Thursday, October 31, 2024

ಕೇಶದಿಂದಲೇ ತಯಾರಾಯ್ತು ಬೃಹತ್ ಚೆಂಡು

ಜಗತ್ತಿನ ಬಹುತೇಕ ಸೌಂದರ್ಯ ಪ್ರಿಯರಿಗೆ ಕೇಶ ವಿನ್ಯಾಸ ಅಂದ್ರೆ ಅದೇನೋ ಒಂದು ರೀತಿಯಾದ ಕ್ರೇಸ್​. ಅದರಲ್ಲೂ ಜಗತ್ತಿನ ಬಹುತೇಕ ಯುವ ಪೀಳಿಗೆ ಚಿತ್ರ-ವಿಚಿತ್ರವಾದ ಕೇಶ ವಿನ್ಯಾಸ ಮಾಡಿಸಿಕೊಂಡು ಬೇರೆಯವರ ಗಮನವನ್ನ ತಮ್ಮತ್ತ ಸೆಳೆಯುತ್ತಾರೆ. ಜಗತ್ತಿನ ಸಾಕಷ್ಟು ಜನ ಕೇಶ ವಿನ್ಯಾಸಕ್ಕೆಂದೇ ಸಾವಿರಾರು ರೂಪಾಯಿಂದ ಹಿಡಿದು ಲಕ್ಷ ಗಟ್ಟಲೆ ಖರ್ಚು ಮಾಡುವ ಜನರಿದ್ದಾರೆ. ಹಾಗಾಗಿ ಇಂದಿಗೆ ಇಂದಿಗೆ ನವ ಕೇಶ ವಿನ್ಯಾಸದ ಉದ್ದಿಮೆಗಳು ಕೂಡ ಸಾಕಷ್ಟು ಮುಂದುವರೆದಿದೆ, ಅದರಲ್ಲೂ ಪಾಶ್ಚಿಮಾತ್ಯ ದೇಶಗಳಲ್ಲಿ ಹೇಳೋದೇ ಬೇಡ ಯಾಕಂದ್ರೆ. ಅಲ್ಲಿ ಕೂದಲಿಗೆ ಹಸಿರು, ನೀಲಿ ಕೆಂಪು ಬಣ್ಣಗಳನ್ನ ಬಳಿದುಕೊಂಡು ಜನ ಸಾಕಷ್ಟು ವಿಚಿತ್ರವಾಗಿ ಬದುಕೋದಕ್ಕೆ ಶುರು ಮಾಡಿದ್ದಾರೆ.

ಹೀಗೆ ಕೇಶ ವಿನ್ಯಾಸದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವವರಿಗೆ ಮತ್ತೊಂದು ದೊಡ್ಡ ಸಮಸ್ಯೆ ಏನು ಅಂದ್ರೆ ಅದು ಕೂದಲು ಉದರುವಿಕೆಯ ಸಮಸ್ಯೆ. ಈ ಸಮಸ್ಯೆಯನ್ನ ಹೋಗಲಾಡಿಸಲು ಹಲವರು ಲಕ್ಷಗಟ್ಟಲೇ ಹಣ ಖರ್ಚು ಮಾಡುವವರ ಸಂಖ್ಯೆ ಏನು ನಮ್ಮಲ್ಲಿ ಕಡಿಮೆ ಇಲ್ಲ.. ಇದಕ್ಕಾಗಿ ಹಲವಾರು ರೀತಿಯಾದ ಕೇಶ ವಿನ್ಯಾಸದ ತೈಲಗಳನ್ನ ಕೂಡ ಬಳಸಲಾಗ್ತಾ ಇದ್ದು ಈ ಬಗ್ಗೆ ಇಂದಿಗೂ ಕೂಡ ಅಧ್ಯಯನ ನಡೆಯುತ್ತಲೇ ಇದೆ. ಆದರೆ ಹೀಗೆ ಕೇಶ ವಿನ್ಯಾಸ ಮಾಡುವವರಿಗೆ ಹಾಗು ಕೇಶ ಉಳಿಸಿಕೊಳ್ಳುವವರಿಗೆ ಕೂದಲಿನಿಂದಲೂ ಗಿನ್ನೀಸ್​ ರೆಕಾರ್ಡ್​ ಮಾಡಬಹುದು ಅನ್ನೋದು ಗೊತ್ತಿಲ್ಲ.

ನೀವು ಕೇಳ್ತಾ ಇರೋ ಈ ಸುದ್ದಿ ಅಕ್ಷರಶಃ ನಿಜ. ಬ್ರಿಟಿಷರ ನಾಡಿನಲ್ಲಿ ಈ ವಿಶಿಷ್ಟ ದಾಖಲೆ ನಿರ್ಮಾಣವಾಗಿದೆ. ಇಂಗ್ಲೇಂಡಿನ ಕೇಂಬ್ರಿಡ್ಜ್​ನಲ್ಲಿರುವ ಬ್ಲಾಕರ್​ ಸ್ಟೂಡಿಯೋ ಸ್ಪಾನ ಮಾಲಿಕ ಹಾಗು ಕೇಶ ವಿನ್ಯಾಸಕಾರ ಸ್ಟೀವನ್​ ವಾರ್ಡನ್​ ನಿರ್ಮಿಸಿರುವ ವಿಶಿಷ್ಟ ವಿಶ್ವ ದಾಖಲೆಯಿದು. ಸ್ಟೀವನ್​ ಹಲವಾರು ವರ್ಷಗಳಿಂದ ಹಲವು ವಿಶ್ವ ದಾಖಲೆಗಳನ್ನ ಗಮನಿಸಿಕೊಂಡುಬಂದಿದ್ದರು. ಈ ವೇಳೆ ಅವರಿಗೆ ತಮ್ಮ ಸಲೂನ್​ನ ಸೇವೆ ಪಡೆಯಲು ಬರುವ ಗ್ರಾಹಕರಿಂದಲೇ ವಿಶ್ವ ದಾಖಲೆ ನಿರ್ಮಾಣ ಮಾಡಬಹುದು ಅನ್ನೋ ಪ್ಲಾನ್​ ಬರುತ್ತದೆ ಈ ಮೂಲಕ ಅವರ ಗ್ರಾಹಕರಿಗೂ ಅವರು ಗೌರವ ಸೂಚಿಸಿದ ಹಾಗಾಗುತ್ತದೆ ಅನ್ನೋದು ಅವರ ಮತ್ತೊಂದು ಯೋಚನೆಯಾಗಿತ್ತು. ಹೀಗಾಗಿ ಅವರು ನಿರ್ಮಿಸೋದಕ್ಕೆ ಹೊರಟಿದ್ದ ವಿಶ್ವ ದಾಖಲೆಯೇ ಜಗತ್ತಿನ ಅತಿ ದೊಡ್ಡ ಚೆಂಡು. ಅದು ಕೂಡ ಮಾನವನ ಕೂದಲಿನಿಂದ ನಿರ್ಮಾಣವಾದ ಚೆಂಡು.

ಈ ಬಗ್ಗೆ ಹಲವು ಬಾರಿ ಚಿಂತಿಸಿದ್ದ ಸ್ಟೀವನ್​ ಬಳಿಕ ಕೆಲವೊಂದು ಪ್ಲಾನ್​ಗಳನ್ನ ರೂಪಿಸುತ್ತಾರೆ. ಆ ಮೂಲಕ ಇದೀಗ ಯಶಸ್ಸನ್ನ ಕೂಡ ಸಾಧಿಸಿದ್ದಾರೆ. ಅದೇನಂದ್ರೆ ಇವರ ಸಲೂನ್​ಗೆ ಬರುವ ಪ್ರತಿಯೊಬ್ಬ ಗ್ರಾಹಕರಿಂದ ಸ್ವಲ್ಪ ಕೇಶವನ್ನ ಈ ದಾಖಲೆಗೆಂದೆ ಪ್ರತ್ಯೇಖವಾಗಿ ಸಂಗ್ರಹಿಸುತ್ತಾರೆ. ಆ ಮೂಲಕ ಒಂದು ಬೃಹತ್​ ಕೇಶದ ಚೆಂಡನ್ನ ನಿರ್ಮಿಸೋದಕ್ಕೆ ಸಿದ್ದತೆಯನ್ನ ನಡೆಸುತ್ತಾರೆ. ಇದಕ್ಕೆ ಪೂರಕವಾಗಿ ಮೊದಲು ಕೇಶದ ಚೆಡಿನ ನಿರ್ಮಾಣಕ್ಕೆ ಅಡಿಪಾಯದ ತೆನಾಗಿ ಕೆಲವೊಂದು ರಾಸಾಯನಿಕಗಳನ್ನ ಬಳಸಿ ಅವುಗಳು ಹಾಳಾಗದಂತೆ ನೋಡಿಕೊಂಡಿದ್ದಾರೆ. ಹೀಗೆ ತಮ್ಮ ಅಂಗಡಿಗೆ ಬರುವ ಗ್ರಾಹಕರು ಕೂಡ ತಮ್ಮ ಕೇಶವನ್ನ ಸ್ಟೀವನ್​ರ ಸಾಧನೆಗೆ ನರವಾಗುವ ನಿಟ್ಟಿನಲ್ಲಿ ನೀಡಿದ್ದಾರೆ. ಬಳಿಕ ಇದೀಗ ಈ ಕೂದಲಿನ ಬೃಹತ್​ ಚೆಂಡು ತಯಾರಾಗಿದ್ದು, ಇದೀಗ ವಿಶ್ವ ದಾಖಲೆಯ ಪಟ್ಟಿಗೆ ಕೂಡ ಯಶಸ್ವಿಯಾಗಿ ಸೇರ್ಪಡೆಯಾಗಿದೆ.

ಸದ್ಯಕ್ಕೆ ಈ ಕೂದಲಿನ ಚೆಂಡಿಗೆ ಸ್ಟೀವನ್​ ಹಾಸ್​ ಅನ್ನೋ ಹೆಸರು ನೀಡಿದ್ದು, ಇದೀ ಈ ಕೂದಲಿನ ಚೆಂಡನ್ನ ಇಂಗ್ಲೆಂಡ್​ನ ಹಲವು ಸ್ಥಳಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದು ಅಲ್ಲಿಗೆ ಬರುವ ಜನರು ಕೂಡ ತಮ್ಮ ಕೂದಲನ್ನ ಈ ಕೇಶದ ಚೆಂಡಿಗೆ ಸೇರಿಸುವಂತೆ ಮನವಿ ಮಾಡುತ್ತಿದ್ದಾರೆ. ಇದರ ಜೊತೆಗೆ ಈ ವಿಚಾರ ತಿಳಿದ ಇಂಗ್ಲೆಂಡಿನ ಬೇರೆ ಬೇರೆ ನಾಗರೀಕರು ಕೂಡ ತಮ್ಮ ಕೂದಲನ್ನ ಈ ತಂಡಕ್ಕೆ ಕಳುಹಿಸುತ್ತಿದ್ದು ಈ ಕೇಶದ ಚೆಂಡಿಗೆ ಅಳವಡಿಸುವಂತೆ ಮನವಿಯನ್ನ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ತನ್ನ ಜೀವನದಲ್ಲಿ ಏನಾದ್ರು ಸಾಧನೆಯನ್ನ ಮಾಡಬೇಕು ಅಂತ ಅಂದು ಕೊಂಡಿದ್ದ ಸ್ಟೀವನ್​ ಈಗ ವಿಶ್ವದ ಬೃಹತ್​ ಕೇಶದ ಚೆಂಡನ್ನ ನಿರ್ಮಿಸಿ ಹೊಸ ದಾಖಲೆಯನ್ನ ಬರೆದಿದ್ದಾರೆ. ಈ ಮೂಲಕ ಕೇಶ ವಿನ್ಯಾಸ ಪ್ರಿಯರ ಮನಸ್ಸನ್ನ ಕೂಡ ಈತ ಗೆದ್ದಿರುವುದರಲ್ಲಿ ಸುಳ್ಳಿಲ್ಲ.

ಲಿಖಿತ್​ ರೈ, ಪವರ್​ ಟಿವಿ

RELATED ARTICLES

Related Articles

TRENDING ARTICLES