Monday, December 23, 2024

ದೆವ್ವ ಅಂತಲೇ ಕರೀರಿ : ಶ್ರುತಿ ಹಾಸನ್

ಶ್ರುತಿ ಹಾಸನ್ ಮನಸಿನ ಮಾತುಗಳನ್ನು ಬೋಲ್ಡ್ ಆಗಿ ಹೇಳುವುದಕ್ಕೆ ಹೆಸರುವಾಸಿ. ಅವರು ವೃತ್ತಿಪರವಾಗಿ ಬಹಳ ಮುಂದೆ ಬಂದಿದ್ದಾರೆ. ಇಂದು ಚಿತ್ರರಂಗದಲ್ಲಿ ಗಟ್ಟಿಯಾಗಿ ನಿಲ್ಲಲು ಬಹಳಷ್ಟು ಕಷ್ಟಪಟ್ಟು ಸವಾಲುಗಳನ್ನುತಗೆದುಕೊಂಡಿದ್ದಾರೆ ಹಾಗೂ ಸವಾಲುಗಳನ್ನು ಎದುರಿಸಲು ಇಷ್ಟಪಡುತ್ತೇನೆ.

ನಾನು ಸ್ವಲ್ಪ ಸಮಯದವರೆಗೆ ಸಿನಿಮಾಗಳಿಂದ ವಿರಾಮ ತಗೆದುಕೊಂಡು ನನ್ನ ಸಂಗೀತದ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸಿದಾಗ, ಲಂಡನ್‌ನಲ್ಲಿ ಕಥೆಗಳನ್ನು ಬರೆಯಲು ಪ್ರಾರಂಭಿಸಿದೆ. ನಾನು ಮತ್ತೆ ಅದೇ ಕಡೆಗೆ ಹೋಗಲು ನಿರ್ಧರಿಸಿದೆ ಎಂದರು ನಟಿ. ಅಲ್ಲದೇ ಎಲ್ಲರೂ ನನ್ನನ್ನು ರಕ್ತಪಿಶಾಚಿಯಂತೆ ಕಾಣುತ್ತಾಳೆ, ಭಯಾನಕ/ದೆವ್ವ ಎಂದೆಲ್ಲಾ ಹೇಳುತ್ತಾರೆ. ಆದರೂ ಪರವಾಗಿಲ್ಲ ನೀವು ನನ್ನನ್ನು ಏನು ಬೇಕಾದರೂ ಕರೆಯಬಹುದು ಎಂಬಂತೆ ನಾನು ನಾನಾಗಿ ಇದ್ದೇ.

ನೀವು ನನ್ನನ್ನು ದೆವ್ವ ಎಂದು ಹೇಳುತ್ತಿರಬಹುದು. ಆದರೆ ಅದು ನನ್ನ ಸೌಂದರ್ಯ ಮತ್ತು ಅದರಿಂದ ನನಗೆ ಶಕ್ತಿವಾಗಿದೆ. ಫ್ಯಾಷನ್‌ಗೆ ನಾನು ಸಹಜವಾಗಿ ಸ್ಫೂರ್ತಿ ಪಡೆದಿದ್ದೇನೆ. ನಾನು ಕೇಳುತ್ತಾ ಬೆಳೆದ ಸಂಗೀತ, ನಾನು ಓದಿದ ಸಾಹಿತ್ಯ, ಕಾದಂಬರಿಗಳು ಮತ್ತು ನಾನು ಓದಿ ಬೆಳೆದ ಎಲ್ಲವನ್ನೂ ಆ ಪ್ರಪಂಚದಿಂದ ಫ್ಯಾಷನ್‌ಗೆ ಜೋಡಿಸಿದ್ದೇನೆ.

ನಾನು ಹೆವಿ ಮೆಟಲ್ ಅನ್ನು ಪ್ರೀತಿಸುತ್ತೇನೆ ಹಾಗೂ ನಾನು ಯಾವಾಗಲೂ ಈ ರೀತಿಯ ಡ್ರೆಸ್ಸಿಂಗ್ ಅನ್ನು ಇಷ್ಟಪಡುತ್ತೇನೆ . ಯಾವಾಗಲೂ ಆರಾಮದಾಯಕವಾದ ಡ್ರೆಸ್ಸಿಂಗ್ ಅನ್ನು ಇಷ್ಟಪಡುತ್ತೇನೆ. ವಿಭಿನ್ನವಾಗಿರುವುದು ನಮ್ಮನ್ನು ವಿಶೇಷವಾಗಿಸುತ್ತದೆ. ಅಲ್ಲದೇ ನನಗೆ 2 ಸೈಡ್ ಫೇಸ್​​ ಇದೆ. ಒಂದನ್ನು ನಾನು ಚಿತ್ರದಲ್ಲಿ ನಟಿಸುವಾಗ ಪಾತ್ರಗಳ ಮೂಲಕ ಮಾಡಿ ತೋರಿಸುತ್ತೇನೆ. ಉಳಿದ ಸಮಯದಲ್ಲಿ ನಾನು ಶೃತಿಯಾಗಲು ಬಯಸುತ್ತೇನೆಂದು ಎಂದಿದ್ದಾರೆ.

RELATED ARTICLES

Related Articles

TRENDING ARTICLES