಿದ್ದಿದ್ದರು. ಈಗ ಟೆಸ್ಟ್ಗೆ ವಿದಾಯ ಘೋಷಿಸಿದ್ದಾರೆ.ವಿರಾಟ್ ನಾಯಕತ್ವದಲ್ಲಿ 68 ಟೆಸ್ಟ್ ಪಂದ್ಯಗಳನ್ನು ಆಡಿದೆ ಇದರಲ್ಲಿ 40 ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ.