Thursday, October 31, 2024

ಇನ್​​ಸ್ಟಾದಲ್ಲಿ ಅಲ್ಲು ಮೋಡಿ

ದೇಶ : ಟಾಲಿವುಡ್​ ನಟ ಅಲ್ಲು ಅರ್ಜುನ್ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 15 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಈ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಇಷ್ಟೊಂದು ದೊಡ್ಡ ಅಭಿಮಾನಿ ಬಳಗ ಮತ್ತು ಹಿಂಬಾಲಕರನ್ನು ಪಡೆದ ಮೊದಲ ನಟ ಎಂದೆನಿಸಿಕೊಂಡಿದ್ದಾರೆ.

ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ಸ್ಟೈಲಿಶ್​ ಸ್ಟಾರ್​ ಕೃತಜ್ಞತೆ ಸಲ್ಲಿಸಿದ್ದಾರೆ. ’15 ಮಿಲಿಯನ್..ನಿಮ್ಮೆಲ್ಲರ ಪ್ರೀತಿಗೆ ತುಂಬಾ ಧನ್ಯವಾದಗಳು..ಎಂದೆಂದಿಗೂ ಕೃತಜ್ಞತೆಗಳು ಮತ್ತು ಸಂಕ್ರಾಂತಿಯ ಶುಭಾಶಯಗಳು’ ಎಂದು ಇನ್ಸ್​ಟಾದಲ್ಲಿ ಬರೆದುಕೊಂಡಿದ್ದಾರೆ. ಟ್ವಿಟ್ಟರ್​​ನಲ್ಲಿ 6 ಮಿಲಿಯನ್ ಫಾಲೋವರ್ಸ್ ಹೊಂದಿರುವ ಇವರು ಫೇಸ್‌ಬುಕ್‌ನಲ್ಲಿ 21 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

RELATED ARTICLES

Related Articles

TRENDING ARTICLES