Thursday, December 19, 2024

ಸಮನ್ವಿಗಾಗಿ ಸಂಪಿಗೆ ಗಿಡ ನೆಟ್ಟು ತಾರಾ ಸಂತಾಪ

ಬೆಂಗಳೂರು : ‘ನನ್ನಮ್ಮ ಸೂಪರ್​ ಸ್ಟಾರ್​’ ರಿಯಾಲಿಟಿ ಶೋ ಖ್ಯಾತಿಯ ಪ್ರತಿಭಾವಂತ ಬಾಲಕಿ ಸಮನ್ವಿ ನಿನ್ನೆ ಅಪಘಾತದಲ್ಲಿ ಮೃತಪಟ್ಟಿದ್ದಾಳೆ.ಬಾಲ ಪ್ರತಿಭೆ ಸಮನ್ವಿಗೆ ನಟಿ ತಾರಾ ಅನುರಾಧಾ ಸಂತಾಪ ಸೂಚಿಸಿದ್ದಾರೆ.

ಸಮನ್ವಿ ಹೆಸರಲ್ಲಿ ಸಂಪಿಗೆ ಗಿಡ ನೆಟ್ಟು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಚಿಕ್ಕಮಗಳೂರು ಅರಣ್ಯ ಅಭಿವೃದ್ಧಿ ನಿಗಮದ ಆವರಣದಲ್ಲಿ ಗಿಡ ನೆಟ್ಟು ಸಂತಾಪ ಸೂಚಿಸಿದ್ದಾರೆ. ಸಮನ್ವಿ ಇನ್ನಿಲ್ಲ ಅನ್ನೋ ಸುದ್ದಿ ಕೇಳಿ ನಾನು ಶಾಕ್​​ಗೆ ಒಳಗಾದೆ. ಬಾಲಕಿಯ ಸಾವು ನ್ಯಾಯವಲ್ಲ, ನನಗೆ ತುಂಬಾ ದುಃಖ ಆಗ್ತಿದೆ.

ಸಮನ್ವಿ ಒಂದು ರೀತಿಯ ಸ್ಪೆಷಲ್ ಮಗು, ನಾನು ಸಂಪಿಗೆ ಗಿಡವನ್ನು ನೆಟ್ಟು ಸಮನ್ವಿಯನ್ನ ಜೀವಂತವಾಗಿರಿಸಿದ್ದು, ಆ ಸಂಪಿಗೆ ಗಿಡದಂತೆ ನಳನಳಿಸಿ, ಆಕೆ ಜೀವಂತವಾಗಿದ್ದಾಳೆ. ವಿ ರಿಯಲಿ ಲವ್ ಯೂ ಸಮನ್ವಿ, ಬದುಕಿನಲ್ಲಿ ಈ ರೀತಿ ದುರಂತ ನಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ನಟಿ ತಾರಾ  ಅವರು ಸಂತಾಪ ಸೂಚಿಸಿದರು.

RELATED ARTICLES

Related Articles

TRENDING ARTICLES