Wednesday, January 22, 2025

ಆನ್​ಲೈನ್​ ಗೇಮ್​ಗೆ 11ವರ್ಷದ ಬಾಲಕ ಬಲಿ

ಮಧ್ಯಪ್ರದೇಶ : ಫ್ರೀ ಫೈರ್​ ಎಂಬ ಆನ್‌ಲೈನ್ ಗೇಮ್​​ನಿಂದಾಗಿ ಐದನೇ ತರಗತಿ ಓದುತ್ತಿರುವ ಸೂರ್ಯಾಂಶು ಅನ್ನೊ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಕೇವಲ 11 ವರ್ಷದ ಸೂರ್ಯಾಂಶ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ನರೋತ್ತಮ್ ಮಿಶ್ರಾ ಆನ್‌ಲೈನ್ ಆಟಗಳು ಗಂಭೀರ ವಿಷಯವಾಗಿವೆ. ಇವುಗಳಿಗೆ ಕಡಿವಾಣ ಹಾಕಲು ನಾವು ರಾಜ್ಯದಲ್ಲಿ ಆನ್‌ಲೈನ್ ಆಟಗಳ ಕಾಯ್ದೆಯನ್ನ ತರುತ್ತಿದ್ದೇವೆ. ಇದರ ಕರಡು ಸಿದ್ಧವಾಗಿದೆ.

ಅತಿ ಶೀಘ್ರದಲ್ಲಿ ಅದು ಸಾಕಾರಗೊಳ್ಳಲಿದೆ ಎಂದಿದ್ದಾರೆ.ಅವಧಪುರಿಯ ಸೇಂಟ್ ಕ್ಸೇವಿಯರ್ ಶಾಲೆಯಲ್ಲಿ 5ನೇ ತರಗತಿಯ ವಿದ್ಯಾರ್ಥಿಯಾಗಿದ್ದ ಸೂರ್ಯಾಂಶು, ಬುಧವಾರ ಮಧ್ಯಾಹ್ನ ಸೋದರ ಸಂಬಂಧಿ ಆಯುಷ್ (21) ಜತೆ ಎರಡನೇ ಮಹಡಿಯ ಕೊಠಡಿಯಲ್ಲಿ ಕುಳಿತು ಟಿವಿಯಲ್ಲಿ ಸಿನಿಮಾ ನೋಡುತ್ತಿದ್ದ.

ನಂತ್ರ ಆಯುಷ್ ಕೆಳಗಿಳಿದು ಬಂದಿದ್ದು, ಸ್ವಲ್ಪ ಸಮಯದ ನಂತರ ಮತ್ತೆ ಮಹಡಿಯ ಮೇಲೆ ಹೋಗಿದ್ದಾನೆ. ಆಗ ಸೂರ್ಯಾಂಶು ನೇಣು ಬಿಗಿದು ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಸೂರ್ಯಾಂಶು ಆನ್‌ಲೈನ್‌ ಗೇಮ್‌ಗಳ ವ್ಯಸನಿಯಾಗಿದ್ದು, ಸಿಕ್ಕಾಪಟ್ಟೆ ಫ್ರೀ ಫೈರ್ ಗೇಮ್ ಆಡುತ್ತಿದ್ದ ಎಂದು ಪೋಷಕರು ಹೇಳಿದ್ದಾರೆ.

RELATED ARTICLES

Related Articles

TRENDING ARTICLES