Wednesday, January 22, 2025

ಫೆಬ್ರವರಿಯಲ್ಲಿ ಕರುನಾಡಿಗೆ ಬೀಳುತ್ತಾ ಬೀಗ.?

ರಾಜ್ಯದಲ್ಲಿ ದಿನೇ ದಿನೇ ಕೊರೋನಾ ರಣಕೇಕೆ ಹಾಕ್ತಿದೆ.ಅದ್ರಲ್ಲೂ ಬೆಂಗಳೂರಿನಲ್ಲಿ ರಾಕೆಟ್‌ ವೇಗದಲ್ಲಿ ಸೋಂಕು ಹರಡುತ್ತಿದೆ. ಮಕ್ಕಳು, ವೃದ್ಧರು ಎನ್ನದೆ ದಾಳಿ ಮಾಡ್ತಿದೆ.ಸೋಂಕಿನ ಶರವೇಗ ನೋಡಿದರೆ ರಾಜಧಾನಿ ಸೇರಿದಂತೆ ರಾಜ್ಯಕ್ಕೆ ಬೀಗ ಬೀಳೋದು ಗ್ಯಾರೆಂಟಿ ಎನ್ನಲಾಗ್ತಿದೆ.

ರಾಜಧಾನಿ ಸೇರಿದಂತೆ ರಾಜ್ಯದೆಲ್ಲೆಡೆ ಕೊರೋನಾ ರೌದ್ರನರ್ತನ ಮಾಡ್ತಿದೆ.ರಾಜ್ಯದಲ್ಲಿ ಸೋಂಕಿತರ ಸಂಖ್ಯೆ25 ಸಾವಿರ ಗಡಿ ದಾಟಿದೆ.ನಿತ್ಯ ಎಷ್ಟು ಕೇಸ್ ಬರುತ್ತೋ ಅಂತ ಊಹೆ ಮಾಡೋಕೆ ಆಗ್ತಿಲ್ಲ. ನೈಟ್ ಕರ್ಫ್ಯೂ, ವೀಕೆಂಟ್ ಕರ್ಫ್ಯೂ ,ಹಾಗೂ ಹೋಟೆಲ್, ಕ್ಲಬ್, ಬಾರ್, ಥಿಯೇಟರ್‌ನಲ್ಲಿ 50-50 ರೂಲ್ಸ್ ಜಾರಿ ಮಾಡಿದರೂ ವೈರಸ್ ನಿಯಂತ್ರಣಕ್ಕೆ ಬರುತ್ತಿಲ್ಲ. ಇದಕ್ಕೆ ಅಂತ ಸರ್ಕಾರ ಕೊನೆಯ ಅಸ್ತ್ರ ಲಾಕ್‌ಡೌನ್ ಫ್ಲ್ಯಾನ್ ಮಾಡ್ತಿದೆ.ಕೊರೋನಾ ಶರವೇಗಕ್ಕೆ ಬ್ರೇಕ್ ಹಾಕಲು ಲಾಕ್‌ಡೌನ್ ಬ್ರಹ್ಮಾಸ್ತ್ರ ಪ್ರಯೋಗಿಸಲು ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.

ಲಾಕ್‌ಡೌನ್ ಪದ ಕೇಳಿದರೆ ರಾಜ್ಯದ ಜನರು ಒಂದ್ ಕ್ಷಣ ಶಾಕ್ ಆಗುತ್ತಾರೆ.ಲಾಕ್‌ಡೌನ್ ಮಾಡಿದರೆ ಒಪ್ಪೊತ್ತಿನ ಊಟಕ್ಕೂ ಪರದಾಟುವಂಥಾ ಸ್ಥಿತಿ ಎದುರಾಗಲಿದೆ.ವ್ಯಾಪಾರ ವಹಿವಾಟು ಸಂಪೂರ್ಣ ಸ್ತಬ್ಧವಾಗಲಿದೆ.ಹೀಗಾಗಿ ಲಾಕ್‌ಡೌನ್ ಬೇಡವೇ ಬೇಡ ಅಂತ ಜನ ಹೇಳ್ತಿದ್ದಾರೆ.ಆದ್ರೆ,ಸರ್ಕಾರ ಬೇರೆ ದಾರಿ ಇಲ್ಲದೆ ಲಾಕ್‌ಡೌನ್ ಅಸ್ತ್ರ ಪ್ರಯೋಗಿಸಲು ಫ್ಲ್ಯಾನ್ ರೆಡಿ ಮಾಡಿದೆ.ಸರ್ಕಾರದ ಫ್ಲ್ಯಾನ್‌ಗೆ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಜನವರಿ ಒಂದರಿಂದ ರಾಕೆಟ್‌ ವೇಗದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ.ಆದ್ರೆ,ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೇನೋ ಕಡಿಮೆ ಇದೆ.ಶೇ.10ರಷ್ಟು ಜನ ಮಾತ್ರ ಆಸ್ಪತ್ರೆಗೆ ಸೇರುತ್ತಿದ್ದಾರೆ. ಆದ್ರೆ, ಫೆಬ್ರವರಿಯಲ್ಲಿ ನಿತ್ಯ 1 ಲಕ್ಷ ಕೇಸ್ ಬರುವ ಸಾಧ್ಯತೆ ಇರುವುದರಿಂದ ಬೆಡ್, ಟ್ರೀಟ್ಮೆಂಟ್ ಕೊರತೆ ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಫೆಬ್ರವರಿಯಲ್ಲಿ ಕರುನಾಡಿಗೆ ಬೀಗ ಜಡಿಯಲು ಸರ್ಕಾರ ಸಿದ್ದತೆ ನಡೆಸಿದೆ.

ನಗರದಲ್ಲಿ ದಿನೇ ದಿನೇ ಮಕ್ಕಳ ಮೇಲೆ ಕೊರೋನಾ ದಾಳಿ ಮಾಡ್ತಿದೆ. ಹೀಗಾಗಿ ಲಾಕ್‌ಡೌನ್ ಬಿಟ್ಟು ಪರ್ಯಾಯ ಮಾರ್ಗ ಸರ್ಕಾರದ ಮುಂದೆ ಇಲ್ಲ. ಹೀಗಾಗಿ ಸರ್ಕಾರ ಲಾಕ್‌ಡೌನ್ ಜಪ ಮಾಡ್ತಿದೆ.ಒಟ್ಟಿನಲ್ಲಿ ಕಂಟ್ರೋಲ್ ತಪ್ಪಿರುವ ಕೊರೋನಾ ನಾಗಾಲೋಟಕ್ಕೆ ಬ್ರೇಕ್ ಹಾಕಲು ಕೊನೆಯ ಅಸ್ತ್ರ ಲಾಕ್‌ಡೌನ್‌ಗೆ ಸಿದ್ದತೆ ಮಾಡಿಕೊಳ್ಳುತ್ತಿದೆ.ಹೀಗಾಗಿ ರಾಜ್ಯದ ಮಂದಿ ಮತ್ತೊಂದು ಲಾಕ್‌ಡೌನ್‌ಗೆ ಸಿದ್ದವಾಗಬೇಕಿದೆ ಎನ್ನಲಾಗ್ತಿದೆ.

RELATED ARTICLES

Related Articles

TRENDING ARTICLES