Monday, December 23, 2024

ಧರ್ಮ ಕೀರ್ತಿರಾಜ್​ ಅಭಿನಯದ ‘ಸುಮನ್’ ಚಿತ್ರದ ಆಡಿಯೋ ಲಾಂಚ್​

ಸ್ಯಾಂಡಲ್​ವುಡ್​ನ ಚಾಕಲೇಟ್ ಹೀರೋ ಧರ್ಮ ಕೀರ್ತಿ ರಾಜ್ ಸದ್ಯ ಮೂರು ಹುಡುಗಿಯರ ಜೊತೆ ಲವ್ ಅಲ್ಲಿ ಬಿದ್ದಿದ್ದಾರಂತೆ. ಅಂದಹಾಗೆ ಒಂದೊಂದ್ ಸಿನಿಮಾದಲ್ಲಿ ಒಬ್ಬರ ಜೊತೆಗೆ ಡ್ಯೂಯೇಟ್ ಹಾಡುತ್ತಿದ್ದ ಹೀರೋ ಈಗ ಅದ್ಯಾಕೆ ಮೂರು ಜನ ಹುಡ್ಗಿರ್ ಜೊತೆ ರೋಮ್ಯಾನ್ಸ್ ಮಾಡಿದರು.

ನಟ ಧರ್ಮ ಕೀರ್ತಿ ರಾಜ್ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡ್ರೂ ಹಲವು ಕನ್ನಡ ಸಿನಿರಸಿಕರ ಪಾಲಿಗೆ ಕಣ್ ಕಣ್ಣ ಸಲಿಗೆ ಅಂತ ಪ್ರೀತಿಯ ಗುಂಗಲ್ಲಿ ತೇಲಿರೋ ಹಾಡು ಆಗಾಗ ಧರ್ಮ ನೋಡಿದಾಗ ನೆನಪಾಗುತ್ತೆ. ಚಾಕಲೇಟ್ ಬಾಯ್ ಧರ್ಮ ಪ್ರೇಮ್ ಕಹಾನಿ ಈಗ ಬರೋಬ್ಬರಿ ಮೂರು ಹುಡುಗಿರ ಜೊತೆ ಶುರುವಾಗಿದೆ. ಅದು ಸುಮನ್ ಅನ್ನೋ ವಿಭಿನ್ನ ಕಥಾ ಹಂದರದ ಸಿನಿಮಾದಲ್ಲಿದೆ.

ಸುಮನ್ ಸಿನಿಮಾದಲ್ಲಿ ಧರ್ಮಗೆ ಜೋಡಿ ಆಗಿ ನಿಮಿಕಾ ರತ್ನಾಕರ್, ರಜನಿ ಭಾರದ್ವಜ್, ಜೈಲಿನ್ ಗಣಪತಿ ಮೂರು ಜನ ನಾಯಕಿಯರು ಸ್ಕ್ರೀನ್ ಶೇರ್ ಮಾಡಿದ್ದಾರೆ. ರವಿ ಸಾಗರ್ ಆಕ್ಷನ್ಕಟ್ ಹೇಳಿರೋ ಸುಮನ್ ಸಿನಿಮಾ ಹಲವು ವಿಶೇಷತೆಯಿಂದ ಕೂಡಿದ್ದು ಇದೊಂದು ವಿಭಿನ್ನ ಪ್ರೇಮ್ ಕಹಾನಿ ಅಂತ ಹೇಳಿಕೊಂಡಿದೆ ಚಿತ್ರತಂಡ. ಧರ್ಮ ಪಾತ್ರ ಕೂಡ ಸಿನಿಮಾದಲ್ಲಿ ಅಷ್ಟೇ ಸ್ಪೇಷಲ್​ ಆಗಿದೆ.

ಇತ್ತೀಚೆಗಷ್ಟೇ ಚಿತ್ರತಂಡ ಚಿತ್ರದ ಹಾಡುಗಳನ್ನ ರಿಲೀಸ್ ಮಾಡಿದೆ. ಜುಬಿನ್ ಪೌಲ್ ಚಿತ್ರಕ್ಕೆ ಸಂಗೀತ ನೀಡಿದ್ದು ಚಿತ್ರದ ನೀ ಪರಿಚಯ ಅನ್ನೋ ಸಾಂಗ್ ಜೊತೆ ಕೆಲವು ಹಾಡುಗಳು ಕೇಳುಗರನ್ನ ಮೋಡಿ ಮಾಡುತ್ತಿವೆ. ಚಿಕ್ಕಮಂಗಳೂರು ಸೇರಿದಂತೆ ಕೆಲವೊಂದು ಸೀನ್ಸ್​ಗಳನ್ನ ಮೈಸೂರಿನಲ್ಲಿ ಶೂಟ್ ಮಾಡಲಾಗಿದೆ. ಇನ್ನು ಚಿತ್ರದ ಆಡಿಯೋ ರಿಲೀಸ್ ವೇಳೆ ನಿರ್ದೇಶಕ ನಂದಕಿಶೋರ್ ಮಾತನಾಡಿ ಧರ್ಮ ಹಾಗು ತಮ್ಮ ಸಿನಿ ಜರ್ನಿ ಮೆಲಕು ಹಾಕಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಅಂದುಕೊಂಡಂತಾಗಿದ್ರೆ ಫೆಬ್ರವರಿಯಲ್ಲಿ ಸಿನಿಮಾವನ್ನ ತೆರೆಗೆ ತರೋ ಪ್ಲ್ಯಾನ್​ನಲ್ಲಿತ್ತು ಚಿತ್ರತಂಡ. ಆದ್ರಿಗ ಇನ್ನು ಕೆಲವು ದಿನಗಳ ಸಿನಿಮಾವನ್ನ ಥಿಯೇಟರ್​​ಗೆ ತರೋ ಬಗ್ಗೆ ಸ್ಪಷ್ಟ ನಿರ್ಧಾರ ಮಾಡಲಿದೆ. ಹಾಗಾದ್ರೆ ಸುಮನ್ ಅನ್ನೋ ಟ್ರೈಯಾಂಗಲ್​ ಲವ್ ಸ್ಟೋರಿಲಿ ಇನ್ನೇನೆಲ್ಲಾ ವಿಶೇಷತೆಗಳು ಇರುತ್ತವೆ ಅನ್ನೋದನ್ನ ಕಾದು ನೋಡಬೇಕಿದೆ.

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES