Monday, December 23, 2024

ಶುಭಾ ಪೂಂಜಾ ಅಭಿಮಾನಿಗಳಿಗೆ ಹೆದರಿಸುತ್ತಾರಾ?

ಬೆಂಗಳೂರು : ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಸ್ಪರ್ಧಿಯಾಗಿ ಶುಭಾ ಪೂಂಜಾ ಅವರು ಹೆಚ್ಚಿನ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ. ನಿಜಜೀವನದಲ್ಲಿ ಅವರು ಮಕ್ಕಳಂತೆ ಇರುತ್ತಾರೆ ಎನ್ನುವ ವಿಚಾರ ಅವರ ಪ್ರತಿಯೊಬ್ಬ ಅಭಿಮಾನಿಗಳಿಗೆ ತಿಳಿದಿದೆ.

ಶುಭಾ ಮಾಡುತ್ತಿದ್ದ ಚೇಷ್ಟೆಗಳು ಒಂದೆರಡಲ್ಲ. ಬಿಗ್​ ಬಾಸ್​ ಮನೆಯಲ್ಲಿ ಒಂದು ಕಡೆ ಅಡಗಿ ಕುಳಿತುಕೊಂಡು ಇತರರನ್ನು ಹೆದರಿಸೋಕೆ ಅವರು ಪ್ರಯತ್ನಿಸುತ್ತಿದ್ದರು. ಆದರೆ, ಯಾರೊಬ್ಬರೂ ಭಯ ಬಿದ್ದಿರಲಿಲ್ಲ. ಈಗ ಅವರು ಸಿನಿಮಾ ಮೂಲಕ ಪ್ರೇಕ್ಷಕರನ್ನು ಭಯಬೀಳಿಸೋಕೆ ಮುಂದಾಗಿದ್ದಾರೆ.

ಇದಕ್ಕೆ ಕಾರಣವಾಗಿದ್ದು ‘ಅಂಬುಜಾ’ ಸಿನಿಮಾ, ಅಂಬುಜಾ’ ಸಿನಿಮಾ ಪಕ್ಕಾ ಹಾರರ್​ ಶೈಲಿಯ ಸಿನಿಮಾ. ಈ ಚಿತ್ರದಲ್ಲಿ ರಿಪೋರ್ಟರ್​ ಪಾತ್ರವನ್ನು ಮಾಡುತ್ತಿದ್ದಾರೆ ಶುಭಾ ಪೂಂಜಾ. ಹಾಗಾದರೆ ಅವರು ಪ್ರೇಕ್ಷಕರನ್ನು ಹೆದರಿಸುತ್ತಾರಾ? ಆ ಪ್ರಶ್ನೆಗೆ ಅವರು ಉತ್ತರ ನೀಡಿಲ್ಲ. ‘ನಾನು ನಟಿಸುತ್ತಿರುವ ಹೊಸ ಸಿನಿಮಾ ‘ಅಂಬುಜಾ’. ‘ಇದೊಂದು ಪಕ್ಕಾ ಹಾರರ್​ ಶೈಲಿಯ ಸಿನಿಮಾ.

ಈ ಚಿತ್ರದಲ್ಲಿ ನನ್ನದು ರಿಪೋರ್ಟರ್​ ಪಾತ್ರ. ನಾನು ಸಿನಿಮಾದಲ್ಲಿ ಹೆದರಿಸುತ್ತೇನೋ ಅಥವಾ ಇಲ್ಲವೋ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು. ಬಿಗ್​ ಬಾಸ್ ಮನೆಯಲ್ಲಿ ಹೆದರಿಸೋಕೆ ಪ್ರಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ’ ಎಂದಿದ್ದಾರೆ  ನಟಿ ಶುಭಾ ಪೂಂಜ.

RELATED ARTICLES

Related Articles

TRENDING ARTICLES