Monday, December 23, 2024

ಕ್ರಿಕೆಟಿಗ ಜಡೇಜಾ ಪುಷ್ಪಾವತಾರ!

ಅಲ್ಲು ಅರ್ಜುನ್ ‘ಪುಷ್ಪ: ದಿ ರೈಸ್’ ಯಶಸ್ಸಿನಲ್ಲಿದ್ದಾರೆ. ಬಾಕ್ಸಾಫೀಸಲ್ಲಿ ಧೂಳೆಬ್ಬಿಸಿರುವ ಚಿತ್ರ ಹಿಂದಿಯಲ್ಲಿ ಸುಮಾರು 80 ಕೋಟಿಗೂ ಅಧಿಕ ಮೊತ್ತ ಬಾಚಿಕೊಂಡಿದೆ. ‘ಪುಷ್ಪ’ದ ಒಟ್ಟಾರೆ ಕಲೆಕ್ಷನ್ 325 ಕೋಟಿ ದಾಟಿದೆ.

ಇದೇ ಸಂತಸದಲ್ಲಿ ‘ಪುಷ್ಪ’ದ ಎರಡನೇ ಭಾಗಕ್ಕೆ ಚಿತ್ರತಂಡ ತಯಾರಿ ನಡೆಸಿದೆ. ಏಪ್ರಿಲ್​ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂಬ ಸುದ್ದಿಯೂ ಚಿತ್ರತಂಡದಿಂದ ಬಂದಿದೆ. ಇದೀಗ ಅಖಾಡಕ್ಕೆ ಹೊಸ ‘ಪುಷ್ಪ’ ಗ್ರ್ಯಾಂಡ್ ಎಂಟ್ರಿ ನೀಡಿದ್ದಾನೆ.

ಭಾರತ ಕ್ರಿಕೆಟ್ ತಂಡದ ತಾರಾ ಆಟಗಾರ ರವೀಂದ್ರ ಜಡೇಜಾ ‘ಪುಷ್ಪ’ ಲುಕ್ಕಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ. ಇದಕ್ಕೆ ಸ್ವತಃ ಅಲ್ಲು ಅರ್ಜುನ್ ಆಶ್ಚರ್ಯ ಹೊರಹಾಕಿದ್ದಾರೆ. ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟಿವ್ ಆಗಿರುತ್ತಾರೆ.

ಇದೀಗ ಸ್ವತಃ ಅಲ್ಲು ಅರ್ಜುನ್ ಪುಷ್ಪ ಚಿತ್ರದ ಗೆಟಪ್​​ನ ಅನುಕರಿಸುವ ಪ್ರಯತ್ನ ಮಾಡಿ ಇನ್ಸ್ಟಾಗ್ರಾಂನಲ್ಲಿ ಚಿತ್ರ ಹಂಚಿಕೊಂಡಿದ್ದಾರೆ ಕ್ರಿಕೆಟಿಗ ಜಡೇಜಾ ಇದನ್ನು ಅಲ್ಲು ಅರ್ಜುನ್ ಕೂಡ ಹಂಚಿಕೊಂಡಿದ್ದಾರೆ. ಖಡಕ್ ಲುಕ್ ಶೇರ್ ಮಾಡಿರುವ ಜಡೇಜಾ, ಫ್ಯಾನ್ಸ್​​ಗೆ ಎಚ್ಚರಿಕೆ ನೀಡುವುದನ್ನು ಮರೆತಿಲ್ಲ. ‘‘ಪುಷ್ಪ ಅಂದರೆ ಹೂವು ಎಂದುಕೊಂಡಿದ್ದೀರಾ? ಫೈರ್ ಎಂದು ಕ್ಯಾಪ್ಶನ್ ನೀಡಿದ್ದಾರೆ.

RELATED ARTICLES

Related Articles

TRENDING ARTICLES